ಸುರಪುರ: ದಕ್ಷ ಪೊಲೀಸ್ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜರಾಗಿರುವ ಸುರಪುರ ಪೊಲೀಸ್ ಉಪ ವಿಭಾದ ಉಪಾಧೀಕ್ಷಕ ಡಾ:ದೇವರಾಜ್ ಬಿ.ಅವರಿಗೆ ವಿವಿಧ ಸಂಘಟನೆಗಳು ಸನ್ಮಾನಿಸಿ ಅಭಿನಂಧಿಸಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಅನೇಕ ಮುಖಂಡರು ಭಾಗವಹಿಸಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ದಕ್ಷ ಪೊಲೀಸ್ ಅಧಿಕಾರಿಯಾಗಿ ಜೊತೆಗೆ ಸಾಹಿತ್ಯದ ಅಭಿರುಚಿಯುಳ್ಳ ನೊಂದವರ,ಶೋಷಣೆಗೊಳಗಾದವರ ಪರವಾಗಿ ನಿಂತು ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕರ್ತವ್ಯ ಸಲ್ಲಿಸಿರುವ ಹಾಗೂ ಸಹಾಯಕ ಆಯುಕ್ತರಾಗಿ ನೇಮಕಗೊಂಡಿರುವ ಡಾ:ದೇವರಾಜ್ ಬಿ ಅವರ ಸೇವೆ ಅನನ್ಯವಾಗಿದೆ.ಅವರ ಮುಂದಿನ ದಿನಗಳು ಹಾಗು ಲಭಿಸಿರುವ ಸೇವೆಯಲ್ಲಿಯೂ ಇದೇ ರೀತಿಯಲ್ಲಿ ನೊಂದವರ,ಶೋಷಿತರ ಪರವಾಗಿ ನಿಂತು ಸೇವೆ ನೀಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ,ದೇವಿಂದ್ರಪ್ಪ ಪತ್ತಾರ,ಮರೆಪ್ಪ ಹಾಲಗೇರಾ,ಮೂರ್ತಿ ಬೊಮ್ಮನಹಳ್ಳಿ,ರಾಮಣ್ಣ ಶೆಳ್ಳಗಿ,ಬಸವರಾಜ ಶೆಳ್ಳಗಿ,ಧರ್ಮರಾಜ ಬಡಿಗೇರ,ಜಟ್ಟೆಪ್ಪ ನಾಗರಾಳ,ಮರೆಪ್ಪ ದೇವಿಕೇರಾ,ಮಹೇಶ ಯಾದಗಿರಿ,ಹಣಮಂತ ದೊರೆ ಬಿಜಾಸಪುರ,ಸುರೇಶ ಹಾಲಗೇರಾ,ಖಾಜಾಹುಸೇನ ಗುಡಗುಂಟಿ,ಹಣಮಂತ ಕರ್ನಾಳ,ಚಿರಂಜೀವಿ ಝಂಡದಕೇರಾ ಸೇರಿದಂತೆ ಅನೇಕರಿದ್ದರು.
ಜೆ.ಡಿ.ಎಸ್ ಪಕ್ಷ ಸನ್ಮಾನ: ಜೆಡಿಎಸ್ ಪಕ್ಷದಿಂದಲೂ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಡಿವೈಎಸ್ಪಿ ಡಾ:ದೇವರಾಜ್ ಬಿ ಅವರಿಗೆ ಸನ್ಮಾನಿಸಿ ಗೌರವಿಸಲಾಗಿದೆ.ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್,ತಾಲೂಕು ಅಧ್ಯಕ್ಷ ಸಂಗಣ್ಣ ಬಾಕ್ಲಿ,ಮುಖಂಡರಾದ ರಾಜಾ ಪಿಡ್ಡನಾಯಕ ,ಕಾರ್ಯಾಧ್ಯಕ್ಷ ಹರೀಶ ನಾಯಕ,ಶೌಕತ್ ಅಲಿ ಖುರೇಶಿ,ಅಲ್ತಾಫ ಸಗರಿ,ಶಬ್ಬೀರ ನಗನೂರಿ,ಶಾಂತು ತಳವಾರಗೇರಿ,ಶರಣು ನಾಯಕ ನಗನೂರ,ತಿಪ್ಪಣ್ಣ ಪೊಲೀಸ್ ಪಾಟೀಲ್,ವೆಂಕಟೇಶ ಭಕ್ರಿ,ಮಹ್ಮದ್ ಮಹುಬೂಬ ಸೇರಿಂದಂತೆ ಅನೇಕರಿದ್ದರು.