ಮಂಗಗಳ ಹಾವಳಿ ನಿಯಂತ್ರಣಕ್ಕೆ ಅಗ್ರಹ

0
28

ಕಲಬುರಗಿ: ತಾಲೂಕಿನ ತಾಜಸುಲ್ತಾನಪೂರ ಗ್ರಾಮದಲ್ಲಿ ಮಂಗಗಳ ಹಾವಳಿ ಹತೋಟಿಗೆ ತರುವುದರೊಂದಿಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಾಗಿ ಎಂದು ಅರಣ್ಯ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು.

ಇತ್ತಿಚೆಗೆ ಮಂಗಗಳು ಗ್ರಾಮದ ಮಹಿಳೆ, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಹಲವಾರು ಜನರ ಮೇಲೆ ದಾಳಿ ಮಾಡಿ ಕಚ್ಚಿ ಗಾಯ ಮಾಡುತ್ತಿವೆ. ಮಂಗಗಳ ಸಮಸ್ಯೆಯಿಂದ ಗ್ರಾಮಸ್ಥರು ನೆಮ್ಮದಿ ಕಳೆದುಕೊಂಡು ಭಯಭೀತರಾಗಿ ಜೀವನ ಸಾಗಿಸುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಮಂಗಗಳು ಬಂದು ದಾಳಿ ಮಾಡುತ್ತವೆ ಎಂದು ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ ಹಾಗೂ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

Contact Your\'s Advertisement; 9902492681

ಅರಣ್ಯ ಇಲಾಖೆಗೆ ಗ್ರಾಮ ಪಂಚಾಯತಿ ವತಿಯಿಂದ ಎರಡು ಬಾರಿ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಆದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆದ ಕಾರಣ ತಾವುಗಳು ಕಾಳಜಿ ವಹಿಸಿ ಮಂಗಗಳ ಹಾವಳಿ ಹತೋಟಿಗೆ ತರುವುದರೊಂದಿಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಾಗಿ ಎಂದು ಅರಣ್ಯ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುನೀಲ ಮದನಕರ, ಗ್ರಾಮ ಪಂಚಾಯತ ಸದಸ್ಯರಾದ ಸಂಜುಕುಮಾರ ಟಿ. ಜವರಕರ, ಗುರುಶಾಂತ ಹಾಂವಾ, ಶಾಂತಕುಮಾರ ಮದನಕರ, ಗ್ರಾಮಸ್ಥರಾದ ಸಾಯಬಣ್ಣ ಯಾದಗೀರ, ನಾಗಮೂರ್ತಿ ಜವರಕರ, ದತ್ತು ಜಾನಕರ, ಸಂಗಣ್ಣಾ ಚಿಡಗುಪ್ಪಿ, ಶಿವಕುಮಾರ ರಟಗಲ್, ರೇವೇಣಸಿದ್ದ ಹಾಂವಾ, ಮಲ್ಲಿಕಾರ್ಜುನ ಮದ್ದಾಳ, ಮೂಲಾಲಿ ಗೌಳಿ, ಸತೀಶ ಶಹಾಪೂರಕರ್, ಸಿದ್ದು ಹಾಂವಾ, ಯುವಮುಖಂಡರಾದ ಆನಂದ ಖೇಳಗಿ, ನ್ಯಾಯವಾದಿ ಹಣಮಂತರಾಯ ಅಟ್ಟೂರ ಸೇರಿದಂತೆ ಸುಲ್ತಾನಪೂರ ಗ್ರಾಮದ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here