ಸಾಹಿತಿ, ನಾಟಕಕಾರ ಡಿ.ಎಸ್.ಚೌಗಲೆ ಅವರೊಂದಿಗೆ ಒಂದಿಷ್ಟು ಹರಟೆ

0
23
  • ಕೆ.ಶಿವು.ಲಕ್ಕಣ್ಣವರ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಎಸ್.ಚೌಗಲೆ ಅವರು ಪ್ರಮುಖರಾದವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಡಿ.ಎಸ್.ಚೌಗಲೆ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದವರು.

ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿ, ಈಗ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಡಿ.ಎಸ್.ಚೌಗಲೆ ಅವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’, ಇವು ಡಿ.ಎಸ್.ಚೌಗಲೆಯವರ ಬಹುಚರ್ಚಿತ ನಾಟಕಗಳಾಗಿವೆ..!

Contact Your\'s Advertisement; 9902492681

1998 ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ಗಾಂಧಿ’, ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನ್ನೇ ಉಂಟು ಮಾಡಿತ್ತು. ’ಗಾಂಧಿ-ಅಂಬೇಡ್ಕರ’, ’ಪೇಯಿಂಗ್ ಗೆಸ್ಟ್’, ’ಕಿರವಂತ’, ‘ಶುದ್ಧ ’ಚದುರಂಗ ಮತ್ತು ಕತ್ತೆ’, ’ಶುದ್ಧವಂಶ’, ‘ಸತ್ಯ ಶೋಧಕ’ ಮುಂತಾದ ನಾಟಕಗಳನ್ನೂ ಕನ್ನಡಕ್ಕೆ ಕೊಟ್ಟಿದ್ದಾರೆ ಡಿ.ಎಸ್.ಚೌಗಲೆಯವರು. ‘ನೆರಳುಗಳು’ (ಕಾದಂಬರಿ), ’ನಿನ್ನ ಮೇಲೆ ಸಿಟ್ಟಿಲ್ಲ ಮಾಯಿ’, ಆಯ್ದ ಮರಾಠಿ ಕತೆಗಳು, ’ಮರಾಠಿ ಕೈದಿಗಳ ಕವಿತೆಗಳು’, ಇವು ಪ್ರಮುಖ ಅನುವಾದಿತ ಕೃತಿಗಳಾಗಿವೆ.

’ವಾರಸಾ’, ’ಒಡಲ ಉರಿಯ ಹೊತ್ತು’, ‘ಚೌಗಲೆ ಕತೆಗಳು’, ’ಜಂಗು ಹಿಡಿದ ಬ್ಲೇಡು’, ‘ಸೀಮೆಗೊಂದು ಅಟಾಟಿ’ ಅವರ ಕಥಾ ಸಂಕಲನಗಳು. ‘ಸುಡುಕಾವಿನ ಒಣ ಎಲೆ’ ಕವನ ಸಂಕಲನ, ‘ಕನ್ನಡ-ಮರಾಠಿ ಆಧುನಿಕ ರಂಗಭೂಮಿ’ ಸಂಶೋಧನ ಕೃತಿಗಳು, ಅಲ್ಲದೇ ಮರಾಠಿ ಚಿತ್ರ ಒಂದಕ್ಕೆ ಕನ್ನಡ ಸಂಭಾಷಣೆಯನ್ನೂ ಬರೆದಿರುವರು ಇವರು.

