ತೆಲಂಗಾಣ ಸರ್ಕಾರ ವಜಾಕ್ಕೆ ಅಂಬಾರಾಯ ಅಷ್ಠಗಿ ಆಗ್ರಹ

0
19

ಕಲಬುರಗಿ: ಭಾರತ ದೇಶದ ಸಂವಿಧಾನವನ್ನು ಪುನಃ ಬರೆಯುವ ಅಗತ್ಯವಿದೆ ಎನ್ನುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಸಂವಿಧಾನ ವಿರೋಧಿಯಾಗಿದ್ದು, ಸಂವಿಧಾನಕ್ಕೆ ಅಗೌರವ ಮತ್ತು ಅಪಚಾರವೆಸಗಿರುವ ಕೆ.ಸಿ ಆರ್ ಅವರ ಸರ್ಕಾರವನ್ನು ಈ ಕೂಡಲೆ ರಾಜ್ಯಪಾಲರು ವಜಾಗೊಳಸಬೇಕೇಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಯವರು ಆಗ್ರಹಿಸಿದ್ದಾರೆ.

ಡಾ ಬಾಬಾಸಾಹೇಬ ಅಂಬೇಡ್ಕರ ರವರು ಇಡೀ ವಿಶ್ವಕ್ಕೆ ಮಾದರಿಯಾಗಿರುವ ಸರ್ವಕಾಲಿಕ ಶ್ರೇಷ್ಠ ಸಂವಿಧಾನ ಬರೆದಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಹಾಗೂ ಎಲ್ಲ ಸಮುದಾಯವನ್ನು ಸಮಾನವಾಗಿ ಕಾಣುವ ಸಂವಿಧಾನ ವನ್ನು ಬದಲಿಸುವ ಅಗತ್ಯವಿದೆ ಎನ್ನುವ ಮೂಲಕ ಅವರು ದೇಶದ ಅಸಂಖ್ಯಾತ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ.

Contact Your\'s Advertisement; 9902492681

ಆದ್ದರಿಂದ ಅವರ ಮೇಲೆ ಈ ಕೂಡಲೇ ದೇಶದ್ರೋಹದ ಕೇಸು ದಾಖಲಿಸಬೇಕೆಂದು ಹಾಗೂ ಕಾಂಗ್ರೆಸ ಪಕ್ಷಕ್ಕೆ ನೈತಿಕತೆ ಇದ್ದರೆ ಉದ್ಧವ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರದಿಂದ ಹೊರ ಬರಬೇಕೆಂದು ಅಂಬಾರಾಯ ಅಷ್ಠಗಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here