ಕಲಬುರಗಿ: ಮನುಷ್ಯ ಅನೋನ್ಯ ಭಾವ ಜೀವಿಯಾಗಿ ಬಾಳಿ ಪ್ರತಿಕ್ಷಣ ರಸವಂತಿಕೆಯಿಂದ ಬಾಳಲು ಹಬ್ಬ, ಜಾತ್ರೆ, ಉತ್ಸವದಂತಹ ಸಂಭ್ರಮದೊಂದಿಗೆ ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳಲು ಬಯಸುವ ಅವಕಾಶಗಳೆ ಹಬ್ಬಗಳಾಗಿವೆ ಎಂದು ಡಾ. ಮಿನಾಕ್ಷಿ ಬಾಳೆ ಹೇಳಿದರು,
ಶನಿವಾರ ಹೊಸ ವರ್ಷ ಯುಗಾದಿ ಪ್ರಯುಕ್ತ ಜಗತ್ ವೃದಲ್ಲಿರುವ ಬಸವೇಶ್ವರ ಮೂರ್ತಿಯ ಹತ್ತಿರ ಆಯೋಜಿಸಿದ್ದ ಸೌಹಾರ್ದ ಭಾರತಕ್ಕಾಗಿ ಸೌಹಾರ್ದ ಯುಗಾದಿ ಕಾರ್ಯಕ್ರಮ ಅಂಗವಾಗಿ ಸರ್ವ ಧರ್ಮಿಯರಿಂದ ಪರಸ್ಪರ ಬೇವು ಸೇವೆಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಪಟಬದ್ಧ ಹಿತಾಶಕ್ತಿಗಳು ತನ್ನ ರಾಜಕೀಯ ಮತ್ತು ಅಧಿಕಾರದ ದುರಾಸೆಗೆ ಸೌಹಾರ್ದತೆಯ ಭಾರತ ಸಂಸ್ಕೃತಿಗೆ ಬೆಂಕಿ ಹಚ್ಚಿ ನಮ್ಮಲಿರುವ ಸಮಾರಸ್ಯಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದ್ದು, ಇದಕ್ಕೆ ಈ ನೆಲದ ಜನರು ಅವಕಾಶ ನೀಡುವುದಿಲ್ಲ ಎಂಬಂತೆ ಈ ಹೊಸ ವರ್ಷದ ಯುಗಾದಿ ಪ್ರಯುಕ್ತ ಪರಸ್ಪರವಾಗಿ ಪ್ರಮಾಣ ಮಾಡುವ ಮೂಲಕ ಬೇವು ಸಿಹಿ ಹಿಂಚಿಕೊಂಡು ಬಾಳುವ ಕಡೆಗೆ ಹಜ್ಜೆ ನಮ್ಮದಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸೌಹಾರ್ದ ವೇದಿಕೆಯಿಂದ ಒಂದು ಕೋಮಿನವರಿಗೆ ಜಾತ್ರೆಗಳಲ್ಲಿ ವ್ಯವಹಾರ ನಡೆಸುವುದನ್ನು ಸರ್ವಧರ್ಮಿಯರು ಖಂಡಿಸಿದರು.
ವೇದಿಕೆಯಲ್ಲಿ ಫಾದರ್ ರಮೇಶ್, ಅರುಣ ಕುಮಾರ ಪಾಟೀಲ, ರಾಜು ಲೆಂಗಟಿ, ಅಜೀಮ್, ರುಬಿನಾ ಪರ್ವಿನ್, ಕನೀಜ್ ಫಾತೀಮಾ, ಶ್ರೀಶೈಲ ಘೂಳಿ, ಕೆ ನೀಲಾ, ರೀಜ್ವಾನದ ಸಿದ್ದಿಖಿ, ಸಂಜಯ ಮಾಕಲ್,ಪ್ರಭು ಖಾನಾಪುರೆ, ಉಮೇಶ ಶೆಟ್ಟಿ ಸೇರಿದಂತೆ ಹಲವು ಸಂಸ್ಥೆಯ ನಾಯಕರು ಮತ್ತು ಹೋರಾಟಗಾರರು ಉಪಸ್ಥಿತರಿದ್ದರು.