ಮೌಂಟೇನ್ ಡ್ಯೂನ `ಡರ್ ಕೇ ಆಗೆ ಜೀತ್ ಹೈ’ ಅಭಿಯಾನದಲ್ಲಿ ಮೆಗಾಸ್ಟಾರ್ ಮಹೇಶ್ ಬಾಬು

0
17

– ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ನೂತನ ಬ್ರ್ಯಾಂಡ್ ಅಂಬಾಸಿಡರ್ ರಿಂದ ಸಾಹಸ ಪ್ರದರ್ಶನದ ಚಿತ್ರೀಕರಣ To view the new campaign, click here –https://youtu.be/BoYuvVlQ7dI

ಬೆಂಗಳೂರು: ಯುವ ಪೀಳಿಗೆಯ ನೆಚ್ಚಿನ ಪೇಯವಾಗಿರುವ ಮೌಂಟೇನ್ ಡ್ಯೂ ತನ್ನ ಹೊಸ ಡರ್ ಕೆ ಆಗೆ ಜೀತ್ ಹೈ ಅಭಿಯಾನವನ್ನು ಅನಾವರಣಗೊಳಿಸಿದೆ.

Contact Your\'s Advertisement; 9902492681

ಈ ಅಭಿಯಾನದ ಟಿವಿಸಿಯಲ್ಲಿ ನೂತನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಮೆಗಾಸ್ಟಾರ್ ಮಹೇಶ್ ಭಾಬು ಅವರು ನಟಿಸಿದ್ದು, ಇದರ ಮೂಲಕ ದೇಶಾದ್ಯಂತ ಇರುವ ಗ್ರಾಹಕರನ್ನು ಸೆಳೆಯಲಿದ್ದಾರೆ. ವಿಶ್ವದ ಅತಿ ಎತ್ತರದ ಕಟ್ಟಡವಾಗಿರುವ ದುಬೈನ ಬುರ್ಜ್ ಖಲೀಫಾದಲ್ಲಿ ಈ ಟಿವಿಸಿಯನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಒಂದು ರೋಮಾಂಚಕವಾದ ಪ್ರದರ್ಶನವನ್ನು ಚಿತ್ರೀಕರಿಸಲಾಗಿದ್ದು, ಈ ಸಾಹಸ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಲಿದೆ. ಟಿವಿಸಿ ಮೌಂಟೇನ್ ಡ್ಯೂನ ನಂಬಿಕೆಯ ಪುನರಾವರ್ತನೆ ಇದರಲ್ಲಿ ಆಗಿದ್ದು, ಯಾವುದೇ ಸವಾಲನ್ನು ಎದುರಿಸಲು ಭಯಕ್ಕೆ ಬಲಿಯಾಗುವುದು ಅಥವಾ ಅದನ್ನು ಜಯಿಸಿ ಮುಂದುವರಿಯುವುದು ಹೇಗೆ ಎಂಬುದರ ಬಗ್ಗೆ ಎರಡು ವಿಧದಲ್ಲಿ ಹೇಳಲಾಗಿದೆ.

ಈ ಟಿವಿಸಿ ಬುರ್ಜ್ ಖಲೀಫಾದ ಮೇಲಿನಿಂದ ಒಂದು ಪಕ್ಷಿನೋಟವನ್ನು ತೋರಿಸುತ್ತದೆ. ಅಲ್ಲಿ ಮಹೇಶ್ ಬಾಬು ಅವರು ಡೇರ್ ಡೆವಿನ್ ಸಾಹವನ್ನು ಪ್ರದರ್ಶಿಸುವುದರೊಂದಿಗೆ ಹಾಗೂ ಹೊಸ ವಿಶ್ವದಾಖಲೆ ಮಾಡುವ ಮೂಲಕ ಭಾರತವನ್ನು ಪ್ರತಿನಿಧಿಸುತ್ತಾರೆ. ಈ ಚಿತ್ರವು ಮಹೇಶ್ ಬಾಬು ಅವರ ಮುಂದೆ ಇರುವ ಆಯ್ಕೆಯನ್ನು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಅವರಲ್ಲಿನ ಸಂದಿಗ್ಧತೆ ಮತ್ತು ದೃಢತೆಯನ್ನು ಎತ್ತಿ ತೋರಿಸುತ್ತದೆ. ಮಹೇಶ್ ಬಾಬು ಅವರು ಮೌಂಟೇನ್ ಡ್ಯೂ ಅನ್ನು ಆ ಎತ್ತರದ ಕಟ್ಟಡದ ತುತ್ತತುದಿಯಲ್ಲಿ ಯಾವುದೇ ಅಳುಕಿಲ್ಲದೇ ಕುಡಿಯುತ್ತಾರೆ. ಹೀಗೆ ಪೇಯನ್ನು ಕುಡಿದು ತಮ್ಮ ಬೈಕ್ ನಲ್ಲಿ ಬುರ್ಜ್ ಖಲೀಫಾದ ತುದಿಯಿಂದ ಧುಮುಕುವಾಗ ಅವರ ಮುಖದಲ್ಲಿ ಒಂದು ದೃಢವಾದ ನೋಟವು ಎಲ್ಲರ ಮೈನವಿರೇಳುವಂತೆ ಮಾಡುತ್ತದೆ.

