ಪರಿಸರವನ್ನು ಸ್ವಚ್ಛತೆ ಕಾಪಾಡಿಕೊಳ್ಳುವ ಹೊಣೆಗಾರಿಕೆ ಎಲ್ಲರದ್ದು; ಮಲ್ಲೇಶಿ

0
46

ಶಹಾಬಾದ: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆ ಕಾಪಾಡಿಕೊಳ್ಳುವ ಹೊಣೆಗಾರಿಕೆ ಎಲ್ಲರದಾಗಿದ್ದು, ಮೂಲಕ ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳೆಸುವಲ್ಲಿ ಸಾರ್ವಜನಿಕರು ಮುಂದಾಗಬೇಕೆಂದು ನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾದೀಶ ಮಲ್ಲೇಶಿ ಪರಶುರಾಮ ಮೋಹಿತೆ ಹೇಳಿದರು.

ಅವರು ರವಿವಾರ ನಗರಸಭೆಯ ಸಭಾಂಗಣದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ಚಿತ್ತಾಪೂರ ನ್ಯಾಯಾವಾದಿಗಳ ಸಂಘ ಹಾಗೂ ನಗರಸಭೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಆಹಾರ ಮತ್ತು ನೀರು ಬಿಟ್ಟರೆ ಕೆಲವು ದಿನಗಳವರೆಗೆ ಬದುಕಬಹುದು.ಆದರೆ ಗಾಳಿಯಿಲ್ಲದೇ ಬದುಕಲು ಅಸಾಧ್ಯ.ಆ ಗಾಳಿಯನ್ನು ನೀಡುವ ಗಿಡಮರಗಳನ್ನು ಬೆಳೆಸುವಲ್ಲಿ ಮನುಷ್ಯರಾದ ನಾವುಗಳು ನಿರಾಸಕ್ತಿ ತೋರುತ್ತಿದ್ದೆವೆ. ಕೋವಿಡ್-೧೯ ಸಂದರ್ಭದಲ್ಲಿ ಕೃತಕ ಆಮ್ಲಜನಕ ಪಡೆಯಲು ಹರಸಾಹಸ ಪಡೆಯಬೇಕಾದ ಘಳಿಗೆ ಎದುರಾಗಿತ್ತು ಎಂಬುದನ್ನು ಮನನ ಮಾಡಿಕೊಳ್ಳಬೇಕು.ಜಗತ್ತಿನ ಎಲ್ಲಾ ಜೀವಿಗಳಿಗೂ ಆಮ್ಲಜನಕ ನೀಡುವ ಗಿಡ-ಮರಗಳನ್ನು ಬೆಳೆಸುವ ಮೂಲಕ ನಗರವನೆಲ್ಲಾ ಹಸಿರಾಗಿಸಬೇಕಿದೆ.ಅಲ್ಲದೇ ನಗರಸಭೆಯ ಪೌರಕಾರ್ಮಿಕರು ಬಂದಾಗ ಅವರಿಗೆ ಹಸಿಕಸ-ಒಣಕಸ ವಿಂಗಡಿಸಿ ನೀಡಿದರೇ ಅವರಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪಿಐ ಸಂತೋಷ.ಡಿ.ಹಳ್ಳೂರ್ ಮಾತನಾಡಿ,ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಮರೆತು ಕಸವನ್ನು ಎಲ್ಲೆಂದರಲ್ಲಿ ಎಸೆದು ನಗರವನ್ನು ಮಾಲಿನ್ಯವನ್ನಾಗಿ ಮಾಡುತ್ತಿದ್ದಾರೆ.ಈ ಬಗ್ಗೆ ಅರಿವು ಮೂಡಿಸಿಕೊಂಡು ತಮ್ಮ ವರ್ತನೆಯಲ್ಲಿ ಬದಲಾವಣೆಯಾಗಬೇಕು ಎಂದು ಹೇಳಿದರು.
ನ್ಯಾಯವಾದಿ ರಘುವೀರಸಿಂಗ ಠಾಕೂರ ಮಾತನಾಡಿ,ಜನನ-ಮರಣ ಎಂಬುದು ಜೀವನದ ಪ್ರಮುಖ ಘಟ್ಟಗಳು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಜನನ ಮತ್ತು ಮರಣಕ್ಕೆ ಸಂಬಂಧಪಟ್ಟ ವಿವರಗಳ ನೊಂದಣಿ ಮಾಡುವುದು ಅತ್ಯವಶ್ಯಕವಾದ ಪ್ರಕ್ರಿಯೆಯಾಗಿದೆ.

