ಎಕೆಆರ್ ದೇವಿ ಪದವಿ ಕಾಲೇಜಿ ವಿದ್ಯಾರ್ಥಿನಿ ಸಾಧನೆಗೆ ಸನ್ಮಾನ

0
408

ಕಲಬುರಗಿ: ಜಿಲ್ಲೆಯ ಸಂಧ್ಯಾರಾಣಿ ತಂದೆ ಹುಸೇನಪ್ಪ ಎಂಬ ವಿದ್ಯಾರ್ಥಿನಿಯು ಎ ಕೆ ಆರ್ ದೇವಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿ ಇದೀಗ ಕರ್ನಾಟಕ ಸರ್ಕಾರದ ಪೊಲೀಸ್ ಇಲಾಖೆಯ ಪಿಎಸ್ಐ ಆಗಿ ನೇಮಕವಾಗಿರುವ ಜೊತೆಗೆ WRD  ನ water resource development ಇಲಾಖೆಯ assistant engineer ಆಯ್ಕೆ ಆಗುವುದರ ಮೂಲಕ ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಸಾಧನೆಯನ್ನು ಗ್ರಾಮೀಣ ವಿದ್ಯಾರ್ಥಿನಿ ಮಾಡಿದ್ದಾರೆ.

ಇಂದು ಕಾಲೇಜು ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನನ್ನ ಈ ಸಾಧನೆಗೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ  ಎ ಎಲ್ ಪ್ರಸಾದ್,  ಆಡಳಿತಾಧಿಕಾರಿ ಪ್ರಾಚಾರ್ಯರಾದ ವಿದ್ಯಾಸಾಗರ ದೇಶಮುಖ, ಎಮ್ ವಿ ಎಸ್ ಸುಬ್ರಹ್ಮಣ್ಯಂ  ಮತ್ತು ಕಾಲೇಜನ್ನು ಸಿಬ್ಬಂದಿ ವರ್ಗದವರ  ನಿರಂತರ ಮಾರ್ಗದರ್ಶನ ಪ್ರಮುಖ ಕಾರಣವೆಂದು ತಿಳಿಸಿದರು.

Contact Your\'s Advertisement; 9902492681

ಕನ್ನಡ ಮಾಧ್ಯಮದಿಂದ ಶಿಕ್ಷಣವನ್ನು ಪಡೆದ ನನಗೆ ಪಿಯುಸಿ ವಿಜ್ಞಾನ ಕಬ್ಬಿಣದ ಕಡಲೆ ಯಾದರು ನನ್ನನ್ನು ಪ್ರೋತ್ಸಾಹಿಸಿ ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಒಂದು ಸಾಧನೆಗೆ ಮುನ್ನುಡಿ ಬರೆದು ನನ್ನ ಜೀವನಕ್ಕೆ ಸಾಧನೆಯ ಹಂತದಲ್ಲಿ ಪ್ರೋತ್ಸಾಹಿಸಿ ಬೆಂಬಲಿಸಿದರು.

ಈ ಸಂದರ್ಭದಲ್ಲಿ ಅವರು ಕೃತಜ್ಞತೆಯನ್ನು ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here