ಅಕ್ಕಲಕೋಟ ಪಟ್ಟಣದಲ್ಲಿ 2ನೇ ಮಹಾರಾಷ್ಟ್ರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

0
90

ಸೊಲ್ಲಾಪುರ: ಅಕ್ಕಲಕೋಟ, ದಕ್ಷಿಣ ಸೊಲ್ಲಾಪುರ ಹಾಗೂ ಜತ್ತ ತಾಲೂಕುಗಳಲ್ಲಿ ಸುಮಾರು 90 ರಷ್ಟು ಕನ್ನಡಿಗರಿದ್ದಾರೆ. ಈ ಭಾಗದ ಪ್ರತಿಯೊಬ್ಬರ ಮಾತೃ ಭಾಷೆ ಕನ್ನಡವಾಗಿದೆ. ಹೀಗಾಗಿ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಇಲ್ಲಿ ಕನ್ನಡ-ಮರಾಠಿ ಭಾಷಿಕರಲ್ಲಿ ಅನೋನ್ಯವಾದ ಬಾಂಧವ್ಯಗಳಿವೆ ಎಂದು ಅಕ್ಕಲಕೋಟ ಶಾಸಕ ಸಚಿನ್ ಕಲ್ಯಾಣಶೆಟ್ಟಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಗಡಿನಾಡು ಘಟಕದ ವತಿಯಿಂದ ಅಕ್ಕಲಕೋಟ ಪಟ್ಟಣದ ಪ್ರಿಯಾದರ್ಶಿನಿ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ 2ನೇ ಮಹಾರಾಷ್ಟ್ರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಅಕ್ಕಲಕೋಟ, ದ.ಸೊಲ್ಲಾಪುರ ತಾಲೂಕುಗಳು ಇವು ಕನ್ನಡಿಗರೇ ಇರುವ ತಾಲೂಕುಗಳು. ಇಲ್ಲಿ ನಿರಂತರವಾಗಿ ಕನ್ನಡದ ಕಾರ್ಯಕ್ರಮಗಳು ನಡೆಯುತ್ತಿರಬೇಕು.ಅದಕ್ಕೆ ಯಾವತ್ತೂ ತಮ್ಮ ಬೆಂಬಲ, ಸಹಕಾರ ಇರುತ್ತದೆ. ತಾವು ಕನ್ನಡಿಗರ ಮತಗಳ ಬೆಂಬಲದಿಂದ ಶಾಸಕನಾಗಿದ್ದು ಕನ್ನಡದ ಚಟುವಟಿಕೆಗಳಿಗೆ, ಕನ್ನಡಿರ ಸಮಸ್ಯೆಗಳಿಗೆ ಸ್ಪಂಧಿಸಿ ಅವುಗಳನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳ ಗಮನಕ್ಕೆ ತಂದು ಅವುಗಳನ್ನು ಬಗೆ ಹರಿಸುವ ಕಾರ್ಯ ತಾವು ಯಾವತ್ತು ಮಾಡುವದಾಗಿ ಶಾಸಕ ಕಲ್ಯಾಣಶೆಟ್ಟಿ ಹೇಳಿದರು.

