ಜೇವರ್ಗಿ : ತಾಲೂಕಿನ ಕಟ್ಟಿಸಂಗವಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಗ್ರಾಮಸ್ಥರಿಂದ ತಾಲೂಕ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಮದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಟ್ಟಿಸಂಗಾವಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿ ಪಿ.ಡಿ.ಒ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿರಲಿಲ್ಲ ಇದರಿಂದ ಕೆರಳಿದ ಗ್ರಾಮಸ್ಥರು ಏಕಾಏಕಿ ತಾಲೂಕು ಪಂಚಾಯಿತಿ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವವರೆಗೂ ಇಲ್ಲಿಂದ ಎದ್ದು ಹೋಗೋದಿಲ್ಲ ಎಂದು ಪಟ್ಟು ಹಿಡಿದರು ಮತ್ತು ದುರಂಕಾರದ ಮಾತುಗಳನ್ನಾಡಿರುವ ಹಾಗೂ ಕೆ.ಡಿ.ಪಿ ಮೀಟಿಂಗ್ನಲ್ಲಿ ಜೇವರ್ಗಿ ಶಾಸಕರಿಗೆ 2 ಲಕ್ಷ ರೂಪಾಯಿ ಜೆಸ್ಕಾಂ ಗೆ ನೀಡಲಾಗಿದೆ ಎಂದು ಸುಳ್ಳು ಮಾಹಿತಿ ಕೊಟ್ಟಿರುವ ಪಿ.ಡಿ.ಒ ಅಮಾನತು ಮಾಡುವಂತೆ ಒತ್ತಾಯಿಸಿದರು.
ನಂತರ ಕಟ್ಟಿಸಂಗವಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿದ ನಂತರ ಪ್ರತಿಭಟನೆಕಾರರು ಪ್ರತಿಭಟನೆಯನ್ನು ಮೊಟಕುಗೊಳಿಸಿದರು.
ಈ ಪ್ರತಿಭಟನೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಾಬು, ಬೀರಪ್ಪ ಪೂಜಾರಿ, ಮಹೇಶ್ ಛತ್ರಿ, ಮಲ್ಲನಗೌಡ ಪೊಲೀಸ್ ಪಾಟೀಲ್, ಮಲ್ಕಣ್ಣಗೌಡ ಗಂಗಣ್ಣ ಮ್ಯಾಗೇರಿ, ಸಂಗಮೇಶ್ ದಸ್ತಗಾರ್, ಶರಣು ಕಟ್ಟಿಮನಿ, ಮನೋಹರ್ ಕಟ್ಟಿಸಂಗಾವಿ, ಮಾಂತಪ್ಪ ಜೈನಾಪುರ ಇನ್ನು ಮುಂತಾದವರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದರು.