ಸ್ವಾತಂತ್ರ್ಯ ಹೋರಾಟದ ಜಾಗೃತಿಯಲ್ಲಿ ಉರ್ದು ವಿನ ಪಾತ್ರ ಅಪಾರವಾಗಿತ್ತು: ಅಜೀಜುಲ್ಲಾ ಸರಮಸ್ತ್

0
36

ಯಾದಗಿರಿ; ಕರ್ನಾಟಕ ಉರ್ದು ಅಕಾಡೆಮಿ ಮತ್ತು ಅಲ್ ಸಮದ್ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ನಗರದ ಅಬುಲ್ ಕಲಾಂ ಶಾಲೆಯಲ್ಲಿ ಭಾರತದ ಸ್ವಾತಂತ್ರö್ಯದಲ್ಲಿ ಉರ್ದುವಿನ ಪಾತ್ರ ಕುರಿತ ವಿಚಾರ ಸಂಕೀರಣ ಜರುಗಿತು.

ಅಬುಲ್ ಕಲಾಂ ಶಾಲೆಯ ಅಧ್ಯಕ್ಷ ಶಕೀಲ್ ಅಹಮ್ಮದ್ ಅದ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸಾಹಿಲ್ ಅಹಮ್ಮದ್ ಕುನ್ನಿಬಾವಿ ಆಗಮಿಸಿದ್ದರು, ಉರ್ದು ಸಿಆರ್‌ಪಿ. ಮಹಮ್ಮದ್ ಬಷೀರ್ ಆಗಮಿಸಿದ್ದರು.

Contact Your\'s Advertisement; 9902492681

ಕಲ್ಬುರ್ಗಿಯ ಹಿರಿಯ ಉರ್ದು ಕವಿ ಹಾಗೂ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ್ ಮಾತನಾಡಿ ಉರ್ದು ಭಾಷೆ ಯಾವುದೇ ಸಮುದಾಯದ ಭಾಷೆಯಲ್ಲ ಅದು ಈ ದೇಶದ ನೆಲದಿಂದ ಹುಟ್ಟಿಬಂದ ಭಾಷೆಯಾಗಿದೆ. ಮೊದಲ ಉರ್ದು ಪತ್ರಿಕೆಯನ್ನು ಕಲಕತ್ತಾದಲ್ಲಿ ಮುಸ್ಲಿಮೇತರರು ಅಂದರೆ ಹಿಂದು ವ್ಯಕ್ತಿ ಆರಂಭಿಸಿದರು, ಅದರ ಹೆಸರು ಜಾಮೆ ಜಹಾ ನುಮಾ ಆಗಿತ್ತು ಎಂದು ಸ್ಮರಿಸಿದರು.

ಸ್ವಾತಂತ್ರö್ಯ ಪೂರ್ವದಲ್ಲಿ 34 ಉರ್ದು ಪತ್ರಿಕೆಗಳು ಕೆಲಸ ಮಾಡಿವೆ. ಅದರಲ್ಲಿ ಕೇವಲ ಓರ್ವ ಮುಸ್ಲಿಂ ವ್ಯಕ್ತಿ ಸಂಪಾದಕರಾಗಿದ್ದರು, ಆ ಕಾಲದ ಸ್ವಾತಂತ್ರö್ಯ ಕಾಲದಲ್ಲಿ ಮುಸ್ಲಿಮೇತರ ಪತ್ರಕರ್ತರು ಮತ್ತು ಕವಿಗಳು ಸೇರಿ ಉರ್ದು ಭಾಷೆಯಲ್ಲಿ ಸ್ವಾತಂತ್ರö್ಯದ ಕಿಚ್ಚು ಹೊತ್ತಿಸಿ ಉರ್ದು ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದ್ದರು.

ನಿಜಾಮ ಸರ್ಕಾರದ ವೇಳೆ ಉರ್ದು ಸರ್ಕಾರದ ಅಧಿಕೃತ ಭಾಷೆ ಯಾಗಿ ಪ್ರಕಟಿಸಿದ್ದರು, ಮುಸ್ಲಿಮೇತರರೇ ಪ್ರಮುಖ ಹುದ್ದೆಗಳು ಅಲಂಕರಿಸಿದ್ದರು ಎಂದು ಹೇಳಿದರು.

ಉರ್ದು ಭಾಷೆಗೆ ಮುಸ್ಲಿಮೇತರರ ಕೊಡುಗೆ ಅಪಾರವಾಗಿದ್ದು ಇದರ ಕುರಿತು ಸಂಶೋಧನೆ, ಪ್ರಕಟಣೆ ಕಾರ್ಯವನ್ನು ಉರ್ದು ಅಕಾಡೆಮಿ ಮಾಡಬೇಕೆಂದು ಅವರು ಸಲಹೆ ನೀಡಿದರು. ಉರ್ದು ಒಂದು ಸುಂದರ ಭಾಷೆಯಾಗಿದ್ದು ಮತ್ತೆ ಅದರ ಗತವೈಭವ ಮರುಕಳಿಸಲು ಕನ್ನಡಿಗರು ಮತ್ತು ಕಸಾಪ ದಂತಹ ಕನ್ನಡ ಪರ ಸಂಘಟನೆಗಳು ಹೆಚ್ಚು ಹೆಚ್ಚು ಉರ್ದು ಭಾಷೆಗೆ ಸಹಯೋಗ ಈ ಹಿಂದೆ ಇದ್ದಂತೆ ನೀಡಬೇಕೆಂದು ಮನವಿ ಮಾಡಿದರು.

ಅಲ್ ಸಮದ್ ಸಂಸ್ಥೆಯ ಅಧ್ಯಕ್ಷ ಮುಬಿನ್ ಅಹಮ್ಮದ್ ಜಖಮ್ ಸ್ವಾಗತ, ನಿರೂಪಣೆ ವಂದನಾರ್ಪಣೆ ಗೈದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here