ಚಿತ್ರಕಲಾವಿದರಾದ ಡಿ.ಎಸ್.ಚೌಗಲೆಯವರ ಪ್ರಮುಖ ಚಿತ್ರಕಲಾ ಪ್ರದರ್ಶನಗಳು ಬೆಂಗಳೂರು, ಮುಂಬಯಿ, ಪುಣೆ, ಕೊಚ್ಚಿನ, ಚೆನ್ನೈ ಹಾಗೂ ಹೈದರಾಬಾದಿನಲ್ಲಿ ನಡೆದಿವೆ. ಚಿತ್ರಕಲೆ ಮತ್ತು ರಂಗಭೂಮಿ ಕುರಿತು ಹಲವು ಕೃತಿಗಳನ್ನು ರಚಿಸಿರುವ ಡಿ.ಎಸ್.ಚೌಗಲೆಯವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ‘ನಾಟಕಕಾರ ಪ್ರಶಸ್ತಿ,’ ‘ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,’ ದಿಶಾಂತರ ನಾಟಕಕ್ಕೆ ಪ್ರತಿಷ್ಠಿತ ‘ಚದುರಂಗ’ ಪ್ರಶಸ್ತಿ’ ಮತ್ತು ‘ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ’ಗಳೂ ಸೇರಿ ಹದಿನಾರು ಪ್ರಶಸ್ತಿ, ಪುರಸ್ಕಾರಗಳೂ ಸಂದಿವೆ..!

ಕನ್ನಡ-ಮರಾಠಿ ರಂಗಭೂಮಿ ಸೇವೆಗೆ ಮುಂಬೈ ಕರ್ನಾಟಕ ಸಂಘದ ‘ವರದರಾಜ ಆದ್ಯ’ ಪ್ರಶಸ್ತಿಯೂ ಲಭಿಸಿದೆ. ಅವರು ಮುಂಬೈ ವಿಶ್ವವಿದ್ಯಾಲಯದ ಜಾನಪದ ರಂಗಭೂಮಿ ವಿಭಾಗ ಮತ್ತು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ ನಾಟಕ ವಿಭಾಗದ ರಂಗತಜ್ಞರಾಗಿಯೂ ಸೇವೆ ಸಲ್ಲಿಸಿದ್ದಾರೆ.

‘ದಿಶಾಂತರ’, ‘ವಖಾರಿಧೂಸ, ‘ಉದ್ದಷ್ಟ’ ನಾಟಕಗಳು ಮರಾರಿ ಮತ್ತು ಇಂಗ್ಲಿಷ್‌ಗೆ ಅನುವಾದಗೊಂಡಿವೆ. ಟರ್ಕಿ ದೇಶದಲ್ಲಿ ನಡೆದ ವಿಶ್ವಕಲಾ ಮೇಳದಲ್ಲಿ ಭಾಗಿಯಾಗಿದ್ದಾರೆ ಡಿ.ಎಸ್.ಚೌಗಲೆಯವರು ಕೂಡ. ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ರಂಗ ಸಮಾಜದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಡಿ.ಎಸ್.ಚೌಗಲೆಯವರು ಅವರು. ಅವರೊಂದಿಗಿನ ಒಂದಿಷ್ಟು ಹರಟೆಯೂ…

# 80 ರ ದಶಕದಲೇ ಕನ್ನಡ ರಂಗಭೂಮಿಯ ಪ್ರಮುಖ ನಾಟಕಕಾರರಾಗಿ ಗುರುತಿಸಿಕೊಂಡವರು ಡಿ.ಎಸ್.ಚೌಗಲೆಯವರು. ಅಲ್ಲದೇ ಆ ಬಗೆಗೆ ಒಂದಿಷ್ಟು ಹರಟೆಯೂ. ‘ಗಾಂಧಿ ವರ್ಸಸ್‌ ಗಾಂಧಿ’ ನಾಟಕದ ಮೂಲಕ 80ರ ದಶಕದಲ್ಲೇ ಕನ್ನಡ ರಂಗಭೂಮಿಯ ಪ್ರಮುಖ ನಾಟಕಕಾರರಾಗಿ ಗುರುತಿಸಿಕೊಂಡ ಡಿ.ಎಸ್‌.ಚೌಗುಲೆ ಹಲವು ಮರಾಠಿ ನಾಟಕಗಳನ್ನು ಕನ್ನಡಕ್ಕೆ ತಂದವರು. ಈ ರಂಗಕರ್ಮಿಯ ಒಂದಿಷ್ಟು ಮಾತು ಹೀಗಿದೆ ನೋಡಿರಿ.