ಶಾಲೆಗೆ,ಸರಕಾರದ ಯೋಜನೆ, ಲೈಸನ್ಸ್, ಪಾಸ್‌ಪೊರ್ಟ ಸೇವೆಗೆ ಜನನ ಪ್ರಮಾಣಪತ್ರ ಮತ್ತು ಮರಣ ಹೊಂದಿದ ವ್ಯಕ್ತಿಯ ಆಸ್ತಿ,ಹಣ ವಾರಸುದಾರರಿಗೆ ನೀಡಲು ಮರಣ ಪ್ರಮಾಣ ಪತ್ರ ಅವಶ್ಯಕತೆಯಿರುತ್ತದೆ.ಅದಕ್ಕಿಂತ ಮುಖ್ಯವಾಗಿ ಸರ್ಕಾರಕ್ಕೆ ಸರಿಯಾದ ಅಂಕಿ-ಅಂಶಗಳು ನೀಡಬೇಕಾಗಿರುತ್ತದೆ ಎಂದು ಹೇಳಿದರು.

ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ಸ್ವಚ್ಛತೆ ಎಂಬುದು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು.ನಗರದ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರು ಬಡಾವಣೆಯಲ್ಲಿ ಬಂದಾಗ ಜನರು ಕಸದವರು ಬಂದಿದ್ದಾರೆ ಎಂದು ಹೇಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ.ಆದರೆ ಇವರು ಕಸದವರಲ್ಲ. ನಿಜವಾಗಿಯೂ ನೀವು ಹಾಕಿದ ಕಸವನ್ನು ಗುಡಿಸಿ ಸ್ವಚ್ಛತೆ ಮಾಡುವ ಕಾರ್ಮಿಕರು.ಅವರಿಂದಲೇ ಇಂದು ನಗರ ಸ್ವಚ್ಛತೆ ಕಾಣುತ್ತಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಸಿಂಧೆ ವೇದಿಕೆಯ ಮೇಲಿದ್ದರು.ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ನ್ಯಾಯವಾದಿಗಳಾದ ಬಾಬುರಾವ ಕೋಬಾಳ, ರಮೇಶ ರಾಠೋಡ, ಅತುಲ್ ಯಲಶೆಟ್ಟಿ, ಉಮೇಶ ಪೋಚ್ಚಟ್ಟಿ, ನಾಗೇಶ ಧನ್ನೇಕರ್, ತಿಮ್ಮಯ್ಯ ಮಾನೆ, ಶರಣು ಭಂಡಾರಿ, ಎಇಇ ಮುಜಾಮಿಲ್ ಅಲಂ, ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ,ಶರಣು, ರಘುನಾಥ ನರಸಾಳೆ, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಕಚೇರಿ ವ್ಯವಸ್ಥಾಪಕ ಶರಣಗೌಡ ಪಾಟೀಲ, ಅನೀಲಕುಮಾರ ಹೊನಗುಂಟಿ, ಪ್ರಕಾಶ ಸೇರಿದಂತೆ ಅನೇಕರು ಇದ್ದರು.

ನಂತರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿವರ ಪುಣ್ಯತಿಥಿ ನಿಮಿತ್ತ ಅವರಿಗೆ ಶ್ರದ್ಧಾಂಜಲಿ ಸೂಚಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here