ಸಂಶೋಧನೆಗಾಗಿ ವಿದೇಶ ಪ್ರಯಾಣ ಪ್ರವೃತ್ತಿ ತಡೆ: ಡಾ. ನಿಷ್ಠಿ

0
62

ಕಲಬುರಗಿ: ಭಾರತದ ದೇಶದ ಪ್ರಾಚೀನ ವಿಶ್ವವಿದ್ಯಾಲಯಗಳಾದ ನಳಂದ ಮತ್ತು ತಕ್ಷಶೀಲ ವಿಶ್ವವಿದ್ಯಾಲಯಗಳು ವಿದೇಶ ಸಂಶೋಧಕರಿಗೆ ಜ್ಞಾನದ ಮೂಲಗಳಾಗಿವೆ. ಯುವಕರು ಸಂಶೋಧನಾ ಚಟುವಟಿಕೆಗಳಿಗೋಸ್ಕರ ವಿದೇಶಕ್ಕೆ ಪ್ರಯಾಣ ಬೆಳೆಸುವ ಪ್ರವೃತ್ತಿಯನ್ನು ತಡೆಯುವದು ರಾಷ್ಟ್ರೀಯ ಶಿಕ್ಷಣ ನೀತಿ-೨೦೧೯ರ ಮೂಲಕ ಸಾಧ್ಯವಾಗುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ಅಭಿಪ್ರಾಯಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯ ಆವರಣದ ದೊಡಪ್ಪ ಅಪ್ಪಾ ಸಭಾಮಟಪದಲ್ಲಿ ಸೋಮವಾರ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ’ರಾಷ್ಟ್ರೀಯ ಶಿಕ್ಷಣ ನೀತಿ -೨೦೧೯ರ ಅವಲೋಕನ’ ಎಂಬ ವಿಷಯ ಕುರಿತು ವಿಚಾರ ಮಂಡಿಸಿದ್ದ ಅವರು, ದೇಶದ ಒಟ್ಟು ಉತ್ಪನ್ನದಲ್ಲಿ (ಜಿಡಿಪಿ) ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ವ್ಯಯ ಮಾಡಲಾಗುತ್ತಿದೆ. ದೇಶದಲ್ಲಿ ಮಂಧಗತದಲ್ಲಿ ಸಾಗುತ್ತಿರುವ ಕಾರ್ಯಯೋಜನೆಗಳಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತ ದೇಶ ಬಡದೇಶವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ವಿವಿ ಕುಲಪತಿ ಡಾ. ಅನೀಲಕುಮಾರ ಬಿಡವೆ ’ಗುಣಮಟ್ಟದ ವಿಶ್ವವಿದ್ಯಾಲಯ ಮತ್ತು ಕಾಲೇಜು’ ಎಂಬ ವಿಷಯದ ಬಗ್ಗೆ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಸುಸ್ಥಿರತೆಯನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ. ಸಮಾನತೆ ಮತ್ತು ಉನ್ನತ ಮಟ್ಟದ ಜ್ಞಾನದ ಆಧಾರದ ಮೇಲೆ ಸಮಾಜ ನಿರ್ಮಾಣಗೊಳ್ಳಲು ಸಹಕಾರಿಯಾಗಿದೆ. ಈ ನೀತಿಯು ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಗುರಿ ಹೊಂದಿದೆ. ದೇಶದಾದಂತ್ಯ ಮಲ್ಟಿಡಿಸಿಪ್ಲೆನರಿ ಉನ್ನತ ಶಿಕ್ಷಣದ ಈ ನೀತಿ ಶಿಕ್ಷಣ ಕ್ಷೇತ್ರ ಸುಧಾರಿಸುವಲ್ಲಿ ಸಕರಾತ್ಮಕ ಪರಿಣಾಮ ಬೀರುತ್ತದೆ ಎಂದರು.

ಉನ್ನತ ಶಿಕ್ಷಣಕ್ಕೆ ಪಡೆಯುವ ವಿದ್ಯಾರ್ಥಿಗಳಿಗೆ ಅವರವರ ಆರ್ಥಿಕ ಪರಿಸ್ಥಿತಿಯ ಮತ್ತು ಅರ್ಹತೆಯ ಆಧಾರದ ಮೇಲೆ ಸರ್ಕಾರ ವಿದ್ಯಾರ್ಥಿ ವೇತನ ಒದಗಿಸಬೇಕು. ರಾಷ್ಟ್ರೀಯ ಶಿಕ್ಷಣ ಕ್ಷೇತ್ರದಲ್ಲಿನ ಬೆಳವಣಿಗೆ, ಶಿಕ್ಷಣದಲ್ಲಿನ ಅಡೆತಡೆ ಹಾಗೂ ಸಮಸ್ಯೆಗಳನ್ನು ನಿವಾರಿಸಲು ರಾಷ್ಟ್ರೀಯ ಶಿಕ್ಷಣ ನೀತಿಯು ಸದುಪಯೋಗೊಳ್ಳುವುದರ ಜೊತೆಗೆ ಒಳ್ಳೆಯ ಪರಿಣಾಮ ನೀಡಬಲ್ಲದು. ರಾಷ್ಟ್ರೀಯ ಶಿಕ್ಷಣ ನೀತಿಯ ಧೇಯ, ಗುರಿ ಉದ್ದೇಶ ಮತ್ತು ಸಮಸ್ಯೆ ಮತ್ತು ಪರಿಹಾರೋಪಗಳ ಬಗ್ಗೆ ವಿವರವಾಗಿ ವಿಚಾರ ಮಂಡಿಸಿದರು.

