ಶಹಾಬಾದ: ನಗರದ ನಗರಸಭೆಯಲ್ಲಿ ಶುಕ್ರವಾರ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಸುಮಾರು 34.17 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.
ನಗರಸಭೆಯ 2022-23ನೇ ಸಾಲಿನ ಪ್ರಾರಂಭಿಕ ಶುಲ್ಕ 984.57 ಲಕ್ಷ ರೂ, ಅಂದಾಜು ಆದಾಯ 1917.2 ಲಕ್ಷ ಒಟ್ಟು 2901.77 ಲಕ್ಷ ರೂ. ಆದಾಯ ನಿರೀಕ್ಷಿತ ಬೃಹತ್ ಗಾತ್ರದ ಬಜೆಟನಲ್ಲಿ ಅಂದಾಜು ವೆಚ್ಚ 2867.6ಲಕ್ಷ ರೂ.ಗಳಾಗಲಿದ್ದು, ಒಟ್ಟು 34.17 ಲಕ್ಷ ರೂ. ಉಳಿತಾಯ ಬಜೆಟ್‍ನ್ನು ಸಮುದಾಯ ಸಂಘಟಕ ಅಧಿಕಾರಿ ರಘುನಾಥ ನರಸಾಳೆ ಮಂಡಿಸಿದರು.
ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.Á್ಷದಾಯ ಮೂಲವಾಗಿ ವಿದ್ಯುತ್ ಅನುದಾನ 350 ಲಕ್ಷ,ಎಸ್‍ಎಫ್‍ಸಿ ಮುಕ್ತ ನಿಧಿ (ಅಭಿವೃದ್ಧಿ)- 100 ಲಕ್ಷ, ಎಸ್‍ಎಫ್‍ಸಿ ಮುಕ್ತ ನಿಧಿ ( ಕುಡಿಯುವ ನೀರು)-10 ಲಕ್ಷ, ಎಸ್‍ಎಫ್‍ಸಿ ಮುಕ್ತ ನಿಧಿ(ಸ್ವಚ್ಛ ಭಾರತ)-10 ಲಕ್ಷ, ಆಸ್ತಿ ತೆರಿಗೆ-30 ಲಕ್ಷ, ದಂಡ ಮತ್ತು ಜುಲ್ಮಾನೆಗಳಿಂದ-10 ಲಕ್ಷ,ಪರಿಶಿಷ್ಟ ಜಾತಿ ಪರಿಶೀಷ್ಟ ಪಂಗಡಗಳ ಅಭಿವೃದ್ಧಿ-10 ಲಕ್ಷ, 15 ನೇ ಹಣಕಾಸು ಯೋಜನೆ-300ಲಕ್ಷ,ಎಸ್‍ಎಫ್‍ಸಿ ಅನುದಾನ- 100 ಲಕ್ಷ,ನಲ್ಮ ಅನುದಾನ 5 ಲಕ್ಷ,ಖಾತೆ ಬದಲಾವಣೆ ಶುಲ್ಕ 35 ಲಕ್ಷ ಸೇರಿದಂತೆ ಇನ್ನೀತರ ಮೂಲಗಳಿಂದ ಒಟ್ಟು 2901.77 ಲಕ್ಷ ರೂ. ಆದಾಯ ನಿರೀಕ್ಷಕಿಸಲಾಗಿದೆ.
ಇದರಲ್ಲಿ ನಗರದ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಆಡಳಿತಕ್ಕಾಗಿ ವೇತನ ಭತ್ಯೆಗಳು ಮತ್ತು ಇತರ ಸವಲತ್ತುಗಳು-400 ಲಕ್ಷ,ಪ್ರಯಾಣ ದಿನವೆಚ್ಚ-10ರಸ್ತೆ ದುರಸ್ತಿ-5 ಲಕ್ಷ, ಲಕ್ಷ, ಜಾಹೀರಾತು ಮತ್ತು ಪ್ರಸರಣಕ್ಕೆ -5 ಲಕ್ಷ, ಕಟ್ಟಡ ದುರಸ್ತಿಶಕ್ತಿ ಮತ್ತು ಇಂಧನ (ವಿದ್ಯುತ್ ಶುಲ್ಕ-ಬೀದಿ ದೀಪ) 350 ಲಕ್ಷ,ಸ್ಮಶಾನ ಭೂಮಿ ಅಭಿವೃದ್ಧಿ ಪಡಿಸಲು -10 ಲಕ್ಷ, ಡಿಸೇಲ್ ಬಿಲ್ಲು- 21 ಲಕ್ಷ, ನೀರು ಸರಬರಾಜು ದರಸ್ತಿ ಹಾಗೂ ನಿರ್ವಹಣೆಗೆ-50 ಲಕ್ಷ, ಯಂತ್ರಗಳ ದುರಸ್ತಿ ಮತ್ತು ನಿರ್ವಹಣೆಗೆ-20 ಲಕ್ಷ, ಉದ್ಯಾನವನಗಳ ದುರಸ್ತಿ ಹಾಗೂ ನಿರ್ವಹಣೆಗೆ-10 ಲಕ್ಷ, ಮತ್ತು ನಿರ್ವಹಣೆಗೆ-2ಲಕ್ಷ,ಚುನಾವಣೆ ವೆಚ್ಚ- 5ಲಕ್ಷ, ಪರಿಶಿಷ್ಟ ಜಾತಿ ಪರಿಶೀಷ್ಟ ಪಂಗಡಗಳ ಅಭಿವೃದ್ಧಿ-10 ಲಕ್ಷ ಒಳಗೊಂಡಂತೆ 2867.6ಲಕ್ಷ ರೂ. ವೆಚ್ಚಕ್ಕಾಗಿ ಮೀಸಲಿಡಲಾಗಿದೆ.ಒಟ್ಟು 34.17 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ.ಅಲ್ಲದೇ ತೈಬಜಾರನಲ್ಲಿ ವ್ಯಾಪಾರ ಮಾಡುವ ವಿವಿಧ ವ್ಯಾಪಾರಿಗಳಿಗೆ ತೆರಿಗೆ ನಿಗಧಿಪಡಿಸಿ, ಬಹಿರಂಗ ಹರಾಜು ಮಾಡಲು ಸದಸ್ಯರಿಂದ ಒಪ್ಪಿಗೆ ಪಡೆಯಲಾಯಿತು.
