ಕಲಬುರಗಿ: ಕರ್ತವ್ಯ ನಿರತ ಹುಮನಾಬಾದ್ ತಹಸೀಲದಾರ ಹಲ್ಲೆ ಮಾಡಿರುವ ಗುಂಡಾಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಳಂದ ತಾಲೂಕಾ ವೀರಮಾಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷ ರುದ್ರಯ್ಯ ಎನ್ ಹಿರೇಮಠ ಕೊಡಲ ಹಂಗರಗಾ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವೀರಶೈವ ಸಮಾಜದ ನೌಕರರ ಮೇಲೆ ರಾಜ್ಯಾದ್ಯಂತ ಹಲ್ಲೆಗಳು ಜರುಗುತ್ತಿವೆ ಆದರೆ ಹಲ್ಲೆ ಮಾಡಿದವರ ಮೇಲೆ ಯಾವುದೇ ಕಾನೂನು ಕ್ರಮಗಳು ಆಗುತ್ತಿಲ್ಲ ಹೀಗಾಗಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ ಇದು ಕಳವಳಕಾರಿ ಸಂಗತಿ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಹುಮನಾಬಾದ ತಹಸೀಲದಾರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳ ಮೇಲೆ ಗುಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸಿ ಅವರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಅಲ್ಲದೇ ಮುಂದೆ ರಾಜ್ಯದಲ್ಲಿ ಈ ರೀತಿಯ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘದ ಪದಾಧಿಕಾರಿಗಳಾದ ಶಿವಯ್ಯ ಸ್ವಾಮಿ, ಷಣ್ಮುಖಯ್ಯ ಸ್ವಾಮಿ, ರಾಚಯ್ಯ ಸ್ವಾಮಿ, ದಯಾನಂದ ಸ್ವಾಮಿ ಪತ್ರಿಕಾ ಹೇಳಿಕೆಗೆ ಸಹಿ ಮಾಡಿದ್ದಾರೆ.