ಸಾನಿಧ್ಯ ವಹಿಸಿದ್ದ ನಾಗಣಸೂರಿನ ಶ್ರೀಕಂಠ ಶ್ರೀಗಳು ಮಾತನಾಡಿ, ತಮ್ಮ ಅಕ್ಕಲಕೋಟದಲ್ಲಿ  ರಾಜ್ಯಮಟ್ಟದ ಎರಡನೆ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಇಲ್ಲಿಯ ಕನ್ನಡಿಗರಿಗೆ ಹರ್ಷ ತಂದಿದೆ. ಇಲ್ಲಿನ ಕನ್ನಡಿಗರ ಸ್ಥಿತಿ-ಗತಿಯ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡದು ಅವುಗಳನ್ನು ಎರಡು ಸರಕಾರದ ಗಮನಕ್ಕೆ ತಂದು ಕೊಡುವ ಕಾರ್ಯ ಮಾಡುವಂತಾಗಬೇಕು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಮಧುಮಾಲ ಲಿಗಾಡೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಅವರು, ಸೊಲ್ಲಾಪುರ, ಅಕ್ಕಲಕೋಟ ಮತ್ತು ಜತ ತಾಲೂಕುಗಳು ಗಡಿ ಕನ್ನಡದ ತಾಲೂಕುಗಳಾಗಿದ್ದು ಇವು ಶರಣರ ಬೀಡಾಗಿವೆ. ಇಲ್ಲಿ ಸೊಲ್ಲಾಪುರದ ಸಿದ್ಧರಾಮ, ಹಾವಿನಾಳ ಕಲ್ಲಯ್ಯ, ಬೊಮ್ಮಣ್ಣ, ಕರಜಗಿಯ ಗಜೇಶ ಮಸಣಯ್ಯ,- ಮಸಣಮ್ಮ, ಗುಡ್ಡಾಪುರದ ದಾನಮ್ಮ ಪ್ರಮುಖರು. ನಮ್ಮ ಜನಪದರು ತಮ್ಮ ಸಾಹಿತ್ಯದಲ್ಲಿ ಇವರೆಲ್ಲರ ಮಹಿಮೆ ಹಾಡಿ ಹೊಗಳಿದ್ದು ನಾವು ಕಾಣುತ್ತೆವೆ. ಇಲ್ಲಿ ವಚನಕಾರರಲ್ಲದೇ ಹಲವಾರು ಜನ ಕನ್ನಡ ಸಾಹಿತಿಗಳು ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾಧ್ಯಕ್ಷೆಯಾಗಿ ಸ್ತ್ರೀಕುಲಕ್ಕೆ ಕೀರ್ತಿ ತಂದು ಕೊಟ್ಟ ಜಯದೇವಿತಾಯಿ ಲಿಗಾಡೆ ಸೊಲ್ಲಾಪುರದವರೆಂದರೆ ನಮ್ಗೆಲ್ಲ ಎಂತ ಹೆಮ್ಮೆ ಎಂದ ಅವರು ಇದು ಗಡಿಯಾಗಿದ್ದರು ಕನ್ನಡದ ಅಭಿಮಾನಕ್ಕೇನು ಕೊರತೆ ಇಲ್ಲ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಕಡಿಮೆ ಕಾಲಾವಧಿಯಲ್ಲಿಯೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಕಲಕೋಟದಲ್ಲಿ ಹಮ್ಮಿಕೊಂಡಿದ್ದು ಈ ಭಾಗದ ಕನ್ನಡಿರಿಗೆ ಸಾಹಿತ್ಯ, ಕಲೆ, ಸಂಸ್ಕೃತಿಯ ರಸದೌತಣ ದೊರಕಿದಂತಾಗಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪರಿಷತ್ತು ಹಲವಾರು ಕಾರ್ಯಕ್ರಮಗಳು ಆಯೋಜಿಸುವ ಯೋಜನೆ ಹೊಂದಿದೆ ಎಂದುರು.

ಬೆಳಿಗ್ಗೆ 9.30ಕ್ಕೆ ಮಲ್ಲಿಕಾರ್ಜುನ ಮಂದಿರಿಂದ ಮೆರವಣಿಗೆ ನಡೆಯಿತು. ನಗರಸೇವಕ ಮಹೇಶ್ ಹಿಂಡೋಳೆ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಗಮನ ಸೆಳೆದವು.

ಸಮ್ಮೇಳನದಲ್ಲಿ ತಜ್ಞರಿಂದ ಕನ್ನಡ-ಮರಾಠಿ ಭಾಷಾ ಬಾಂಧವ್ಯ, ಮಹಾ ನೆಲದ ಸಾಹಿತಿಗಳ ತಲ್ಲಣ, ಮಹಾನೆಲದ ಶಾಲೆಗಳ ಸ್ಥಿ-ಗತಿ, ಮಹಾರಾಷ್ಟ್ರ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಪರಂಪರೆ, ಮಹಿಳಾ ಸಬಲೀಕರಣ ಕುರಿತಾದ ಗೋಷ್ಠಿಗಳು, ಕವಿಗೋಷ್ಠಿ, ಸಾಧಕರಿಗೆ ಗೌರವ ಸಮಾರಂಭ, ಸಾಂಸ್ಕøತಿಕ ಕಾರ್ಯಕ್ರಮಗಳು ಜನ ಮನರಂಜಿಸಿದವು. ಎರಡು ದಿನಗಳ ಕಾಲ ಗಡಿ ಕನ್ನಡಿಗರಿಗೆ ಸಾಹಿತ್ಯದ ರಸದೌತಣವೇ ದೊರಕಿತು.

ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರು :  ನಾಗಣಸೂರಿನ ಅಭಿನವ ಬಸವಲಿಂಗ ಶ್ರೀಗಳು, ಮಾದನಹಿಪ್ರಗಾದ ಅಭಿನವ ಶಿವಲಿಂಗ ಶ್ರೀಗಳು, ದುಧನಿಯ ಡಾ.ಶಾಂತಲಿಂಗ ಶ್ರೀಗಳು, ಹತ್ತಿಕಣಬಸದ ಪ್ರಭುಶಾಂತ ಸ್ವಾಮಿಗಳು, ಮುಗಳಿ ಬಸವಮಂಟಪದ ಮಹಾನಂದಾತಾಯಿ ಹಿರೇಮಠ, ಬಸವರಾಜ ಶಾಸ್ತ್ರೀ, ಅಮರಜ್ಯೋತಿ ಅಕ್ಕ ಚಿತ್ರ ನಿರ್ಮಾಪಕಿ ರಾಜಶ್ರೀ ಥಳಂಹೆ,  ಡಾ. ಆರ್. ಕೆ.ಪಾಟೀಲ, ಮಹೇಶ ಹಿಂಡೋಳೆ, ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿಯ ಪ್ರಮುಖ ಕಾರ್ಯಕಾಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ, ಶ್ರೀ ವಟವೃಕ್ಷ ಸ್ವಾಮಿ ಮಹಾರಾಜ ದೇವಸ್ಥಾನ ಅಧ್ಯಕ್ಷ ಮಹೇಶ ಇಂಗಳೆ, ಜಿಪಂ. ಪ್ರತಿಪಕ್ಷ ನೇತಾರ ಆನಂದ ತಾನವಡೆ, ಸಾಹಿತಿ  ಬಿಇಒ ಖೂದುಸಿಯಾ ಶೇಖ, ವಿಸ್ತೀರ್ಣಾಧಿಕಾರಿ ರತಿಲಾಲ ಭುಸೆ, ವೀರಭದ್ರ ಯಾದವಾಡ,  ಸೇರಿದಂತೆ ಹಲವಾರು ಕನ್ನಡಿಗರು ಇದ್ದರು.

ಸಮಾರಂಭದಲ್ಲಿ ಪಾಲ್ಗೊಂಡ ಸಾಹಿತಿಗಳು: ಡಾ. ರಾಜಶೇಖರ ಮಠಪತಿ, ಡಾ.ಬಿ.ಬಿಪೂಜಾರಿ, ಡಾ.ಶಶಿಕಾಂತ ಪಟ್ಟಣ, ಡಾ.ಪ್ರಭು ಖಾನಾಪೂರೆ, ಡಾ. ರಮೇಶ್ ಮುಲಗೆ, ಡಾ. ಸುಜಾತಾ ಶಾಸ್ತ್ರಿ, ಡಾ. ಸರಸ್ವತಿ ಚಿಮ್ಮಲಗಿ,  ಡಾ. ಗುರುಸಿದ್ಧಯ್ಯ ಸ್ವಾಮಿ, ಡಾ. ದಾಕ್ಷಾಯಿಣಿ ಯಡಹಳ್ಳಿ,  ಗಿರೀಶ ಜಕಾಪೂರೆ, ವಿನಯ ಚಂದ್ರಾ, ಶಿವಾನಂದ ಗೋಗಾವ, ಚಂದ್ರಕಾಂತ ಹಾರಕುಡ, ಸಿದ್ರಾಮ್ ಹೊನಕಲ್, ಎ. ಎಸ್.ಮಕಾನದಾರ್, ಕಾವ್ಯಶ್ರೀ ಮಹಾಗಾಂವಕರ್, ಜ್ಯೋತಿ ಕಡಕೋಳ ಸೇರಿದಂತೆ ಹಲವಾರು ಸಾಹಿತಿಗಳು ಇದ್ದರು.  

