ಒಂದೇ ಜನ್ಮದಲ್ಲಿ ಮುಕ್ತಿಕೊಡುವ ವ್ರತ್ತ ಇಷ್ಟಲಿಂಗ ಪೂಜೆ: ಕಾಶಿ ಜಗದ್ಗುರುಗಳು

0
49

ಕಲಬುರಗಿ: ವೀರಶೈವ ಧರ್ಮದಲ್ಲಿ ಹೇಳಲಾದ ಇಷ್ಟಲಿಂಗ ಪೂಜೆಯು ಒಂದು ಶ್ರೇಷ್ಟವಾದ ಮಹಾವ್ರತ ಹಾಗೂ ಒಂದೇ ಜನ್ಮದಲ್ಲಿ ಮುಕ್ತಿಯನ್ನು ಸಹ ಕೊಡುವಂತಹದ್ದು ಎಂದು ಶ್ರೀಮದ್ ಕಾಶಿಜಗದ್ಗುರು ಡಾ. ಚಂದ್ರಶೇಖರ್ ಶಿವಾಚಾಯ ಭಗವತ್ಪಾದರು ತಿಳಿಸಿದರು.

ನಗರದ ಶ್ರೀ ಶಾಂತಲಿಂಗೇಶ್ವರ ಕಲ್ಯಾಣ ಮಂಪಟದಲ್ಲಿ ಆಶಾಡಮಾಸ ನಿಮಿತ್ಯ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿಯ ಆಧ್ಯತ್ಮಿಕ ಆಶೀರ್ವಚನ ನೀಡಿದ ಅವರು, ನಮ್ಮ ದೇಶ ಧಾರ್ಮಿಕ ಪರಂಪರೆಯಲ್ಲಿ ಅನೇಕ ವೃತ್ತಗಳು ಹೇಳಲ್ಪಟ್ಟಿವೆ ಅವುಗಳಲ್ಲಿ ನೈಮಿತ್ತಕ ವೃತ್ತಗಳು ಆದರೆ ಇಷ್ಟಲಿಂಗ ಪೂಜೆಯು ಮಾತ್ರ ನಿತ್ಯವ್ರತ್ತ ವಾಗಿರುತ್ತದೆ. ಇದಕ್ಕೆ ಶಿರೋವ್ರತ್ತ, ಪಾಶುಪತವ್ರತ, ಹಾಗೂ ಮಹಾವ್ರತ್ತವೆಂಬುವುದಾಗಿಯೂ ಕರೆಯುತ್ತಾರೆ ಎಂದರು.

Contact Your\'s Advertisement; 9902492681

ಹಿರಿಯ ಸಾಹಿತಿ ಡಾ. ಶಿವರಾಜ್ ಪಾಟೀಲ್ ಮಹಾಂತಪೂರ್ ಅವರು ಕಾಶಿಪೀಠದ ಪರಂಪರಿಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇತೃತ್ವ ಹಿಸಿದ್ದರು, ಗೊಳಾದ ಚನ್ನಮಲ್ಲ ಶಿವಾಚಾರ್ಯರು, ಮಂದೇವಾಲದ ಹಿಪ್ಪರಗಿಯ ಸಿದ್ದಲಿಂಗ್ ಶಿವಾಚಾರ್ಯರು, ಹರಸೂರ್ ಶ್ರೀಮಠಮಾರಿ ದೇವರು, ಜೈನಾಪೂರದ ರೇಣುಕಾಶಿವಾಚಾರ್ಯರು, ಜಗದೇವಿ ಶರಣಮ್ಮ, ಮಹಾದೇವಿ ತಾಯಿ, ಶಿವಕುಮಾರ್ ಟೊಣ್ಣೆ , ಸಂಗಪ್ಪ ಪಾಳಾ, ಸುನೀಲ ರೆವೂರ, ಅಪ್ಪಾರಾವ್ ಬೆಣ್ಣೂರ್, ಪತ್ರಕರ್ತ ಚಂದ್ರಕಾಂತ್ ಹಾವನೂರ್ ಮುಂತಾದವರು ಉಪಸ್ಥಿತರಿದ್ದರು. ಕಡಗಂಚಿಯ ಪಂಪಾಪತಿ ದೇವರು ಸ್ವಾಗತಿಸಿದರು. ಭದ್ರಯ್ಯ ಸ್ವಾಮಿ ಅವರಿಂದ ವೇದಘೋಷ ಜರುಗಿತು. ಕಲ್ಲಿನಾಥ್ ಸ್ವಾಮಿ, ಗುರುಲಿಂಗಯ್ಯ ಹಿತ್ತಲಶಿರೂರ್ ಅವರಿಂದ ಸಂಗೀತ ಜರುಗಿತು. ಡಾ. ಶಿವಶರಣಪ್ಪ ಸರಸಂಬಾ ಅವರು ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here