ಡಿ.ಎಸ್.ಚೌಗಲೆಯವರ ಊರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಬಳಿಯ ಬೆಡಕಿಹಾಳ. ಗಡಿಗ್ರಾಮವದು. ಸಹಜವಾಗಿ ಡಿ.ಎಸ್. ಚೌಗಲೆಯವರಿಗೆ ಮರಾಠಿ ಭಾಷೆಯ ಜ್ಞಾನ ಮತ್ತು ಸಂವಹನ ಬಂದಿತು. ಹೀಗೆಂದು ಹೇಳುವ ಡಿ.ಎಸ್.ಚೌಗಲೆಯವರು. ಅವರ ಊರಲ್ಲಿ ದಸರಾಕ್ಕೆ ನಡೆಯುವ ಗ್ರಾಮದೇವರು ಸಿದ್ದೇಶ್ವರರ ಜಾತ್ರೆ, ದಸರಾ ಹಬ್ಬಕ್ಕೆ ಜಾನಪದ ಹಿನ್ನೆಲೆಯ ಶ್ರೀಕೃಷ್ಣ ಪಾರಿಜಾತಗಳ ಪ್ರದರ್ಶನ, ಮರಾಠಿ ನಾಟಕ ಸೋಂಗಾಡೆ, ಸೋಂಗಿ ಭಜನ (ಸಂಗೀತ ಆಧರಿತ) ವೀಕ್ಷಣೆ, ಆಲಿಸುವಿಕೆ ಡಿ.ಎಸ್.ಚೌಗಲೆಯವರ ಮೇಲೆ ಅಗಾಧ ಪ್ರಭಾವ ಬೀರಿತು. ಆ ಪ್ರಭಾವವೇ ಮುಂದೆ ಡಿ.ಎಸ್.ಚೌಗಲೆಯವರಿಗೆ ನಾಟಕಗಳ ಬಗೆಗೆ ಆಸಕ್ತಿ ಹೆಚ್ಚಲು ಕಾರಣವಾಯಿತು..!

ಮರಾಠಿಯ ಕಾಳು-ಬಾಳು ತಮಾಷಾ ತಂಡದ ನಾಟಕ ಡಿ.ಎಸ್.ಚೌಗಲೆಯವರ ಮೇಲೆ ಬಹಳ ಪ್ರಭಾವ ಬೀರಿತು. ಕನ್ನಡದ ಸಣ್ಣಾಟ, ಕಂಪನಿ ನಾಟಕಗಳೂ ಮತ್ತು ಪಾರಿಜಾತ ನೋಡುವುದರ ಜೊತೆಗೆ ಓದಿ ತಿಳಿಯುವ ಹವ್ಯಾಸದಿಂದ ನನ್ನಲ್ಲಿರಂಗಾಸಕ್ತಿ ಹೆಚ್ಚಿತು. ಜಯವಂತ ದಳವಿ ಅವರ ರಾಜಕೀಯ ನಾಟಕಗಳು, ತೆಂಡೂಲ್ಕರ್‌ ಅವರ ಮರಾಠಿ ನಾಟಕಗಳನ್ನು ನೋಡಿದ್ದರು ಡಿ.ಎಸ್.ಚೌಗಲೆಯವರು, ಹೀಗೆಯೇ ನಾಟಕಗಳು ಡಿ.ಎಸ್.ಚೌಗಲೆಯವರು ರಂಗಸಾಹಿತ್ಯ ರಚನೆಯತ್ತ ವಾಲಲು ಕಾರಣವಾಯಿತು.

1998 ರಲ್ಲಿ ಡಿ.ಎಸ್.ಚೌಗಲೆಯವರು ಅನುವಾದಿಸಿದ ‘ಗಾಂಧಿ ವರ್ಸಸ್‌ ಗಾಂಧಿ’ ನಾಟಕ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಹಲವು ವಿಮರ್ಶಕರು ಈ ನಾಟಕದ ರಂಗಭಾಷೆಯನ್ನು ತುಂಬು ಹೃದಯದಿಂದ ಶ್ಲಾಘಿಘಿಸಿದರು. 2005 ರಲ್ಲಿಬರೆದ ‘ದಿಶಾಂತರ’ ಡಿ.ಎಸ್.ಚೌಗಲೆಯವರ ಮೊದಲ ನಾಟಕವಾಯಿತು. ಇದರಲ್ಲಿ ಡಿ.ಎಸ್.ಚೌಗಲೆಯವರ ಭಾಗದ ತಂಬಾಕು ಉದ್ದಿಮೆಯಲ್ಲಿ ತೊಡಗಿದ್ದ ಮಹಿಳಾ ಕಾರ್ಮಿಕರ ಶೋಷಣೆಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ ಡಿ.ಎಸ್.ಚೌಗಲೆಯವರು.

