ಕಲಬುರಗಿ: ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸಿತಾರಾಮನ್ ಮಂಡಿಸಿರು ಬಜೆಟ್ ಗ್ರಾಮೀಣ ಜನ ಜೀವನ ಏಳಿಗೆ ಜೊತೆಗೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶಾಸಕ ಬಸವರಾಜ ಮತ್ತಿಮಡು ತಿಳಿಸಿದ್ದಾರೆ.
ಬಟ್ಟೆ, ಆಹಾರ, ಎಲೆಕ್ಟ್ರಾನಿಕ ವಸ್ತುಗಳು, ಔಷಧಿ ಸೇರಿದಂತೆ ಜನ ಸಾಮಾನ್ಯರ ನಿತ್ಯ ಬಳಕೆಯ ಎಲ್ಲ ಸಾಮಗ್ರಿಗಳ ಮೇಲಿನ ಸುಂಕು ಇಳಿಸಲಾಗಿದೆ. ಕೃಷಿ ಉಪಕರಣಗಳ ಮೇಲಿನ ಸುಂಕ ಇಳಿಸುವುದರ ಜೊತೆಗೆ ದೇಶಿಯ ಉತ್ಪಾದನೆ ಏರಿಕೆಗೆ ಉತ್ತೇಜನ ನೀಡಲಾಗಿದೆ ಇದರಿಂದ ರೈತರಿಗೆ ಅನುಕೂಲವಾಗಲಿದೆ. ವಸತಿ ಯೋಜನೆಗೆ ₹48 ಸಾವಿರ ಕೋಟಿ, ಜಲ ಜೀವನ್ ಮಿಷನ್‌ಗೆ ₹60 ಸಾವಿರ ಕೋಟಿ, ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ. ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸುವುದು, 1 ರಿಂದ 12 ನೇ ತರಗತಿ ವರಿಗೆ ಡಿಜಿಟಲ್ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ವರದಾನವಾಗಲಿದೆ.
ನದಿ ಜೋಡಣೆಗೆ ₹44 ಸಾವಿರ ಕೋಟಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ ₹20 ಸಾವಿರ ಕೋಟಿ, ಪ್ರತಿ ರಾಜ್ಯಗಳಿಗೆ ₹1 ಲಕ್ಷ ಕೋಟಿ ಬಡ್ಡಿರಹಿತ ಸಾಲ, ರಕ್ಷಣಾ ವೆವಸ್ಥೆ ಸುಧಾರಣೆ, ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಡಿಜಿಟಲ್ ಇಂಡಿಯಾಗೆ ಉತ್ತೇಜನ ನೀಡಿರುವುದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅವರು ಹೇಳಿದರು.