ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ: ಡಾ. ಸರ್ದಾರ ರಾಯಪ್ಪ

0
21

ಕಲಬುರಗಿ: ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ತಾವು ಕೊಟ್ಟ ಬರವಸೆಯಂತೆ ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರಿಂದ ಕರ್ನಾಟಕ ರಾಜ್ಯ ತಳವಾರ ಎಸ್.ಟಿ ಹೋರಾಟ ಸಮಿತಿಯ ಅಧ್ಯಕ್ಷರಾದ ಡಾ. ಸರ್ದಾರ ರಾಯಪ್ಪ ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರದ ಆದೇಶದಂತೆ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಪೂಜ್ಯ ಕೊತ್ತಲಪ್ಪ ಮುತ್ಯಾ ತೊನಸನಹಳ್ಳಿ ಅವರ ನೇತೃತ್ವದಲ್ಲಿ ತಳವಾರ ಎಸ್ಟಿ ಹೋರಾಟ ಸಮಿತಿ ಕಲಬುರ್ಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ನಿರಂತರ ಮೂರು ತಿಂಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದರ ಫಲವಾಗಿ ಮತ್ತು ಸತತವಾದ ನಮ್ಮ ಆಂತರಿಕ ಪ್ರಯತ್ನಕ್ಕೆ ಸ್ಪಂದಿಸಿ ತಳವಾರ ಸಮುದಾಯದ ಜನರಿಗೆ ರಾಜ್ಯ ಸರ್ಕಾರ ವಿಂದು ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ.

Contact Your\'s Advertisement; 9902492681

ಈ ಮಹತ್ಕಾರ್ಯಕ್ಕೆ ನಿರಂತರ ಪ್ರಯತ್ನ ಪಟ್ಟು ಸರ್ಕಾರದ ಹಾಗೂ ಶಾಸಕ, ಸಚಿವರ ಸಹಕಾರ ಪಡೆದು ಕೆಲಸ ಮಾಡಿದವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ ಅವರು. ಪಂಚಾಯತ್ ರಾಜ್ಯ ಸಚಿವರಾದ ಕೆಎಸ್ ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟಿಲ, ಡಾ. ಸಾಬಣ್ಣ ತಳವಾರ ಶಾಸಕರಾದ ಬಸವರಾಜ ಬಿ. ಮತ್ತಿಮೂಡ, ಸುಭಾಷ್ ಆರ್ ಗುತ್ತೇದಾರ ಹಾಗೂ ಉತ್ತರ ಕರ್ನಾಟಕ ಭಾಗದ ಬಿಜೆಪಿಯ ಸಚಿವರು, ಶಾಸಕರುಗಳು ಸೇರಿಕೊಂಡು ಶಾಲಾ ಮತ್ತು ಇತರೆ ದಾಖಲಾತಿಯಲ್ಲಿ ತಳವಾರ ಎಂದು ನಮೂದಾಗಿರುವಂತಹವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಪತ್ರ ಬರೆಯುವ ಮುಖಾಂತರ, ಉತ್ತರ ಕರ್ನಾಟಕದ ತಳವಾರ ಸಮುದಾಯದ ನೌಕರರು, ವಿದ್ಯಾರ್ಥಿಗಳು, ಉದ್ದಿಮೆದಾರರು ಮತ್ತು ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಆದ್ದರಿಂದ ಇವತ್ತು ಮುಖ್ಯಮಂತ್ರಿಗು ನಮಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಆದೆಶ ಮಾಡಿದ್ದಾರೆ. ಮುಖ್ಯಮಂತ್ರಿಗಳ ಈ ನಿರ್ಧಾರ ಇಡೀ ಸಮುದಾಯಕ್ಕೆ ಹರುಷವಾಗಿದೆ. ಆದ್ದರಿಂದ ರಾಜ್ಯ ಸರಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ, ಸಂಬಂಧಪಟ್ಟ ಸಚಿವರುಗಳಿಗೆ-ಶಾಸಕರುಗಳಿಗೆ ಸಮುದಾಯದ ಪರವಾಗಿ ಧನ್ಯವಾದಗಳು ಸಲ್ಲಿಸುತ್ತೇವೆ. ಹಾಗೆಯೇ ಧರಣಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾದಂತಹ ಪೂಜ್ಯರುಗಳಿಗೆ ಗುರು-ಹಿರಿಯರಿಗೆ’ ಎಲ್ಲಾ ಸಮದಾಯದ ಎಲ್ಲಾ ಪಕ್ಷದ ಸಚಿವ ಶಾಸಕರುಗಳಿಗೆ, ರಾಜಕೀಯ ಮುಖಂಡರುಗಳಿಗೆ, ಸಮಾಜದ ಎಲ್ಲ ಪಕ್ಷಗಳ ರಾಜಕೀಯ ಮುಖಂಡರುಗಳಿಗೆ, ನೌಕರರಿಗೆ, ನಿವೃತ್ತ ನೌಕರರಿಗೆ, ಸಮಾಜದ ಎಲ್ಲಾ ಹಿರಿಯ ಮುಖಂಡರಿಗೆ, ಯುವ ಮುಖಂಡರಿಗೆ ಮತ್ತು ವಿಶೇಷವಾಗಿ ಧರಣಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿ ಸರತಿ ಉಪವಾಸ ಕುಳಿತ ಸಮಾಜದ ಎಲ್ಲ ಮಹಾಜನತೆಗೆ ಹಾಗೂ ಹೋರಾಟಕ್ಕೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿದರಿಂದ ಇಂದು ನಮ್ಮ ತಳವಾರ ಸಮುದಾಯಕ್ಕೆ ಸಂವಿಧಾನಬದ್ದ ನ್ಯಾಯದೊರೆತಿದೆ. ಅದಕ್ಕೆ ಸಹಕರಿಸಿದ ನಿವೆಲ್ಲುರು ಕಾರಣರಾಗಿದ್ದಿರಿ ಆದ್ದರಿಂದ ನಮ್ಮ ಹೋರಾಟಕ್ಕೆ ಜಯವಾಗಿದೆ.

ಇಂದು ನಮಗೆ ಸಾಮಾಜಿಕವಾದದ ಅಡಿಯಲ್ಲಿ ಸಂವಿಧಾನಬದ್ಧವಾದ ಗೆಲುವು ದೊರೆತಿರುವುದರಿಂದ ಸಮಾಜದ ಎಲ್ಲರ ಪರವಾಗಿ ಸರ್ಕಾರಕ್ಕೆ ಅನಂತ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೊತ್ಲಪ್ಪಮುತ್ತೆ ತೊನಸಹಳ್ಳಿ, ರಾಜೇಂದ್ರ ರಾಜವಾಳ, ಶಿವಪ್ಪ ಗಾಣೂರ, ಮಹಾರಾಯ ಅಗಸಿ, ರೇವಣಸಿದ್ದಪ್ಪಗೌಡ ಕಮಾನಮನಿ, ಬೆಳ್ಯಪ್ಪ ಖಣದಾಳ, ರವಿ ಗೊಳಾ ಶಾಬಾದ್, ಬಾಬು ಗೌಡ ಮಾಲಿ ಪಾಟೀಲ್, ವಿಜಯಕುಮಾರ್ ಹಾಬನೂರ, ಸಂಗಮೇಶ ತಳವಾರ ಕುಕನೂರ ಸೇರಿದತೆ ಇತರರು ಇದ್ದವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here