ಇದಕ್ಕೆ ಪ್ರತಿರೋಧವೊಡ್ಡಿ ಚಳವಳಿ ಸ್ವರೂಪ ಪಡೆದ ಬಗೆಗೆ ಇದರಲ್ಲಿ ಪ್ರಸ್ತಾಪಿಸಿದ್ದಾರೆ ಡಿ.ಎಸ್.ಚೌಗಲೆಯವರು. ಇದಕ್ಕೆ ರಂಗ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ದಿಶಾಂತರವನ್ನು ಡಿ.ಎಸ್.ಚೌಗಲೆಯವರು, ಮತ್ತು ಜಂಬೆ ಹಾಗೂ ದೇವೇಂದ್ರ ಅವರು ಸೇರಿ ‘ವಖಾರಿ ಧೂಸ್‌’ (ಚಾಳನ ಧೂಳು) ಎನ್ನುವ ಇಂಪ್ರೂವೈಸ್ಡ್‌ ನಾಟಕ ತಯಾರಿಸದಿರು.

ಅದಲ್ಲದೇ ಗಾಂಧಿ ಅವರ ಬಗ್ಗೆ ‘ಕಸ್ತೂರ ಬಾ’ ಎನ್ನುವ ನಾಟಕ ಮೊದಲ ಬಾರಿಗೆ ಬರೆದದ್ದು ಡಿ.ಎಸ್.ಚೌಗಲೆಯವರೇ.
ಆರ್‌. ನಾಗೇಶ ಅವರ ಆಗ್ರಹ ಮೇರೆಗೆ ಉಮಾಶ್ರೀ ಅವರಿಗಾಗಿ ‘ಪೇಯಿಂಗ್‌ ಗೆಸ್ಟ್‌’ ನಾಟಕ ಬರೆದರು ಡಿ.ಎಸ್.ಚೌಗಲೆಯವರು.

ಸಮಕಾಲೀನ ಹಾಗೂ ಪ್ರಚಲಿತ ವಿದ್ಯಮಾನಗಳೇ ಡಿ.ಎಸ್.ಚೌಗಲೆಯವರ ನಾಟಕದ ಕಥಾಹಂದರವಾಗಿವೆ. ತಂಬಾಕು ವಖಾರಿ(ಚಾಳ)ಗಳಲ್ಲಿ ಮಹಿಳಾ ಕಾರ್ಮಿಕರ ಮೇಲೆ ನಡೆಯುವ ಶೋಷಣೆ, ಮತ್ತು ಈ ಶೋಷಣೆಯ ವಿರುದ್ಧ ನಡೆಯುವ ಧ್ವನಿಯನ್ನು ಹತ್ತಿಕ್ಕುವ ರಾಜಕೀಯ ಹುನ್ನಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಡಿ.ಎಸ್.ಚೌಗಲೆಯವರು.