ಬುರ್ಜ್ ಖಲೀಫಾದಲ್ಲಿ ಅಳವಡಿಸಲಾಗಿದ್ದ ಸ್ಲಿಮ್ ರನ್ ವೇ ಮೂಲಕ ಅವರು ತಮ್ಮ ಬೈಕ್ ನಲ್ಲಿ ತುತ್ತ ತುದಿಯಿಂದ ಇಳಿಯುವಾಗ ಕೆಳಗಿದ್ದ ಪ್ರೇಕ್ಷಕರ ಮೈ ಝುಮ್ಮೆನ್ನುವಂತೆ ಮಾಡುತ್ತಾರೆ. ಎಲ್ಲರೂ ಉಸಿರು ಬಿಗಿದಿಟ್ಟುಕೊಂಡು ಮಹೇಶ್ ಬಾಬು ಅವರ ಮೌಂಟೇನ್ ಡ್ಯೂ ಸಾಹಸವನ್ನು ಕಣ್ಣು ಎವೆಯಿಕ್ಕದೇ ನೋಡುತ್ತಾರೆ. ಹೀಗೆ ಇಳಿಯುವಾಗ ಮಧ್ಯದಲ್ಲಿ ಸ್ಕಿಡ್ ಆಗಿ ಇನ್ನೇನು ಕೆಳಗೆ ಬೀಳಬೇಕು ಎನ್ನುವಷ್ಟರಲ್ಲಿ ಅವರಲ್ಲಿ ಧೈರ್ಯ ಮತ್ತು ಸ್ಥೈರ್ಯ ಎರಡೂ ಮೇಳೈಸಿ ಸಾಹಸದಿಂದಲೇ ಕೆಳಗಿಳಿಯಬೇಕೆಂಬ ಛಲದಿಂದ ಸುಲಲಿತವಾಗಿ ಇಳಿಯುತ್ತಾರೆ. ಈ ಮೂಲಕ ಮಹೇಶ್ ಬಾಬು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ವಿಜಯಶಾಲಿಯಾಗುತ್ತಾರೆ.

ಈ ಬಗ್ಗೆ ಮಾತನಾಡಿದ ಪೆಪ್ಸಿಕೊ ಇಂಡಿಯಾದ ಮೌಂಟೇನ್ ಡ್ಯೂ & ಸ್ಟಿಂಗ್ ನ ಕೆಟಗರಿ ಡೈರೆಕ್ಟರ್ ವಿನೀತ್ ಶರ್ಮಾ ಅವರು, “ನಮ್ಮ ಡರ್ ಕೆ ಆಗೆ ಜೀತ್ ಹೈ ತತ್ತ್ವದೊಂದಿಗೆ ಮೌಂಟೇನ್ ಡ್ಯೂ ಒಂದು ಅಸಾಧಾರಣವಾದ ಫಲಿತಾಂಶಗಳನ್ನು ಸಾಧಿಸಲು ಭಯದ ವಾತಾವರಣಕ್ಕೆ ತಮ್ಮನ್ನು ತಾವು ತಳ್ಳಿಕೊಳ್ಳುವವರಿಗೆ ಧೈರ್ಯ ತುಂಬುತ್ತದೆ.

