ತಳವಾರರಿಗೆ ಎಸ್‌ಟಿ ಜಾತಿ ಪತ್ರ- ಕಾಂಗ್ರೆಸ್ ನಾಯಕರ ಪಾತ್ರವೂ ಹಿರಿದು: ಹೊನಗುಂಟಿ

0
14

ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರು ತಳವಾರ, ಪರಿವಾರ ಮತ್ತು ಸಿದ್ದಿ ಸಮುದಾಯಗಳಿಗೆ ಸಂವಿಧಾನಬದ್ಧ ಮೀಸಲಾತಿ ದೊರೆಕಿಸಿಕೊಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮವಹಿಸಿ ಅಂತಿಮ ಹಂತಕ್ಕೆ ತಂದು ನಿಲ್ಲಿಸಿದವರು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ ಸ್ಮರಿಸಿದ್ದಾರೆ.

ಮೂರು ದಶಕಗಳಿಂದ ಹೋರಾಟ ನಿರಂತರವಾಗಿ ಮಾಡಿಕೊಂಡು ಬರಲಾಗಿತ್ತು. ಪಕ್ಷಾತೀತವಾಗಿ ಕೋಲಿ ಸಮಾಜದ ಪ್ರಮುಖರು ಸೇರಿ ಹಿಂದಿನ ಎಲ್ಲ ಸರ್ಕಾರಗಳ ಮೇಲೂ ಒತ್ತಡ ತರುವ ಕೆಲಸ ಮಾಡಲಾಗಿತ್ತು. ಆದರೆ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ತಳವಾರ, ಪರಿವಾರ ಸಮುದಾಯ ಎಸ್‌ಟಿ ಪಟ್ಟಿಗೆ ಸೇರ್ಪಡೆಗೆ ಅಂತಿಮ ರೂಪರೇಷೆ ಸಿದ್ಧಪಡಿಸಲಾಗಿತ್ತು. ಕಳೆದ ೨೦೧೪ ರ ಫೆಬ್ರವರಿ ೨೫ ರಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು.

Contact Your\'s Advertisement; 9902492681

ಕೇಂದ್ರದಲ್ಲಿನ ಓಬಿಸಿ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ ೬ ರಲ್ಲಿ ಮತ್ತು ರಾಜ್ಯ ಸರ್ಕಾರದ ಓಬಿಸಿ ಪಟ್ಟಿಯಲ್ಲಿನ ಕ್ರಮಸಂಖ್ಯೆ ೬೮ ರಲ್ಲಿ ತಳವಾರ, ಪರಿವಾರ ಜಾತಿಗಳನ್ನು ಎಸ್‌ಟಿಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರ ಗೆಜೆಟ್ ಪ್ರಕಟಿಸಿ ತಿದ್ದುಪಡಿ ಮಾಡಿ ಆದೇಶಿತು. ಆದರೆ ತಾಂತ್ರಿಕ ಕಾರಣಗಳಿಂದ ಎಸ್‌ಸಿ ಜಾತಿ ಪತ್ರ ನೀಡುವಲ್ಲಿ ನಿರ್ಲಕ್ಷ್ಯವಹಿಸಲಾಗಿತ್ತು.

ಇನ್ನು ೨೦೧೮ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿತ್ತು. ಕೊನೆಗೆ ಕೇಂದ್ರ ಸರ್ಕಾರವು ೨೦೨೦ರಲ್ಲೆ ಸಂಸತ್‌ನಲ್ಲಿ ಎಸ್‌ಟಿ ಕಾಯ್ದೆಗೆ ತಿದ್ದುಪಡಿ ತಂದು ಮೂರು ಸಮುದಾಯಗಳನ್ನೂ ಎಸ್‌ಟಿ ಪಟ್ಟಿಗೆ ಸೇರಿಸಿ ಆದೇಶಿತ್ತು. ಹೀಗಾಗಿ, ತಳವಾರ, ಪರಿವಾರ ಮತ್ತು ಸಿದ್ದಿ ಸಮುದಾಯಗಳಿಗೆ ಎಸ್‌ಟಿ ಮೀಸಲಾತಿ ಸಿಗುವಲ್ಲಿ ಕಾಂಗ್ರೆಸ್ ಪಕ್ಷ ಮಹತ್ವದ ಪಾತ್ರವಹಿಸಿದೆ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಧನ್ಯವಾದಗಳು ಎಂದು ಶಿವಾನಂದ ಹೋನಗುಂಟಿ ವಿಶ್ಲೇಷಿಸಿದ್ದಾರೆ.

ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಹ ಬಸವಕಲ್ಯಾಣ ಹಾಗೂ ಸಿಂದಗಿ ಉಪಚುನಾವಣೆ ಸಂದರ್ಭದಲ್ಲಿ ಕೊಟ್ಟ ಅಶ್ವಾಸನೆ ಈಡೇರಿಸಿದ್ದಾರೆ. ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆಯಂತೆ ತಳವಾರ ಮತ್ತು ಪರಿವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರ್ಕಾರ ಅಧಿಕೃತವಾಗಿ ಸುತ್ತೋಲೆ ಹೊರಡಿಸಿರುವುದು ಹೋರಾಟಕ್ಕೆ ಸಿಕ ಜಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here