ಸಮ್ಮೇಳನ ಯಶಸ್ವಿಯಾಗಿ ಕಸಾಪ ಮಹಾರಾಷ್ಟ್ರ ಘಟಕದ ಗೌರವ ಕಾರ್ಯದರ್ಶಿ ಶರಣಪ್ಪ ಫುಲಾರಿ, ಗುರುಬಸು ವಗ್ಗೋಲಿ, ಕೋಶಾಧ್ಯಕ್ಷ ಮಹೇಶ ಮೇತ್ರಿ, ಪ್ರದೀಪ್ ಬೆಳ್ಳುಬ್ಬಿ, ಶರಣು ಕೋಳಿ, ದಿನೇಶ್ ಚವ್ಹಾಣ್,  ಪ್ರಕಾಶ್ ಪ್ರಧಾನ, ಶಾರದಾ ಅಂಬೇಸಂಗೆ, ಜ್ಯೋತಿ ಕಡಕೋಳ ಹಾಗೂ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ, ಉಪಾಧ್ಯಕ್ಷ ಬಸವರಾಜ ಧನಶೆಟ್ಟಿ, ಚಿದಾನಂದ ಮಠಪತಿ, ಶಿಕ್ಷಕ ನೇತಾರ ರಾಜಶೇಖರ ಉಮರಾಣಿಕರ, ವಿದ್ಯಾಧರ ಗುರವ, ಶರಣು ಕೋಳಿ, ಯಲ್ಲಪ್ಪ ಇಟೆನವರ, ಕಲ್ಮೆಶ ಅಡಳಟ್ಟಿ, ಸಂತೋಷ ಪರೀಟ, ರಾಜು ಗೋಬ್ಬೂರ, ನೀಲಕಂಠ ಕವಟಗಿ ಸೇರಿದಂತೆ ಮೊದಲಾದವರು ಇದ್ದರು.

ಸಮ್ಮೆಳನದ ಬಹಿರಂಗ ಸಭೆಯಲ್ಲಿ ಪರಿಷತ್ತಿನ ಕಾರ್ಯದರ್ಶಿ ಶರಣಪ್ಪ ಫುಲಾರಿ ಗೊತ್ತುವಳಿಗಳನ್ನು ಮಂಡಿಸಿದರು. ಹೊರನಾಡಿನಲ್ಲಿ ಕನ್ನಡ ಕಲಿತ ಮಕ್ಕಳಿಗೆ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಕಲ್ಪಿಸಲು ಪ್ರಯತ್ನ. ಕನ್ನಡ ಅಭ್ಯುದ್ಯಯಕ್ಕಾಗಿ ಗ್ರಾಮ ಮಟ್ಟದ ಕನ್ನಡ ಜಾತ್ರೆಗಳನ್ನು ಹಮ್ಮಿಕೊಳ್ಳುವದು.

ಕನ್ನಡ ಸಾಹಿತ್ಯ-ಸಂಸ್ಕøತಿ-ಭಾಷೆ ಉಳಿಸಿ ಬೆಳೆಸಲು ವಿಶೇಷ ಕ್ರೀಯಾಯೋಜನೆ ರಚಿಸುವದು. ಕನ್ನಡ ಸಾಹಿತ್ಯದ ಆಳವಾದ ಅಧ್ಯಯನಕ್ಕಾಗಿ ಅಭ್ಯಾಸ ಮಂಡಳಿ ಸ್ಥಾಪಿಸಿ ಸಂಪಾದಿತ ಕೃತಿ ಹೊರತರುವದು. ಉದಯೋನ್ಮುಖ ಸಾಹಿತಿಗಳ ಸಾಹಿತ್ಯ ಪ್ರಕಟಿಸುವದು. ಸರಕಾರಿ ಕನ್ನಡ ಶಾಲೆಗಳ ಬೆಳವಣಿಗೆಗೆ ವಿಶೇಷ ಪ್ರಾಧಾನ್ಯತೆ ಕೊಡುವದು.

ಕನ್ನಡ ಭಾಷೆ ಮಾತನಾಡುವ ಸ್ಥಳಗಳಲ್ಲಿ ಹೊಸದಾಗಿ ಕನ್ನಡ ಶಾಲೆಗಳನ್ನು ತೆರೆಯುವದು. ಎಲ್ಲ ಗಡಿ ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಿಸುವದು. ಮಹಾನೆಲದ ಸರಕಾರಿ ಕನ್ನಡ ಶಾಲೆಗಳಿಗೆ ಅಲ್ಪಸಂಖ್ಯಾತ ಭಾಷೆ ದರ್ಜೆ ಕಲ್ಪಿಸಲು ಪ್ರಯತ್ನ ಮಾಡುವದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here