ಸುರಪುರ:ನಗರದ ದರಬಾರ ಶಾಲೆಯಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಸಭೆ ಹಾಗು ಗುರುತಿನಿ ಚೀಟಿ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘದ ಗೌರವಾಧ್ಯಕ್ಷ ಸಿ.ಎನ್ ಭಂಡಾರೆ ಮಾತನಾಡಿ,ನಿವೃತ್ತ ನೌಕರರು ಇಳಿವಯಸ್ಸಿನಲ್ಲಿರುತ್ತಾರೆ. ಅವರ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಅದರಂತೆ ಶಾಸಕ ರಾಜುಗೌಡ ಅವರು ಕೂಡ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.ಬೆಂಗಳೂರಿನಲ್ಲಿ ರುಕ್ಮಾಪುರ ನಿವಾಸಿಗಳ ಸಂಘವನ್ನು ಕಟ್ಟಿಕೊಂಡು ನಮ್ಮ ಭಾಗದವರ ಸೇವೆಯನ್ನು ಮಾಡುತ್ತಿದ್ದೇವೆ,ಅದರಂತೆ ನಮ್ಮ ಎಲ್ಲಾ ನಿವೃತ್ತ ನೌಕರರ ಸಂಘದ ಮೂಲಕ ಎಲ್ಲರ ಬೇಡಿಕೆಗಳನ್ನು ಈಡೇರಿಸಲು ನನ್ನಿಂದಾದ ಸಹಾಯವನ್ನು ಮಾಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಸದಾಶಿವ ಆರ್. ಮಾತನಾಡಿ,ತಾವೆಲ್ಲರು ಬೇಡಿಕೆ ಸಲ್ಲಿಸಿದಂತೆ ಕೆಲವೆ ದಿನಗಳಲ್ಲಿ ಎಲ್ಲಾ ಹಿರಿಯ ನಾಗರಿಕರಿಗಾಗಿ ಶಾಖೆಯಲ್ಲಿ ಪ್ರತ್ಯೇಕ ಕೌಂಟರ್ ಆರಂಭಿಸುವುದಾಗಿ ತಿಳಿಸಿದರು.ಅಲ್ಲದೆ ಮುಂದಿನ ದಿನಗಳಲ್ಲಿ ತಮ್ಮೆಲ್ಲರಿಗಾಗಿ ನಮ್ಮ ಶಾಖೆಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಹಾಗು ತಾವುಗಳು ವ್ಯಾಪಾರ ಮಾಡುವುದಾದರೆ ಬ್ಯಾಂಕಿನಿಂದ ಸಾಲ ಸೌಲಭ್ಯವನ್ನು ನೀಡುವುದಾಗಿ ತಿಳಿಸಿದರು. ಅಲ್ಲದೆ,ತಮಗೆ ಯಾರಿಯಾಗದರು ನಮ್ಮ ಬ್ಯಾಂಕ್ ವ್ಯವಹಾರದಲ್ಲಿ ಸಮಸ್ಯೆಯಾದಲ್ಲಿ ನೇರವಾಗಿ ಭೇಟಿ ಮಾಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಕಟ್ಟಿಮನಿ,ಡಾ:ವಿ.ಎಲ್ ಚೌಧರಿ ಹಾಗು ನಿವೃತ್ತ ಉಪನ್ಯಾಸಕರಾದ ಎಸ್.ಡಿ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಶಂಭನಗೌಡ ಪಾಟೀಲ್ ಅವರ ಸ್ಥಾನಕ್ಕೆ ಸಂಘದ ಗೌರವಾಧ್ಯಕ್ಷರನ್ನಾಗಿ ಡಾ:ವಿ.ಎಲ್ ಚೌಧರಿಯವರನ್ನು ಹಾಗು ಸಾಹಿತಿ ಬೀರಣ್ಣ ಬಿ.ಕೆ ಅವರ ಸ್ಥಾನಕ್ಕೆ ಕಾರ್ಯದರ್ಶಿಯನ್ನಾಗಿ ಗದ್ದೆಪ್ಪ ರೊಡಲಬಂಡಿಯವರನ್ನು ನೇಮಕಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಎಲ್ಲರಿಗೂ ನಿವೃತ್ತ ನೌಕರರ ಸಂಘದ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಯಿತು.ವೇದಿಕೆ ಮೇಲೆ ಉಪಾಧ್ಯಕ್ಷ ರಾಜಾ ಅಮರಪ್ಪ ನಾಯಕ ಇದ್ದರು ಪ್ರಭುದೇವ ಕಲ್ಲೂರಮಠ,ಬಸವರಾಜ ದೇಶಮುಖ,ವೆಂಕೋಬಾಚಾರ್ಯ ಜೋಷಿ,ರಾಮಣ್ಣ ಚಾರು ಇದ್ದರು.ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಅನೇಕ ಜನ ನಿವೃತ್ತ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.