ಈ ಹೊಸ ಅಭಿಯಾನದೊಂದಿಗೆ ಸವಾಲುಗಳನ್ನು ಎದುರಿಸುವ ಮತ್ತು ವಿಜೇತರಾಗಿ ಹೊರಹೊಮ್ಮುವವರೇ ನಿಜವಾದ ಹೀರೋಗಳು ಎಂಬುದನ್ನು ನಮ್ಮ ಬ್ರ್ಯಾಂಡ್ ಪುನರುಚ್ಚರಿಸುತ್ತದೆ. ಮಹೇಶ್ ಬಾಬು ಅವರು ನಿಜವಾದ ನಾಯಕರಾಗಿದ್ದು, ಅವರ ಧೈರ್ಯ ಮತ್ತು ದೃಢತೆಯು ಈ ಅಭಿಯಾನದಲ್ಲಿ ಸಾಕಾರಗೊಂಡಿದೆ. ಅಲ್ಲದೇ, ಬುರ್ಜ್ ಖಲೀಫಾದ ಮೇಲ್ಭಾಗದಲ್ಲಿರುವ ಈ ಆ್ಯಕ್ಷನ್-ಪ್ಯಾಕ್ಡ್ ಫಿಲ್ಮ್ ನಮ್ಮ ಗ್ರಾಹಕರನ್ನು ಆಕರ್ಷಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಈ ಅಭಿಯಾನದ ಮೂಲಕ ನಮ್ಮ ಪ್ರೇಕ್ಷಕರಲ್ಲಿರುವ ಭಯವನ್ನು ಹೋಗಲಾಡಿಸಲು ಮತ್ತು ವಿಜಯದ ಹಾದಿಯಲ್ಲಿ ಮುನ್ನಡೆಯಲು ಪ್ರೋತ್ಸಾಹ ನೀಡುತ್ತದೆ ಎಂದು ನಾವು ಭಾವಿಸಿದ್ದೇವೆ’’ ಎಂದರು.

ಈ ಟಿವಿಸಿಯ ಶೂಟಿಂಗ್ ಅನುಭವವನ್ನು ಹಂಚಿಕೊಂಡ ಬ್ರ್ಯಾಂಡ್ ಅಂಬಾಸಿಡರ್ ಮಹೇಶ್ ಬಾಬು ಅವರು, “ಪ್ರತಿಯೊಬ್ಬರೂ ಒಂದಿಲ್ಲೊಂದು ರೂಪದಲ್ಲಿ ಭಯವನ್ನು ಎದುರಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ಆ ಭಯವನ್ನು ನಿಭಾಯಿಸಲು ಮತ್ತು ಈ ಸವಾಲಿನ ಮೂಲಕ ಬೆಳೆಯುತ್ತಿರುವ ಹಾಗೂ ಅದನ್ನು ಜಯಿಸಲು ಪ್ರಯತ್ನ ನಡೆಸುವ ಪ್ರತಿಯೊಬ್ಬರಿಗೂ ಶುಭಾಶಯ ಹೇಳಲು ಇದೊಂದು ಉತ್ತಮ ಮಾರ್ಗವಾಗಿದೆ ಎಂಬುದನ್ನು ನಾನು ಕಲಿತ್ತಿದ್ದೇನೆ.

ನಾನು ಮೌಂಟೇನ್ ಡ್ಯೂನ `ಡರ್ ಕೇ ಆಗೆ ಜೀತ್ ಹೈ’ ತತ್ತ್ವವನ್ನು ಬಲವಾಗಿ ನಂಬುತ್ತೇನೆ ಹಾಗೂ ಈ ತತ್ತ್ವಶಾಸ್ತ್ರವನ್ನು ಜೀವಂತವಾಗಿ ತರಲು ನಾನು ರೋಮಾಂಚಿತನಾಗಿದ್ದೇನೆ. ಈ ಸಾಹಸಮಯ ಚಿತ್ರವು ನನ್ನ ಅಭಿಮಾನಿಗಳಿಗೆ ಬಲವಾಗಿ ಒಪ್ಪುತ್ತದೆ ಹಾಗೂ ಆ ಭಯವನ್ನು ಧೈರ್ಯದಿಂದ ನಿಭಾಯಿಸಲು ಅವರನ್ನು ನಾನು ಪ್ರೇರೇಪಿಸುತ್ತದೆ ಎಂಬ ವಿಶ್ವಾಸ ನನಗಿದೆ’’ ಎಂದು ಹೇಳಿದರು.

ಮೌಂಟೇನ್ ಡ್ಯೂ ಟಿವಿಸಿಯನ್ನು ಟಿವಿ, ಡಿಜಿಟಲ್, ಹೊರಾಂಗಣ ಮತ್ತು ಸಾಮಾಜಿಕ ಮಾಧ್ಯಮಗಳಾದ್ಯಂತ 360 ಡಿಗ್ರಿ ಪ್ರಚಾರ ಮತ್ತು ಪ್ರಸಾರ ಮಾಡಲಾಗುತ್ತದೆ. ಮೌಂಟೇನ್ ಡ್ಯೂ ಸಿಂಗಲ್/ಮಲ್ಟಿ ಸರ್ವ್ ಪ್ಯಾಕ್ ಗಳಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ರೀಟೇಲ್ ಮಾರಾಟ ಮಳಿಗೆಗಳಲ್ಲಿ ಹಾಗೂ ಪ್ರಮುಖ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here