ಸುರಪುರ: ಶ್ರೀಗಿರಿ ಮಠದ ಮುಖ್ಯ ಆಶಯವೆಂದರೆ ಭಕ್ತರಿಗೆ ಸುಖ ಸಂತೋಷ ನೆಮ್ಮದಿ ಕಲ್ಪಿಸುವುದಾಗಿದೆ ಎಂದು ಶ್ರೀಗಿರಿ ಮಠದ ಪೀಠಾಧಿಪತಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ತಾಲೂಕಿನ ಲಕ್ಷ್ಮೀಪುರ ಬಿಜಾಸಪುರ ಬಳಿಯ ಶ್ರೀ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗಿರಿ ಮಠದ ಆವರಣದಲ್ಲಿ ನಡೆದ ಅಬ್ಬೆತುಮಕೂರಿನ ಸಿದ್ಧಿಪುರುಷ ವಿಶ್ವರಾಧ್ಯರ ಪುರಾಣ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ,ಭಕ್ತರಿಂದಲೇ ಇಂದು ಇಷ್ಟೆಲ್ಲ ಕಾರ್ಯ ಮಾಡಲು ಸಾಧ್ಯವಾಗಿದೆ.ಇದೆಲ್ಲವು ಭಕ್ತರಿಂದ ಭಕ್ತರಿಗಾಗಿ ನಡೆಯುವ ಕಾರ್ಯವಾಗಿದೆ ಎಂದರು.ಮಾನವ ಕಲ್ಯಾಣವೇ ಶ್ರೀಮಠದ ಮುಖ್ಯ ಉದ್ದೇಶವಾಗಿದ್ದು ತಾವೆಲ್ಲರು ನಡೆಸುವುದರಿಂದ ಪ್ರತಿ ವರ್ಷವು ಮಲ್ಲಿಕಾರ್ಜುನ ದೇವರ ಜಾತ್ರೆ ಹಾಗು ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ.ಅದರಂತೆ ಮಲ್ಲಿಕಾರ್ಜುನ ದೇವರ ಮತ್ತು ಮೂಕಪ್ಪಯ್ಯ ತಮ್ಮೆಲ್ಲರಿಗೂ ಆರೋಗ್ಯ ಭಾಗ್ಯ ಕರುಣಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಹಸನಾಪುರ ಯುಕೆಪಿ ಕ್ಯಾಂಪ್ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂತೋಷಜಿ ಮಾತನಾಡಿ,ಜನರು ನೆಲ ಜಲದ ಬಗ್ಗೆ ತುಂಬಾ ಜಾಗೃತಿ ವಹಿಸಬೇಕು ಎಂದರು.
ನೆಲವನ್ನು ಹಾಳುಮಾಡಬೇಡಿ.ಈಗ ನಮ್ಮ ರೈತರು ಭತ್ತ ಬೆಳೆಯಲು ನಿತ್ಯವು ಜಮೀನಲ್ಲಿ ನೀರು ನಿಲ್ಲಿಸುವುದ ಹಾಗು ಬೆಳೆಗಳಿಗಾಗಿ ರಸಗೊಬ್ಬರ,ಕ್ರಿಮಿನಾಶ ಹೆಚ್ಚು ಸಿಂಪಡಣೆಯಿಂದ ತಿನ್ನುವ ಅನ್ನವು ವಿಷಯುಕ್ತವಾಗಿದೆ,ಅಲ್ಲದೆ ಭೂಮಿಯು ಹಾಳಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಅಲ್ಲದೆ ತಾವೆಲ್ಲರು ಸಾಧ್ಯವಾದಷ್ಟು ಸಾವಯವ ಕೃಷಿಗೆ ಒತ್ತು ನೀಡುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳಿಗೆ ಭಕ್ತರಿಂದ ತುಲಾಭಾರ ನಡೆಸಲಾಯಿತು.ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯರಿಗೆ ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.ಅಲ್ಲದೆ ಲಕ್ಷ್ಮೀಪುರ ಬಿಜಾಸಪುರ ಗ್ರಾಮ ಪಂಚಾಯತಿ ಸದಸ್ಯರಿಂದ ಶ್ರೀಗಳಿಗೆ ವಿಶೇಷ ಸನ್ಮಾನ ನಡೆಸಲಾಯಿತು ಹಾಗು ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರಿಗೂ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಶೇಖರ ದಂಡಿನ್,ಕೆಜೆಯು ಜಿಲ್ಲಾ ಅಧ್ಯಕ್ಷ ಡಿ.ಸಿ ಪಾಟೀಲ್,ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ,ಪಿಎಸ್‌ಐ ಕೃಷ್ಣಾ ಸುಬೇದಾ,ಹೋರಾಟಗಾರ್ತಿ ಮಹಾದೇವಮ್ಮ ಬೇವಿನಾಳಮಠ,ಕರವೇ ಜಿಲ್ಲಾಧ್ಯಕ್ಷ ಬಸವರಾಜ ಅಂಗಡಿ,ರವಿಚಂದ್ರಸಾಹು ಆಳ್ದಾಳ,ಪ್ರಶಾಂತ ಮುದನೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.