ಆಳಂದ: ಪಟ್ಟಣದ ಲೋಕನಾಯಕ ಜಯ ಪ್ರಕಾಶ ನಾರಾಯಣ ಪ್ರೌಢಶಾಲೆಯಲ್ಲಿನ ೧೦ನೇ ತರಗತಿ ಪರೀಕ್ಷಾ ಕೇಂದ್ರದ ಇಂಗ್ಲಿಷ್ ಪರೀಕ್ಷೆಯ ದಿನದಂದು ಹೊರಗಿನಿಂದ ಯಾರೋ ದುರುದ್ದೇಶದಿಂದ ವಿಡಿಯೂ ಚಿತ್ರಿಕರಣ ಮಾಡಿ, ಸಂಸ್ಥೆಯ ಅಧ್ಯಕ್ಷರ ಹೆಸರು ಬಳಸಿ ಮಾಧ್ಯಮಗಳ ಮೂಲಕ ಅಪಪ್ರಚಾರ ಕೈಗೊಂಡಿರುವುದು ಹುರುಳಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ ಅವರು ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪರೀಕ್ಷಾ ಕೇಂದ್ರಕ್ಕೆ ಸುಸರ್ಜಿತ ಕಟ್ಟಡ ಹೊಂದಿರುವ ಲೋಕ ಜಯ ಪ್ರಕಾಶ ನಾರಾಯಣ ಪ್ರೌಢಶಾಲೆಯ ಪ್ರಸಕ್ತ ಈ ಪರೀಕ್ಷಾ ಕೇಂದ್ರಕ್ಕೆ ಸಂಸ್ಥೆಯಿಂದ ಕುಡಿಯುವ ನೀರು, ಡೆಸ್ಕ್, ಸಿಸಿ ಕ್ಯಾಮಿರಾ ಸೇರಿದಂತೆ ಮೂಲಸೌಲಭ್ಯ ಸಹಕಾರ ದೊರೆತಿದೆ. ಅಲ್ಲದೆ, ನಕಲಿಗೆ ಆಸ್ಪದ ವಿಲ್ಲದಂತೆ ಸುವ್ಯವಸ್ಥಿತವಾಗಿ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಪರೀಕ್ಷೆ ಸುಗವಾಗಿ ನಡೆಯುತ್ತಿವೆ ಎಂದು ಅವರು ಹೇಳಿದರು.
ಪರೀಕ್ಷಾ ಕೇಂದ್ರದಲ್ಲಿ ನಕಲಿಗೆ ಆಸ್ಪದ ನೀಡದೆ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆದ ಮೇಲೂ ಯಾರೂ ದುರುದ್ದೇಶದಿಂದ ಪರೀಕ್ಷಾ ಕೇಂದ್ರದ ಹೊರಗಿನಿಂದ ವಿಡಿಯೂ ಚಿತ್ರ್ರೀಕರಣ ಮಾಡಿ ಅಪಪ್ರಚಾರ ಕೈಗೊಂಡಿರುವುದು ಸರಿಯಲ್ಲ. ಏ.೪ರಂದು ನಡೆಯಲಿರುವ ಗಣಿತ, ೬ರಂದು ಸಮಾಜ ವಿಜ್ಞಾನ ೮ ರಂದು ಹಿಂದಿ ೧೧ರಂದು ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬೀಗಿ ಭದ್ರತೆ ಒದಗಿಸು ಅಡೆ, ತಡೆ ಆಗದಂತೆ ನೋಡಿಕೊಳ್ಳಲಾಗುವುದು. ಇದಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಪಾಲಕರ ಸಹಕಾರ ನೀಡಬೇಕು ಎಂದು ಅವರು ತಿಳಿಸಿದ್ದಾರೆ. ಈ ವೇಳೆ ಎಲ್‌ಎನ್‌ಜೆಪಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ರಾಮಚಂದ್ರ ಕಟ್ಟಿ ಇದ್ದರು.