ಕೊರೊನಾ ಕಾಲದ ‘ರಕ್ಷಕ’ ಸಮಾಜಕ್ಕೆ ದಾರಿದೀಪ

0
19

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗ ಎಲ್ಲ ದೃಷ್ಟಿಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಇಲ್ಲಿನ ಕಥೆಗಾರರಿಗೂ ಕೂಡ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ ಎಂದು ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.

ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಕಲಾ ಮಂಡಳದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಹಿರಿಯ ಸಾಹಿತಿ ಸುಬ್ರಾವ ಕುಲಕರ್ಣಿ ರಚಿಸಿದ 10ನೇ ಕಥಾ ಸಂಕಲನ ‘ರಕ್ಷಕ’ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಪುಸ್ತಕ ಅವಲೋಕಿಸಿದ ಡಾ. ಶೈಲಜಾ ಬಾಗೇವಾಡಿ ಮಾತನಾಡಿ, ಇಲ್ಲಿನ 10 ಕಥೆಗಳು ಬದುಕಿಗೆ ಹತ್ತಿರವಾಗಿದ್ದು, ಆಪ್ತ ಬರಹಗಳಿವೆ. ಗ್ರಾಮೀಣ ಭಾಷೆಯ ಸೊಗಡು, ಪ್ರಾದೇಶಿಕ ಅಸ್ಮಿತೆ ಎದ್ದು ಕಾಣುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಪ್ರೊ.ಕೆ.ಎಸ್. ನಾಯಕ ಮಾತನಾಡಿ, ಪರಸ್ಪರ ಹತ್ತಿರವಿದ್ದರೂ ದ್ವೀಪಗಳಂತೆ ಬದುಕುತ್ತಿರುವ ಇಂದಿನ ದಿನಮಾನಗಳಲ್ಲಿ ಬರಹಗಾರ ಸೇತುವೆ ನಿರ್ಮಿಸಬೇಕಾಗಿದೆ ಎಂದು ತಿಳಿಸಿದರು.

ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶಕ ಬಸವರಾಜ ಕೊನೇಕ್ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಜಿ.ಜಿ. ವಣಿಕ್ಯಾಳ ನಿರೂಪಿಸಿದರು. ಡಾ. ಶರಣಬಸವ ವಡ್ಡನಕೇರಿ ವಂದಿಸಿದರು. ಕಾವ್ಯಶ್ರೀ ಮಹಾಗಾಂವಕರ್, ಜ್ಯೋತಿ ಕುಲಕರ್ಣಿ, ಶ್ರೀನಿವಾಸ ಸಿರನೂರಕರ, ಸುರೇಶ ಬಡಿಗೇರ, ಡಾ. ಶಿವರಂಜನ ಸತ್ಯಂಪೇಟೆ, ಶರಣು ಅತನೂರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here