ಸುರಪುರ: ತಾಲ್ಲೂಕಿನ ಮಂಗಿಹಾಳ ಗ್ರಾಮದ ರಾಚಯ್ಯ ಮುತ್ಯಾನ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯ ಮಂಗಿಹಾಳ ನೂತನ ಗ್ರಾಮ ಶಾಖೆ ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಇದೆ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಅವರು, ಕೇಂದ್ರ ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ಜಾರಿ ಮಾಡಿ ಖಾಸಗಿಕಾರಣ ಮಾಡಲು ಹೊರಟಿತ್ತು.ಅದರ ವಿರುದ್ಧ ರೈತರು ಒಂದು 2 ತಿಂಗಳು ನಿರಂತರ ಪ್ರತಿಭಟನೆ ಮಾಡಿದ್ದು, ಕೊನೆಗೂ ಸರ್ಕಾರ ರೈತರ ಧರಣಿಗೆ ಮಣಿದು ಕೃಷಿ ಕಾಯ್ದೆ ವಾಪಸ್ ಪಡೆಯಿತು ಎಂದರು.ಇನ್ನು ಬೃಹತ್ ಪ್ರತಿಭಟನೆಯಲ್ಲಿ 750 ಕ್ಕೂ ಹೆಚ್ಚು ರೈತರು ಮೃತರಾದರು, ಅಲ್ಲದೇ ಮೊಳೆಗಳ ಬೇಲಿ ಹಾಕಿದ್ದರು, ಈ ರೀತಿ ವರ್ತಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಿತ್ತು. ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳ ನಾವೆಲ್ಲಾ ಧ್ವನಿ ಎತ್ತಬೇಕು ಎಂದು ಹೇಳಿದರು.
ಮಂಗಿಹಾಳದಲ್ಲಿ ನೂತನ ಗ್ರಾಮ ಶಾಖೆ ರಚಿಸಿದ್ದು, ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯ ಗ್ರಾಮ ಶಾಖೆಯ ಗೌರವಧ್ಯಕ್ಷರಾಗಿ ರಡ್ದೆಪ್ಪಗೌಡ ಪರಸನಹಳ್ಳಿ, ಅಧ್ಯಕ್ಷರಾಗಿ ಯಮನಪ್ಪ ಮಾಸ್ಟರ್, ಉಪಾಧ್ಯಕ್ಷರು ಚಂದ್ರು ಠಣೆಕೇದಾರ, ಸೂಲಪ್ಪ ನಾಗರಕಲ್, ಪ್ರಧಾನ ಕಾರ್ಯದರ್ಶಿ ಲೋಹಿತ್ ದಿವಾನ, ಸಹ ಕಾರ್ಯದರ್ಶಿ ತಿಪ್ಪಣ್ಣ ಬಾಚಿಮಟ್ಟಿ, ಸಂಘಟನಾ ಕಾರ್ಯದರ್ಶಿ ಶರಣಪ್ಪ ಅರಕೇರಿ, ಖಜಾಂಚಿ ಶಾಂತಗೌಡ, ಸಹ ಖಾಜಾಂಚಿ, ಹೈಯಾಳಪ್ಪ, ಸಂಚಾಲಕ ನಾಗಪ್ಪ ಶರಣ, ಸಹ ಸಂಘಟನಾ ಕಾರ್ಯದರ್ಶಿ ಸಾಬಣ್ಣ ಕೊಡಚಿ, ಸಹ ಸಂಚಾಲಕ ಬಸಣ್ಣ ಅಂಗಡಿ.
ಸದಸ್ಯರುಗಳಾದ ಕೃಷ್ಣಪ್ಪ ಗೌಂಡಿ, ಸೂಲಪ್ಪ, ಚಂದ್ರಯ್ಯ ಗುತ್ತೇದಾರ, ಬಸವರಾಜ ಬಡಿಗೇರ, ಸಿದ್ದಪ್ಪ ನಾಗರಾ ಕಲ್, ನಿಂಗಣ್ಣ ಯಾಳಗಿ, ಮುತ್ತಪ್ಪ ಟಣಕೇದಾರ, ಹಣಮಂತ್ರಾಯ ಕುಂಬಾರಪೇಟ, ಚಂದ್ರು ಹಗರಟಗಿ, ಬಾಲಪ್ಪ ದಿವಾನ,ಕಾಶಿಮ ಸಾಬ ಮತ್ತು ಸಿದ್ದಪ್ಪ ಇವರನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಹಣಮಂತ್ರಾಯ ಚಂದ್ಲಾಪುರ ಸೇರಿದಂತೆ ಸಂಘಟನೆಯ ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರು ಇದ್ದರು.