ವಿವಿ ಸಮಕುಲಪತಿ ಡಾ.ವಿ.ಡಿ.ಮೈತ್ರಿ ’ಅತ್ಯುತ್ತಮ ಕಲಿಕಾ ವಾತಾವರಣ ಮತ್ತು ವಿದ್ಯಾರ್ಥಿಗಳಿಗೆ ಬೆಂಬಲ’ ವಿಷಯದ ಬಗ್ಗೆ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾದ ಎಲ್ಲ ಪ್ರಮುಖ ಬದಲಾವಣೆ ಅಂಶಗಳು ಅಭಿವೃದ್ಧಿ ಹೊಂದಿದ್ದ ದೇಶದಲ್ಲಿ ಪ್ರಸ್ತುತ ಚಾಲ್ತಿಯಲ್ಲಿವೆ. ಅಭಿವೃದ್ಧಿ ಹೊಂದಿದ್ದ ದೇಶಗಳಿಗೆ ಹೊಲಿಸಿದರೇ ಭಾರತ ದೇಶ ಶೈಕ್ಷನಿಕವಾಗಿ ಹಿನ್ನೆಡೆಯಲ್ಲಿದೆ ಎಂದರು.

ಉತ್ಕೃಷ್ಟ ಮಟ್ಟದ ಪಠ್ಯಕ್ರಮ ಹಾಗೂ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಬೆಂಬಲದಿಂದ ಗುಣಮಟ್ಟದ ಕಲಿಕೆಯ ವಾತಾವರಣ ಸೃಷ್ಟಿಸಲು ಸಾಧ್ಯವಾಗುತ್ತದೆ. ಗುರಿ ನಿರ್ದಿಷ್ಟವಾದ, ಆಕರ್ಷಕವಾದ ಪಠ್ಯಕ್ರಮ ವಿನ್ಯಾಸಗೊಳಿಸುವ ಅವಶ್ಯಕತೆಯಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸಂಸ್ಥೆಗಳು ಕಠಿಣ, ಕಿರಿದಾದ ಮತ್ತು ಬಳಕೆಯಲ್ಲಿಲ್ಲದ ಪಠ್ಯಕ್ರಮವನ್ನು ಅನುಸರಿಸುತ್ತವೆ. ಶಿಸ್ತಿನ ಜ್ಞಾನ ಮತ್ತು ಶಿಕ್ಷಣ ಅಭ್ಯಾಸಗಳಲ್ಲಿನ ಆಧುನಿಕ ಪ್ರಗತಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಇದು ಶೈಕ್ಷಣಿಕವಾಗಿ ದೇಶವನ್ನು ಹಿಮುಖಗೊಳಿಸುತ್ತಿದೆ ಯುಜಿಸಿ, ಎಐಸಿಟಿ, ಎನ್‌ಎಎಸಿ ನಿಗದಿಪಡಿಸಿದ ಪಠ್ಯಕ್ರಮದ ಯೋಜನಾ ಕ್ರಮಗಳಿಗೆ ಶಿಕ್ಷಣ ಸಂಸ್ಥೆಗಳು ಸ್ಪಂದಿಸಬೇಕು ಎಂದರು.

ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು, ವಿದ್ಯಾರ್ಥಿಗಳು ಸ್ವತಂತ್ರವಾಗಿ ಓದುವದು, ಸ್ವತಂತ್ರವಾಗಿ ಬರೆಯುವುದು ಮತ್ತು ಸ್ವತಂತ್ರವಾಗಿ ಮಾತನಾಡುವಿಕೆಯನ್ನು ತಾರ್ಕಿಕ ಮತ್ತು ವಿಶ್ಲೇಷಣೆ ಮುಂತಾದ ಹೆಚ್ಚುವರಿ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲಕ್ಕಾಗಿ ರೂಪಿಸಿದ್ದ ಈ ಶಿಕ್ಷಣ ನೀತಿಯನ್ನು ಈ ಮೊದಲೇ ನಿರ್ದೇಶಿಸಿದ್ದಾರೆ ಎಂದರು.

ಡಾ. ಶಿವಕುಮಾರ ಜವಳಗಿ ನಿರೂಪಿಸಿದರು. ಪ್ರೊ. ಶೋಭನಾ ಪ್ರಾರ್ಥಿಸಿದರು. ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ಸ್ವಾಗತಿಸಿದರು. ಅಧಿವೇಶನದಲ್ಲಿ ಸು ೨೦೦ಕ್ಕೂ ಹೆಚ್ಚು ಪ್ರಾಧ್ಯಾಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here