ಶ್ರೀಶೈಲಂ ನಲ್ಲಿ ದಾಸೋಹ ಭವನದ ಭೂಮಿ ಪೂಜೆ

0
38

ಕಲಬುರಗಿ: ಸಮಾಜದಲ್ಲಿ ಮಠ-ಮಾನ್ಯಗಳಿಂದ ಸಂಸ್ಕಾರ ಸಂಸ್ಕೃತಿ ಬಿತ್ತುವ ಜೊತೆಗೆ ಅನ್ನ ದಾಸೋಹ, ಜ್ಞಾನ ದಾದೋಹ, ಆರೋಗ್ಯ ಹಾಗೂ ಶಿಕ್ಷಣ ಸೇವೆ ನಿರಂತರವಾಗಿ ನಡೆಯುತ್ತಿರುವುದರಿಂದ ಸಮಾಜದ ಮತ್ತು ಜನತೆಯ ಬದುಕು ಉತ್ತಮವಾಗಿ ರೂಪುಗೊಳ್ಳುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರದ ಜನಪ್ರೀಯ ಶಾಸಕರಾದ ದತ್ತಾತ್ರೇಯ ಪಾಟೀಲ ರವರು ಅಭಿಪ್ರಾಯಪಟ್ಟರು.

ಯುಗಾದಿ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀ ಜಗದ್ಗುರು ಸಾರಂಗಧರೇಶ್ವರ ರಾಷ್ಟ್ರೀಯ ಸೇವಾ ಪೀಠ ಅನ್ನಛತ್ರ ಶ್ರೀಶೈಲಂ ನಲ್ಲಿ ಏರ್ಪಡಿಸಿದ ದಾಸೋಹ ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನಾಡಿನ ಧಾರ್ಮಿಕ ಕ್ಷೇತ್ರಗಳು ಸರಕಾರದ ಜೊತೆ ಜೊತೆಗೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಇಂದು ಸಮಾಜದಲ್ಲಿ ಶಿಕ್ಷಣ ಕ್ರಾಂತಿ ಜೊತೆಗೆ ಜನರಲ್ಲಿ ಜಾಗೃತಿ ಮೂಡುತ್ತಿರುವುದು ಸಂತಸದ ವಿಷಯವಾಗಿದ್ದು ಸುಲಫಲ ಮಠ ಮತ್ತು ಸಾರಂಗಪೀಠದ ಜಗದ್ಗುರು ಶ್ರೀ ಡಾ. ಸಾರಂಗಧರೇಶ್ವರ ದೇಶಿಕೇಂದ್ರ ಮಹಾಸ್ವಾಮಿಗಳು ಸಮಾಜಕ್ಕಾಗಿ ತಮ್ಮ ಬದುಕನ್ನೇ ಮೀಸಲಿಟ್ಟು ವರ್ತಮಾನದಲ್ಲಿ ೧೨ನೇ ಶತಮಾನದ ಬಸವಾದಿ ಶಿವಶರಣರ ಆಶಯಗಳನ್ನು ಮುಂದುವರೆಸಿಕೊಂಡು ಹೊರಟಿದ್ದಾರೆಂದು ರೇವೂರ ಮುಕ್ತ ಕಂಠದಿಂದ ಹೊಗಳಿದರು.  ಜಗದ್ಗುರುಗಳು ಮಠ ಮಂದಿರಗಳ ಜೊತೆಗೆ ಲಕ್ಷಾಂತರ ಮನಸ್ಸುಗಳನ್ನು ಕಟ್ಟಿದ್ದಾರೆಂದು ಅವರು ನುಡಿದರು.

Contact Your\'s Advertisement; 9902492681

ದಿವ್ಯ ಸಾನಿಧ್ಯ ವಹಿಸಿದ ಪೀಠದ ಜಗದ್ಗುರು ಡಾ: ಸಾರಂಗಧರೇಶ್ವರ ಮಹಾಸ್ವಾಮಿಗಳು ಮಾತನಾಡಿ ಮಠ ಮಂದಿರಗಳಿಗೆ ಭಕ್ತರೇ ನಿಜವಾದ ಆಸ್ತಿಯಾಗಿದ್ದು, ತಮ್ಮ ಸ್ವಾಮಿತ್ವದ ಬದುಕಿನಲ್ಲಿ ಧರ್ಮ ಕಾರ್ಯದ ಜೊತೆಗೆ ಸಮಾಜ ಸೇವೆ ಮಾಡಲು ಎಲ್ಲ ಸಮುದಾಯದವರು ಆಸರೆಯಾಗಿ ನಿಂತಿರುವುದು ತಮಗೆ ಅತೀವ ಹರ್ಷ ತಂದಿದ್ದು ಎಲ್ಲರೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಂದರವಾದ ಬದುಕು ಕಟ್ಟಿಕೊಳ್ಳುವಂತೆ ಅವರು ಕರೆ ನೀಡಿದರು.

ವೇದಿಕೆ ಮೇಲೆ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ನಿರಾಣಿ ಉದ್ಯಮ ಸಮೂಹದ ನಿರ್ದೇಶಕರಾದ ಸಂಗಮೇಶ ನಿರಾಣಿ, ಉದ್ದಿಮೆದಾರರಾದ ಕಿರಣ ಶೆಟಗಾರ, ಪ್ರಥಮ ದರ್ಜೆ ಗುತ್ತಿಗೆದಾರರಾದ ದೇವಿಂದ್ರಪ್ಪಗೌಡ ಗೌಡಗೇರಿ, ಮಾತೋಶ್ರೀ ಸುನಂದಮ್ಮ ಹಿರೇಮಠ ಶೂರ್ಪಾಲಿ, ಎಂ.ಎಸ್.ರಾಜೇಶ್ವರಿ ಚಿತ್ರದುರ್ಗ, ಉದ್ದಿಮೆದಾರರಾದ ಚಂದ್ರಕಾಂತ ಸಂತಪೂರ, ಹೋರಾಟಗಾರರಾದ ನಾಗಲಿಂಗಯ್ಯ ಮಠಪತಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದಾಸೋಹ ಭವನಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ಸಮಾರಂಭದಲ್ಲಿ ಕಲಬುರಗಿ ಸೇರಿದಂತೆ ರಾಜ್ಯದಾದ್ಯಂತ ಆಗಮಿಸಿದ ಹತ್ತಾರು ಸಾವಿರ ಭಕ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here