ಸಭೆಯಲ್ಲಿ ಕಾನೂನು ಸೇವೆಗೆ 5 ಲಕ್ಷ ರೂ. ತೆಗೆದಿಡುವ ಅವಶ್ಯಕತೆಯಿಲ್ಲ. ನಗರಸಭೆಯ ವಕೀಲರು ಯಾವುದೇ ಕಾನೂನಾತ್ಮಕವಾಗಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.ನಗರಸಭೆಯ ಪರವಾಗಿ ಯಾವುದೇ ತೀರ್ಪುಗಳು ಬಂದಿಲ್ಲ.ಆದರೂ ಅನಗತ್ಯವಾಗಿ ಹಣ ನೀಡಲಾಗುತ್ತಿದೆ.ಆದ್ದರಿಂದ ವಕೀಲರನ್ನು ಬದಲಾವಣೆ ಮಾಡಿ.ಇಲ್ಲದಿದ್ದಲ್ಲಿ ದಾವೆÀ ನಡೆಸುವ ಸಂದರ್ಭದಲ್ಲಿ ಮಾತ್ರ ಹಣ ನೀಡಿ ಎಂದು ನಗರಸಭೆಯ ಸದಸ್ಯ ರವಿ ರಾಠೋಡ ಒತ್ತಾಯಿಸಿದರು. ಟ್ರ್ಯಾಕ್ಟರ್ ದುರಸ್ತಿಗೆ 15 ಲಕ್ಷ ರೂ. ಅನುದಾನ ಇಡುವ ಬದಲು ಹೊಸ ಟ್ರ್ಯಾಕ್ಟರ್ ಖರೀದಿಸುವಂತೆ ಸದಸ್ಯರಾದ ಡಾ.ಅಹ್ಮದ್ ಪಟೇಲ್, ರವಿ ರಾಠೋಡ ಹಾಗೂ ಸದಸ್ಯರೆಲ್ಲರೂ ಹೇಳಿದರು.
ಪ್ರಯಾಣ ದಿನವೆಚ್ಚ 5 ಲಕ್ಷದಿಂದ 10 ಲಕ್ಷರೂ.ಗೆ,ದೂರವಾಣಿ ವೆಚ್ಚಕ್ಕೆ 1 ಲಕ್ಷದಿಂದ 2 ಲಕ್ಷಕ್ಕೆ, ರಸ್ತೆ ದುರಸ್ತಿಗೆ 5 ಲಕ್ಷಕ್ಕಿಂತ 10 ಲಕ್ಷ ರೂ.ಗೆ, ಮುಳ್ಳು ಕಂಟಿ ಗಿಡ ಕೀಳುವುದು 5 ಲಕ್ಷಕ್ಕಿಂತ 10 ಲಕ್ಷ ರೂ.ಗೆ ಹೆಚ್ಚಿಸಲು ಸದಸ್ಯರೆಲ್ಲರೂ ಹೇಳಿದರು.ನಮತರ ಸರಕಾರದ ಆದೇಶ ಮೇರೆಗೆ ಆಸ್ತಿ ತೆರಿಗೆ ಪರಿಷ್ಕರಣೆಯನ್ನು 3 ರಿಂದ ಶೇ 5 ರಷ್ಟು ಹೆಚ್ಚಿಸಲು ಅವಕಾಶ ಇದ್ದು, ಇದರಲ್ಲಿ ಶೇ 3 ರಷ್ಟು ಹೆಚ್ಚಿಸಲು ಮತ್ತು ಆಸ್ತಿ ವರ್ಗಾವಣೆ ತೆರಿಗೆ ಶೇ8 ರಷ್ಟು ಇರುವುದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದ್ದು, ಅದನ್ನು ಶೇ 5 ಕ್ಕೆ ಇಳಿಸಬೇಕೆಂದು ಸರ್ವಾನುಮತದಿಂದ ಸರ್ವಸದಸ್ಯರು ಒಪ್ಪಿಗೆ ಸೂಚಿಸಿದರು.
ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ , ಎಇಇ ಶರಣು ಪೂಜಾರಿ, ಕಚೇರಿ ವ್ಯವಸ್ಥಾಪಕ ಶರಣಗೌಡ ಪಾಟೀಲ,ಕಂದಾಯ ಅಧಿಕಾರಿ ಸುನೀಲ ವೀರಶೆಟ್ಟಿ, ಎಇ ಶಾಂತರೆಡ್ಡಿ ದಂಡಗುಲಕರ್, ಜೆಇ ಮೌಲಾ ಅಲಿ, ಸಮುದಾಯ ಸಂಘಟಕ ಅಧಿಕಾರಿ ರಘುನಾಥ ನರಸಾಳೆ, ಆರೋಗ್ಯ ನೀರಿಕ್ಷಕ ಶಿವರಾಜಕುಮಾರ, ರಾಜೇಶ, ಶರಣು, ಸೇರಿದಂತೆ ನಗರಸಭೆಯ ಸರ್ವ ಸದಸ್ಯರು ಮತ್ತು ಸಿಬ್ಬಂದಿಗಳು ಇದ್ದರು.