ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರನಾಯಕ ಮಡಿವಾಳ ಮಾಚಿದೇವರಾಗಿದ್ದರು ಎಂದು ಸಿಎ ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಹೇಳಿದರು.
ಅವರು ಮಂಗಳವಾರ ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾದ ಶರಣ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲ್ಯಾಣ ಕ್ರಾಂತಿಯು ತನ್ನ ಕೊನೆಯ ದಿನಗಳಲ್ಲಿ ರಕ್ತಸಿಕ್ತವಾಗಿ ಮಾರ್ಪಟ್ಟಾಗ, ವಚನಗಳಿಗೆ ಸನಾತನಿಗಳಿಂದ ಆಪತ್ತು ವಿಪತ್ತು ಬಂದೊದಗಿದಾಗ, ವಚನಗಳ ಸಂರಕ್ಷಣೆಗೆ ಮುಂದಾದ ಧೀರ ಗಣಾಚಾರಿ ಮಾಚಿದೇವರು. ಶರಣರು ತಮ್ಮ ವಿಚಾರಗಳನ್ನು, ಚಿಂತನೆಗಳನ್ನು, ಪ್ರಗತಿಪರ ಆಲೋಚನೆಗಳನ್ನು ವಚನಗಳಲ್ಲಿ ನಿರ್ಭಿಡೆಯಿಂದ ದಾಖಲಿಸಿದ್ದರು. ವಚನಗಳು ಮುಂದಿನ ಜನಾಂಗಕ್ಕೆ ಸುರಕ್ಷಿತವಾಗಿ ತಲುಪಲು ಅವುಗಳ ಸಂರಕ್ಷಣೆ ಅತ್ಯಗತ್ಯವಾಗಿತ್ತು.
ಹೀಗಾಗಿ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಅವುಗಳನ್ನು ಒಂದೆಡೆ ಕ್ರೋಢೀಕರಿಸಿ, ಬಿಜ್ಜಳನ ಮಗ ಸೋವಿದೇವ ಹಾಗೂ ಅವನ ಸೈನ್ಯದ ದಾಳಿಯಿಂದ ಸಾಹಿತ್ಯ ಉಳಿಸಲು ಮಡಿವಾಳ ಮಾಚಿದೇವರು ಖಡ್ಗ ಹಿಡಿಯಬೇಕಾಯಿತು. ರಣರಂಗಕ್ಕೆ ಧುಮುಕ ಬೇಕಾಯಿತು. ಜನಪದಿಗರಂತೂ ಮಾಚಿದೇವರ ನಿ?, ಭಕ್ತಿ, ಬದ್ಧತೆಯನ್ನು ಕೊಂಡಾಡಿದ್ದಾರೆ. ಮಾಚಿದೇವರ ಹುಟ್ಟು ದೇವರ ಹಿಪ್ಪರಗಿಯಲ್ಲಾದರೂ ಅವರ ಕಾರ್ಯಕ್ಷೇತ್ರವು ಕಲ್ಯಾಣವಾಗಿತ್ತು.
ಶರಣರ ಬಟ್ಟೆಗಳನ್ನು ಮಡಿ ಮಾಡುವ, ಅಂದರೆ ಶರಣರ ಬಟ್ಟೆಗಳನ್ನು ಒಗೆದು, ಹಸನುಗೊಳಿಸಿ ಶುಭ್ರ ಮಾಡಿ ಅವುಗಳನ್ನು ಅವರವರ ಮನೆಗಳಿಗೆ ತಲುಪಿಸುವ ಪಾವನ ಕಾಯಕವನ್ನು ಮಾಚಿದೇವರು ಕೈಗೊಂಡಿದ್ದರು.ಇವರ ವಚನಗಳಲ್ಲಿ ಕಲಿದೇವರ ದೇವಾ ಎಂಬ ಅಂಕಿತವನ್ನು ಕಾಣುತ್ತೇವೆ. ವಚನಗಳಲ್ಲಿ ನಿ?ರತೆ, ಗಣಾಚಾರ, ಕಲಿತನ, ಸಾಮಾಜಿಕ ಕಳಕಳಿ, ವಿಡಂಬನೆ ಮತ್ತು ಟೀಕೆಗಳನ್ನು ಕಾಣುತ್ತೇವೆ ಎಂದರು.
ಮುಖ್ಯಗುರುಮಾತೆಯರಾದ ದಮಯಂತಿ ಸೂರ್ಯವಂಶಿ, ಅನಿತಾ ಶರ್ಮಾ, ದೈಹಿಕ ಶಿಕ್ಷಕ ಚನ್ನಬಸಪ್ಪ ಕೊಲ್ಲೂರ್, ರಮೇಶ ಮಹೇಂದ್ರಕರ್, ಸೂಗಯ್ಯ ಘಂಟಿಮಠ,ವಿಜಯಲಕ್ಷ್ಮಿ ವೆಂಕಟೇಶ, ಗೀತಾ ಸಿಪ್ಪಿ, ರಾಜೇಶ್ವರಿ ಮಹೇಶ, ಲತಾ ಸಾಳುಂಕೆ, ಸುಕನ್ಯಾ, ಮಡಿವಾಳ ಸಮಾಜದ ಅಧ್ಯಕ್ಷ ಪೀರಪ್ಪ ಮಡಿವಾಳ, ಸಾಯಬಣ್ಣ ಮಡಿವಾಳ,ಬಾಬು ಮಡಿವಾಳ, ಶರಣು ಮಾಡಿವಾಳ, ದತ್ತು ಮಡಿವಾಳ, ತುಳಜಾರಾಮ ಮಡಿವಾಳ,ದತ್ತು ಮಡಿವಾಳ, ರಾಜು ಮಡಿವಾಳ, ಶರಣು.ಜಿ. ಮಡಿವಾಳ, ನರೇಶ ಮಡಿವಾಳ, ರಾಕೇಶ ಮಡಿವಾಳ ಇತರರು ಇದ್ದರು.