ಬೆಳೆದ ಎಲ್ಲಾ ರೈತರ ಕಬ್ಬು ನುರಿಸುವಂತೆ ಸಕ್ಕರೆ ಕಾರ್ಖಾನೆಗೆ ಒತ್ತಾಯ

0
15

ಆಳಂದ: ತಾಲೂಕಿನ ಭೂಸನೂರ ಗ್ರಾಮದ ಹತ್ತಿರದ ಗುತ್ತಿಗೆ ಆಧಾರದ ನಡೆಯುತ್ತಿರುವ ಎನ್‌ಎಸ್‌ಎಲ್ ಸಕ್ಕರೆ ಕಾರಖಾನೆ ವ್ಯಾಪ್ತಿಯ ಕಲಬುರಗಿ, ಆಳಂದ, ಅಫಜಲ್‌ಪೂರ ತಾಲೂಕುಗಳಲ್ಲಿ ಕಬ್ಬು ಬೆಳೆದ ಎಲ್ಲ ರೈತರ ಕಬ್ಬನ್ನು ನುರಿಸಬೇಕು ಎಂದು ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗಜಂಗಮ. ಎಸ್. ಪಾಟೀಲ್ ಧಂಗಾಪೂರ, ಉಪಾಧ್ಯಕ್ಷ ಸಿದ್ರಾಮ ಸಾಲಿಮನಿ ಅವರು ಒತ್ತಾಯಿಸಿದರು.

ಈ ಕುರಿತು ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಘಟಕದ ಮುಖ್ಯಸ್ಥರಿಗೆ ನಿಯೋಗದೊಂದಿಗೆ ತೆರಳಿ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷದಕಿಂತ ಈ ಬಾರಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದು ಕಬ್ಬು ಬೆಳೆ ಪ್ರಮಾಣ ಹೆಚ್ಚಾಗಿದೆ. ಕಾರ್ಖಾನೆಯವರು ಎಲ್ಲ ರೈತರ ಕಬ್ಬನ್ನು ನುರಿಸಬೇಕು ಮತ್ತು ಯಾವುದೇ ರೀತಿಯ ವಿಳಂಬ ಮಾಡದೆ ಕಬ್ಬಿನ ಹಣವನ್ನು ಸಕಾಲಕ್ಕೆ ಪಾವತಿಸಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥ ಪಿ. ದೇವರಾಜಲು ಮನವಿ ಅವರು ಮನವಿ ಸ್ವೀಕರಿಸಿ ಮಾತನಾಡಿ, ಪ್ರಸಕ್ತ ೨೦೨೧-೨೨ ನೇ ಸಾಲಿನ ಹಂಗಾಮು ಆರಂಭವಾಗಿ ೩ ತಿಂಗಳು ಗತಿಸಿದ್ದು ಇಲ್ಲಿಯವರಗೂ ೫.೭೪.೦೪೯ ಮೆಟ್ರಿಕ್ ಟನ್ನ ಕಬ್ಬು ನುರಿಸಿದ್ದು ಇದು ಹಿಂದಿನ ಎಲ್ಲ ದಾಖಲೆಗಳು ಮೀರಿಸಿದೆ. ಇನ್ನು ೨ ರಿಂದ ೩ ತಿಂಗಳು ಕಾರ್ಖಾನೆ ನಡೆಯುತ್ತದೆ. ಆದ್ದರಿಂದ ಕಬ್ಬು ಬೆಳೆದ ರೈತರು ಕಬ್ಬಿಗೆ ನೀರು ಹಾಯಿಸಬೇಕು.

ನೀರು ಹಾಯಿಸದಿದ್ದರೆ ಇಳುವರಿ ಕಡಿಮೆಯಾಗುತ್ತದೆ ಆದ್ದರಿಂದ ಕಬ್ಬಿಗೆ ನೀರು ಉಣಿಸಲು ವಿನಂತಿಸಿದ ಅವರು, ರೈತರ ಕಬ್ಬು ನುರಿಸಲಾಗುತ್ತದೆ ಹೀಗಾಗಿ ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ಕಬ್ಬು ನೀಡಿದ ರೈತರಿಗೆ ಬಿಲ್ ಪಾವತಿ ಮಾಡಲಾಗುತ್ತಿದೆ. ಕಬ್ಬಿನ ದರದ ಬಗ್ಗೆ ಯಾವುದೇ ರೀತಿಯ ಸಂಶಯಬೇಡ ಕಾರ್ಖಾನೆಯೊಂದಿಗೆ ರೈತರ ಹಾಗೂ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಶಿವರಾಜ ಪಾಟೀಲ್, ಚನ್ನಬಸಪ್ಪ ಮಾಲಿ ಪಾಟೀಲ್, ಶಂಕರ ಸೋಮಾ, ಶಿವಪುತ್ರಪ್ಪ ಕೊಟ್ಟರಕಿ, ಕಬ್ಬು ಅಭಿವೃದ್ಧಿ ಮುಖ್ಯಸ್ಥ ಶಿವಾನಂದ ನಂದಗಾಂವ ಸೇರಿದಂತೆ ರೈತರು, ನಿರ್ದೇಶಕರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here