ಮಾಹಿತಿ ಪಡೆಯುವುದು ಮೂಲಭೂತ ಹಕ್ಕು: ರಮೇಶ್ ಕುಣಿಗಲ್

0
98

ಜೇವರ್ಗಿ : ಸರಕಾರದ ಪಾರದರ್ಶಕ ಯೋಜನೆಗಳ ಮಾಹಿತಿಯನ್ನು ಪಡೆದುಕೊಳ್ಳುವುದು ನಮ್ಮ ಮೂಲಭೂತ ಹಕ್ಕಾಗಿದೆ ಎಂದು ಸಂಘಟನೆಯ ರಾಜ್ಯ ಅಧ್ಯಕ್ಷರಾದ ರಮೇಶ್ ಕುಣಿಗಲ್ ತಿಳಿಸಿದರು.

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜ ಕಾರ್ಯಕರ್ತರ ವೇದಿಕೆ ಎರಡನೆಯ ವರ್ಷದ ವಾರ್ಷಿಕೋತ್ಸವ ಹಾಗೂ ಒಂದು ದಿನದ ಮಾಹಿತಿ ಹಕ್ಕು ಕಾರ್ಯಗಾರವನ್ನು ಇಲ್ಲಿನ ಕನ್ನಡ ಭವನದಲ್ಲಿ ದಿನಾಂಕ 10 ಏಪ್ರಿಲ್ 2022ರಂದು ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿತ್ತು.

Contact Your\'s Advertisement; 9902492681

ಕಾರ್ಯಕ್ರಮದ ಸಾನ್ನಿಧ್ಯವನ್ನು ಜೇರಟಗಿ ವಿರಕ್ತಮಠದ ಮ.ನಿ.ಪ್ರ.ಮಹಾಂತ ಮಹಾಸ್ವಾಮಿಗಳು ಹಾಗೂ ಯಡ್ರಾಮಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಉದ್ಘಾಟನೆಯನ್ನು ಸಂಗಪ್ಪ ಮಿಟಲ್ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತರಾಯಪ್ಪ, ಸೇರಿದಂತೆ ಡಿ.ವಿ ಪಾಟೀಲ್ ಆಹಾರ ಇಲಾಖೆಯ ನಿರೀಕ್ಷಕರು.

ಜಿಲ್ಲಾ ಕಾರ್ಯದರ್ಶಿ ರಾಜು ಮುದ್ದಡಗಿ. ಜಿಲ್ಲಾ ಸಂಚಾಲಕರಾದ ಪಿ.ಎಚ್ ನಾಯ್ಕೋಡಿ ಹಾಗೂ ತಾಲೂಕ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ್, ಉಪಾಧ್ಯಕ್ಷರಾದ ಲಕ್ಷ್ಮಣ ಪವಾರ್, ಕಾರ್ಯದರ್ಶಿ ರಾಮು ಬಿ.ಚನ್ನೂರ, ಕಲಬುರ್ಗಿ ಜಿಲ್ಲಾ ಉಪಾಧ್ಯಕ್ಷರಾದ ಕಂಟು ಆರ್, ಮಳಗಿ, ಯಡ್ರಾಮಿ ತಾಲೂಕ ಅಧ್ಯಕ್ಷರಾದ ಶಾಮ್ ಪವರ್, ಮಹಿಳಾ ತಾಲೂಕ ಅಧ್ಯಕ್ಷರಾದ ಮಹಾಲಕ್ಷ್ಮಿ ಅಲಬಾವಿ ಮಹಿಳಾ ಪ್ರತಿನಿಧಿ, ಹಾಗೂ ಮರಲಿಂಗ ಮಲ್ಲಾಬಾದ್. ಬಸಲಿಂಗ ಫಿರೋಜಾಬಾದ್, ಮಹಮ್ಮದ್ ಹನೀಫ್ ಹಿಪ್ಪರ್ಗ ಎಸ್.ಎನ್, ಶರಣಬಸು ಸೇರಿದಂತೆ ಎಲ್ಲಾ ಜಿಲ್ಲಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಯಾಣ ಕರ್ನಾಟಕ ಭಾಗದ ಅಧ್ಯಕ್ಷರಾದ ಚನ್ನಯ್ಯ ವಸ್ತ್ರದ್ ವಹಿಸಿದ್ದರು. ನಿರೂಪಣೆಯನ್ನು ರಾಜು ಮುದ್ದಡಗಿ ನಡೆಸಿಕೊಟ್ಟರು, ವಂದನಾರ್ಪಣೆಯನ್ನು ಇಸ್ಮಾಯಿಲ್ ಷೇಕ್ ನೆರವೇರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here