ಪಾತ್ರಗಳಿಗೆ ಸ್ಥಳೀಯ ಭಾಷೆಯ ಬಳಕೆಯೇ ಡಿ.ಎಸ್.ಚೌಗಲೆಯವರ ಶಕ್ತಿಯಾಗಿದೆ. ಅನುಭವಜನ್ಯ ಮತ್ತು ಡಿ.ಎಸ್.ಚೌಗಲೆಯವರ ಊರಿನ ಭಾಗದ ಸಂವೇದನೆ ಚೌಗಲೆಯವರ ರಂಗಸಾಹಿತ್ಯದ ಶಕ್ತಿಯಾಗಿಸಿತು. ‘ಉಧ್ವಸ್ಥ’ ಎನ್ನುವ ನಾಟಕ ಭೂಮಾಫಿಯಾ ಬಗ್ಗೆಯೇ ಇದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಆಶಯದ ಹಿನ್ನೆಲೆಯಲ್ಲಿ ಡಿ.ಎಸ್.ಚೌಗಲೆಯವರ ನಾಟಕದ ಕಥಾವಸ್ತು ಆಗಿರುತ್ತದೆ. ಚೌಗಲೆಯವರ ನಾಟಕಗಳು ಪ್ರದರ್ಶನ ಕಂಡದ್ದು ನಾಡಿನ ಶ್ರೇಷ್ಠ ನಿರ್ದೇಶಕರ ಕೈಯಲ್ಲಿ ಎನ್ನುವುದು ನಮ್ಮ ಹೆಮ್ಮೆಯಾಗಿದೆ. ಜಯತೀರ್ಥ ಜೋಶಿ, ಚಿದಂಬರರಾವ್‌ ಜಂಬೆ, ಪುಣೆಯ ಅತುಲ್‌, ಬಿ.ಸುರೇಶ ಹೀಗೆಯೇ ದಿಗ್ಗಜರ ಸಾಲು ಸಾಲೇ ಇದೆ.

ಸ್ವಂತವಾಗಿ ರಂಗಸಾಹಿತ್ಯ ರಚಿಸುವುದು ಸುಲಭವಾಗಿದೆ. ಆದರೆ ಅನುವಾದ ಮಾಡುವುದು ತುಂಬಾ ಕಷ್ಟದ ಕೆಲಸವಾಗಿರುತ್ತದೆ. ಪ್ರಪ್ರಥಮವಾಗಿ ಡಿ.ಎಸ್.ಚೌಗಲೆಯವರು ಜಯವಂತ ದಳವಿ ಅವರ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬರೀ ನಾಟಕಗಳನ್ನಷ್ಟೇ ಅಲ್ಲ. ಕಾವ್ಯ, ಕಾದಂಬರಿಯನ್ನೂ ಡಿ.ಎಸ್.ಚೌಗಲೆಯವರು ಅನುವಾದ ಮಾಡಿದ್ದಾರೆ.

ಕಾವ್ಯ ಅಥವಾ ನಾಟಕದ ಕ್ಯಾರೆಕ್ಟರ್‌(ಪಾತ್ರ)ಗಳು ರಚನೆಯಾದ ಕಾಲಘಟ್ಟದ ಪರಿಸರ ಪ್ರಜ್ಞೆಯ ಜ್ಞಾನ ಹೊಂದಿದ್ದರಿಂದ ಡಿ.ಎಸ್.ಚೌಗಲೆಯವರಿಗೆ ಅನುವಾದ ಸುಲಭವಾಗಿ ಒಗ್ಗಿತು. ‘ಸತ್ಯಶೋಧಕ’ ಎನ್ನುವ ಮರಾಠಿ ನಾಟಕ ಅನುವಾದದಲ್ಲಿ ಫುಲೆ ಸಮುದಾಯದ ಮತ್ತು ಮರಾಠಿ ಪೇಶ್ವೆ ಬ್ರಾಹ್ಮಣ ಸಮುದಾಯದ ಭಾಷೆಯನ್ನು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಡಿ.ಎಸ್.ಚೌಗಲೆಯವರು ‘ತಮಾಷಾ’ ನಾಟಕದ ಹಾಸ್ಯಪ್ರಸಂಗಗಳು ಮರಾಠಿಯಲ್ಲಿ ಅನುವಾದಗೊಂಡು ಸಾಕಷ್ಟು ಮೆಚ್ಚುಗೆಗಳನ್ನೂ ಪಡೆದಿವೆ.

