ಶಾಲೆ ಜೀವಂತ ದೇವಾಲಯವಿದ್ದಂತೆ

0
13

ಆಳಂದ: ಶಾಲೆಗಳು ಜೀವಂತ ದೇವಾಲಯಗಳಿದ್ದಂತೆ ಅವುಗಳಿಗೆ ಕುಂದು ಬಾರದಂತೆ ನೋಡಿಕೊಂಡು ಹೋಗುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಖಜೂರಿಯ ಕೋರಣ್ಣೇಶ್ವರ ವಿರಕ್ತಮಠದ ಪೀಠಾಧಿಪತಿ ಮುರುಘೇಂದ್ರ ಕೋರಣ್ಣೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸೋಮವಾರ ಖಜೂರಿಯ ನಿಜಾಚರಣೆ ವಸತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲೆಯ ೧೯ನೇ ವಾರ್ಷಿಕೋತ್ಸವ, ಹಳೆಯ ವಿದ್ಯಾರ್ಥಿಗಳ ಮತ್ತು ಪಾಲಕರ ಸಮ್ಮಿಲನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ ತಾಲೂಕಾ ಅಧ್ಯಕ್ಷ ಹಣಮಂತ ಶೇರಿ, ಗಡಿನಾಡಿನಲ್ಲಿ ಶಾಲೆಗಳನ್ನು ನಡೆಸಿಕೊಂಡು ಹೋಗುವುದು ಈಗಿನ ದಿನಮಾನಗಳಲ್ಲಿ ಬಹಳ ಕಷ್ಟಕರವಾಗಿದೆ ಅದರಲ್ಲೂ ಕನ್ನಡ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಅದಕ್ಕಾಗಿ ಸರ್ಕಾರಗಳು ಗಡಿನಾಡಿನಲ್ಲಿರುವ ಎಲ್ಲ ಶಾಲಾ ಕಾಲೇಜುಗಳ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯ ಮೇಲೆ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಬಂಗರಗೆ, ಬಸವರಾಜ ಢಗೆ, ಗುರುಬಸಪ್ಪ ಹುಲ್ಲೆ, ವೈಜನಾಥ ಕಂದಗೂಳೆ, ಕುಮಾರ ತುಪ್ಪಾದೊಡ್ಡೆ, ಗುರು ಬಂಗರಗಿ, ಡಿ ಎಂ ಪಾಟೀಲ, ಮಲ್ಲಿಕಾರ್ಜುನ ಮಾಳಿ, ಮುಖ್ಯ ಗುರು ಸುಭಾಷ್ ಹರಳಯ್ಯ ಇದ್ದರು.

ವಿರೇಶ ನಂದಿಕೊಲ ಪ್ರಾರ್ಥಿಸಿದರು. ಲಲಿತಾ ನಡಗೇರಿ ಸ್ವಾಗತಿಸಿದರೆ, ವಿಜಯ ಪೂಜಾರಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here