ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಚನ್ನಬಸವಣ್ಣ, ಶಿವಮೂರ್ತಿ ಆಯ್ಕೆ

0
36

ಸೇಡಂ: ಪತ್ರಕರ್ತ ದಿ. ವೀರಭದ್ರ ಮಾಮನಿ ಸ್ಮರಣಾರ್ಥ ಕೊಡಮಾಡುವ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ  ಯಾದಗಿರಿ ವರದಿಗಾರ ಚನ್ನಬಸವಣ್ಣ ಮತ್ತು ರಾಯಚೂರು ವರದಿಗಾರ ಶಿವಮೂರ್ತಿ ಹಿರೇಮಠ ಭಾಜನರಾಗಿದ್ದಾರೆ.

ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನದ ವತಿಯಿಂದ ಜುಲೈ 23 ರಂದು ಮುಂಜಾನೆ 10-30ಕ್ಕೆ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಶ್ರೀ ಮಹಾಂತೇಶ್ವರ ಹಿರೇಮಠದ ಡಾ. ತ್ರಿಮೂರ್ತಿ ಶಿವಾಚಾರ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ವಹಿಸುವರು.
ದಶಮಾನೋತ್ಸವ ಸಂಭ್ರಮ: ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಬಾರಿ ಪತ್ರಿಕಾ ಸೇವೆಯನ್ನು ಪರಿಗಣಿಸಿ ಅನೇಕ ಪತ್ರಕರ್ತರಿಗೆ ಗೌರವ ಪ್ರಶಸ್ತಿ ನೀಡಲಾಗುತ್ತಿದ್ದು, ಹಿರಿಯ ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್, ಟಿ.ವಿ. ಶಿವಾನಂದನ್, ಸಂಪಾದಕ ಪಿ.ಎಂ. ಮಣ್ಣೂರ್, ಶ್ರೀಕಾಂತಾಚಾರ್ಯ ಮಣ್ಣುರ್, ಹಿರಿಯ ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ಸಂಪಾದಕ ಡಿ. ಶಿವಲಿಂಗಪ್ಪ, ವೀರಣ್ಣಗೌಡ ಯಡ್ಡಳ್ಳಿ, ಉರ್ದು ಪತ್ರಿಕೆ ಯೋದ್ದಿನ್ ಪಾಶಾ ಭಾಜನರಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here