ಸುರಪುರ: ರೈಲ್ವೆ ಕಾಮಗಾರಿಗೆ ಜಮೀನು ನೀಡಿರುವ ರೈತರಿಗೆ ಪರಿಹಾರ ನೀಡುವಲ್ಲಿ ಅನ್ಯಾಯವಾಗುತ್ತಿದ್ದು ಸರಿಪಡಿಸಿ ನ್ಯಾಯ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದರು.
ಸಮಿತಿಯಿಂದ ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿ,ತಾಲೂಕಿನ ಗುಡಿಹಾಳ ಜೆ ಗ್ರಾಮದ ರೈತ ತಾಯಪ್ಪ ಹೆಮ್ಮಡಗಿ ಎನ್ನುವ ರೈತನ ೮ ಎಕರೆ ಜಮೀನಿನ ಮದ್ಯದಲ್ಲಿ ರೈಲ್ವೆ ಹಳಿ ಹೋಗಿದೆ,ಆದರೆ ಈಗ ರೈತನ ಜಮೀನಿನೊಂದಿಗೆ ಬೇರೆಯವರ ಹಿಸ್ಸಾ ಸೇರಿಸಲಾಗಿದ್ದು ಇದರಿಂದ ರೈತ ತಾಯಪ್ಪನಿಗೆ ಅನ್ಯಾಯವಾಗಿದೆ.
ಈ ಹಿಂದಿನಿಂದಲೂ ರೈತ ಮನವಿ ಸಲ್ಲಿಸುತ್ತಾ ಬಂದಿದ್ದರು ನ್ಯಾಯ ದೊರೆತಿಲ್ಲ ಆದ್ದರಿಂದ ಈಗ ನಮ್ಮ ಸಂಘಟನೆಗೆ ಮನವಿ ಮಾಡಿಕೊಂಡಿದ್ದರಿಂದ ಇಂದು ನಮ್ಮ ಸಂಘಟನೆ ಅನ್ಯಾಯಕ್ಕೊಳಗಾದ ರೈತನಿಗಾಗಿ ಪ್ರತಿಭಟನೆ ಮಾಡುತ್ತಿದ್ದು,ಕೂಡಲೇ ರೈತ ತಾಯಪ್ಪನ ಜಮೀನು ಸರ್ವೇ ಮಾಡಿಸಿ,ಬೇರೆಯವರ ಹಿಸ್ಸಾ ಸೇರ್ಪಡೆಯಾಗಿದ್ದನ್ನು ಸರಿಪಡಿಸಿ ಹಾಗು ರೈತನಿಗೆ ಪರಿಹಾರ ನೀಡಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ನಂತರ ಕರ್ನಾಟಕ ಕೈಗಾರಿಕಾ ಭೂಸ್ವಾಧೀನಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಚಾಲಕ ರಾಮಣ್ಣ ಶೆಳ್ಳಗಿ,ಹುಲಗಪ್ಪ ಜಾಂಗೀರ ಶೆಳ್ಳಗಿ,ಮಾನಪ್ಪ ಬಿಜಾಸಪುರ,ಮರಿಲಿಂಗಪ್ಪ ದೇವಿಕೇರಿ,ರಾಮಣ್ಣ ಬಬಲಾದ,ದೇವಪ್ಪ ಬಿಜಾಸಪುರಕರ್,ಮಹೇಶ ಯಾದಗಿರಿ,ಜೆಟ್ಟೆಪ್ಪ ನಾಗರಾ, ಮಲ್ಲೇಶಿ ಬಡಿಗೇರ ಶೆಳ್ಳಗಿ,ರೇವಣಸಿದ್ದಪ್ಪ ಮಾಲಗತ್ತಿ,ಮಲ್ಲಪ್ಪ ಬಡಿಗೇರ ಬಾದ್ಯಾಪುರ,ಭೀಮಣ್ಣ ಮಾಲಗತ್ತಿ ಸೇರಿದಂತೆ ಅನೇಕರಿದ್ದರು.