ಕನ್ನಡ ರಂಗಭೂಮಿಯಲ್ಲಿ ಸ್ವಲ್ಪ ಪ್ರಯೋಗಶೀಲತೆಯ ಕೊರತೆಯಿದೆ. ಹೊಸ ವಿಷಯ ಮತ್ತು ಹೊಸ ಆಶಯಗಳನ್ನು ಇಟ್ಟುಕೊಂಡ ನಾಟಕ ರಚನೆ ನಮ್ಮಲ್ಲಿಲ್ಲ. ಪುರಾಣ, ಮಹಾಕಾವ್ಯದ ಮತ್ತು ಜಾನಪದ ನೆರಳಲ್ಲೇ ನಮ್ಮಲ್ಲಿ ನಾಟಕಗಳು ರಚನೆಯಾಗುತ್ತಿವೆ. ಇವುಗಳ ಜೊತೆಗೆ ವಾಸ್ತವವಾದಿ ನಾಟಕಗಳ ಶೈಲೀಕೃತ ಪ್ರಯೋಗ ನಡೆಯಬೇಕಿದೆ.

ಮರಾಠಿ ರಂಗಭೂಮಿಯಲ್ಲಿಪ್ರಾಯೋಗಿಕ ನಾಟಕ ಮತ್ತು ವ್ಯಾವಸಾಯಿಕ (ಕಮರ್ಷಿಯಲ್‌) ನಾಟಕಗಳು ಎಂದು ಎರಡು ವಿಧವಿದೆ. ಮರಾಠಿ ರಂಗಭೂಮಿಗೆ ಹೋಲಿಸಿದರೆ ನಾವು ಅವರಿಗಿಂತ 20 ವರ್ಷ ಹಿಂದಿದ್ದೇವೆ. ಬೆಂಗಳೂರಿನಾಚೆ ನಡೆಯುವ ನಾಟಕಗಳ ವಿಮರ್ಶೆ ಮತ್ತು ಚರ್ಚೆಯಾಗಬೇಕು. ನಿರ್ದೇಶಕರ ಹೆಸರಲ್ಲಿ, ನಾಟಕಕಾರನ ಹೆಸರಲ್ಲಿ ನಮ್ಮಲ್ಲಿ ನಾಟಕ ನಡೆಯುತ್ತವೆ. ಆದರೆ ಮರಾಠಿ ರಂಗಭೂಮಿಯಲ್ಲಿ ನಟನ ಹೆಸರಲ್ಲಿನಾಟಕ ನಡೆಯುತ್ತವೆ. ಹೀಗೆನ್ನುತ್ತಾರೆ ಡಿ.ಎಸ್.ಚೌಗಲೆಯವರು..!

ರಂಗಭೂಮಿಯಲ್ಲಿ ಅಥವಾ ಈ ಕ್ಷೇತ್ರದಲ್ಲಿ ದಿಢೀರ್‌ ಸಾಧನೆ, ಕೀರ್ತಿ ಅಸಾಧ್ಯದ ಮಾತು. ತಾವು ಕಲಿತ ಬಂದ ‘ಸ್ಕೂಲ್‌ ಆಫ್‌ ಥಾಟ್‌’ನಿಂದ ಆಚೆ ಬಂದು ಹೊಸ ಪ್ರಯೋಗ, ವಿಚಾರಗಳನ್ನು ಮಾಡಿದರೆ ಯಶಸ್ಸು ಸಿಗುತ್ತದೆ. ಇದರ ಜೊತೆಗೆ ಶ್ರದ್ಧೆಯೂ ಬಹಳ ಮುಖ್ಯವು. ಪ್ರಯೋಗಶೀಲತೆಯೂ ಬಹು ಮುಖ್ಯವಾಗಿದೆ ಎನ್ನುತ್ತಾರೆ ಡಿ.ಎಸ್.ಚೌಗಲೆಯವರು. ರಂಗಭೂಮಿಯ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಛಾತಿಯೂ ಬೇಕು. ಪ್ರೇಕ್ಷಕರಿಗೆ ರಸಾನುಭವ ನೀಡುವಲ್ಲಿ ಯಶಸ್ವಿಯಾಗಬೇಕೆಂದರೆ ಪಾತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂಬುದೂ ಡಿ.ಎಸ್.ಚೌಗಲೆಯವರ ಅಂಬೋಣವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here