ಲಿಂ.ಮಲ್ಕಣ್ಣಗೌಡ ಪೊಲೀಸ್ ಪಾಟೀಲರ ೨೨ನೇ ಸ್ಮರಣೋತ್ಸವ

0
45

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ (ಕೆ) ಗ್ರಾಮದ ಪೊಲೀಸ್ ಪಾಟೀಲ ಮನೆತನದ ಅವಿಭಕ್ತ ಕುಟುಂಬದ ಹಿರಿಯ ಸದಸ್ಯರಲ್ಲಿ ಲಿಂ.ಮಲ್ಕಣ್ಣಗೌಡ ಪಾಟೀಲ ಕೂಡ ಒಬ್ಬರು. ಅವರ ಸ್ಮರಣಾರ್ಥ ಈ ಬಾರಿ ಅತ್ಯಂತ ಸರಳವಾಗಿ ಕಾರ್ಯಕ್ರಮ ನಡೆಯಿತು ಎಂದು ಬಿ.ಎಂ.ಪಾಟೀಲ್ ಕಲ್ಲೂರ ತಿಳಿಸಿದ್ದಾರೆ.

ಲಿಂ. ಮಲ್ಕಣ್ಣಗೌಡ ಪೊಲೀಸ್ ಪಾಟೀಲ ಅವರ ಸಮಾಜ ಸೇವೆ ಅತ್ಯಂತ ಶ್ಲಾಘನೀಯವಾಗಿದೆ. ಗ್ರಾಮದಲ್ಲಿ ಯಾವುದೇ ಮನೆ ಅಥವಾ ಧಾರ್ಮಿಕ ಕಾರ್ಯಕ್ರಮಗಳು ಇರಲಿ ಅಲ್ಲಿ ಅವರು ತಮ್ಮನ್ನು ತವು ತೊಡಗಿಸಿಕೊಳ್ಳುತ್ತಿದ್ದರು. ದೇವಾಲಯ ಕಟ್ಟಡ ಕಟ್ಟುವುದು, ಜಾತ್ರೆ, ಹಬ್ಬ ಹರಿದಿನಗಳಲ್ಲಿ ಭಾಗವಹಿಸಿ ಸಮಾಜದ ಋಊಣ ತೀರಿಸಿದ ಅಪರೂಪದ ರೈತ ನಾಯಕ, ಊರಿನ ಯಾವುದೇ ಒಳ್ಳೆಯ ಕೆಲಸ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಸದಾ ಒಂದಿಲ್ಲೊಂದು ಕೆಲಸ ಮಾಡುತ್ತಿದ್ದರು. ದೇವಾಲಯದಲ್ಲಿ ಪುರಾಣ, ಪ್ರವಚನ, ಭಜನೆ, ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದ್ದರು.

Contact Your\'s Advertisement; 9902492681

ಪ್ರತಿ ವರ್ಷ ಅಮೋಘಸಿದ್ಧೇಶ್ವರ ಜಾತ್ರೆ, ಮೂರು ವರ್ಷಕ್ಕೊಮ್ಮೆ ಮರಗಮ್ಮದೇವಿ ಜಾತ್ರೆ, ಶ್ರಾವಣದಲ್ಲಿ ಭಜನೆಗಳು ಮತ್ತು ಊರಿನಲ್ಲಿ ಮದುವೆ ಕಾರ್ಯ ಮುಂತಾದವುಗಳು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದ್ದರು. “ಊರಿನ ಮರಿಯಾದಿ, ನಮ್ಮ ಮರಿಯಾದಿ” ಎಂದು ಯುವಕರಿಗೆ ಕಿವಿ ಮಾತು ಹೇಳುತ್ತಿದ್ದರು.

ಅವರು ನಿರಂತರವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುತ್ತಿದ್ದರು. ನಾಲ್ಕು ಎತ್ತಿನ ಒಕ್ಕಲುತನ ಮತ್ತು ಆಳುಗಳು ವ್ಯವಸಾಯದಲ್ಲಿ ಹೆಚ್ಚು ಆಸಕ್ತಿ ಅವರಿಗಿತ್ತು. ಸ್ವಂತ ವ್ಯವಸಾಯ ಮಾಡುವುದರ ಜೊತೆಗೆ ಊರಿನ ಸುತ್ತ ಮುತ್ತಲಿನ ಗ್ರಾಮದ ನ್ಯಾಯ ಪಂಚಾಯತಿ ಕೂಡ ಮಾಡುತ್ತಿದ್ದರು. ಸುತ್ತಮುತ್ತಲಿನ ಗ್ರಾಮಗಳಾದ ಕಲ್ಲೂರ ಬಿ, ಯಂಕಂಚಿ, ಕೂಡಲಗಿ, ಮಹೂರ, ಮಂದೇವಾಲ, ಬಳ್ಳುಂಡಗಿ, ನೆಲೋಗಿ ಎಲ್ಲಾ ಊರಿನಲ್ಲಿ ಅವರು ಚಿರಪರಿಚಿತರು ಆಗಿದ್ದರು.

ಯಾವುದೇ ಜಾತಿ, ಧರ್ಮ ನೋಡದೆ ಮಾನವರು ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದರು. ಇಂದಿಗೂ ಊರಿನಲ್ಲಿ ಅವರ ಹೆಸರು ಎಲ್ಲರ ಬಾಯಿಯಲ್ಲಿ ಮತ್ತು ಅವರ ಉಸಿರಿನಲ್ಲಿ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ. ಅವರ ಕಾಲದಲ್ಲಿ ಸಾರಾಯಿ ಮುಕ್ತ ಗ್ರಾಮ ಕೆಲವು ವರ್ಷ ನಮ್ಮ ಗ್ರಾಮವಾಗಿತ್ತು. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಅವರ ಸೇವೆ ಮತ್ತು ಕಾರ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಬಹುದು.

ಲಿಂ.ಮಲ್ಕಣ್ಣಗೌಡ ಪೊಲೀಸ್ ಪಾಟೀಲ ಅವರ ಸ್ಮರಣಾರ್ಥವಾಗಿ ಶಾಲಾ ಮಕ್ಕಳಿಗೆ ಎಸ್ ಎಸ್.ಎಲ್.ಸಿ. ಪಾಸಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಹಣ, ಸುಮಾರು ೧೬ ವರ್ಷಗಳಿಂದ ನಿರಂತರವಾಗಿ ಕಲ್ಲೂರ (ಕೆ) ಸರಕಾರಿ ಪ್ರೌಢ ಶಾಲೆಯಲ್ಲಿ ನೀಡಲಾಗುತ್ತಿದೆ ತಂದೆ ಮಾಡಿರುವ ಸಮಾಜ ಸೇವೆ ನನಗೆ ಮಾರ್ಗದರ್ಶನ ನೀಡುತ್ತದೆ. -ಬಿ.ಎಂ. ಪಾಟೀಲ ಕಲ್ಲೂರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here