ಬೆಂಗಳೂರಿನ ಸೌಲಭ್ಯವಂಚಿತ ಮಕ್ಕಳ ಡಿಜಿಟಲ್ ಕನಸುಗಳ ಸಾಕಾರಕ್ಕೆ ಅಪ್ಪಾರಿಯೊ ರಿಟೇಲ್ ಪ್ರೈವೇಟ್ ಲಿಮಿಟೆಡ್ ಸಾರಥ್ಯ

1
17

ಬೆಂಗಳೂರು: ಬೆಂಗಳೂರಿನ ಸೌಲಭ್ಯವಂಚಿತ ಮಕ್ಕಳ ಡಿಜಿಟಲ್ ಕನಸುಗಳನ್ನು ಸಾಕಾರಗೊಳಿಸುವ ಮಹತ್ತರ ಗುರಿ ಹೊಂದಿರುವ ಅಪ್ಪಾರಿಯೊ ರಿಟೇಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯು, ಬೆಂಗಳೂರಿನಲ್ಲಿ ಲ್ಯಾಪ್ಟಾಪ್ಗಳು, ಡೆಸ್ಕ್ಟಾಪ್ಗಳು ಮತ್ತು ಟ್ಯಾಬ್ಲೆಟ್ಗಳಂತಹ ಡಿಜಿಟಲ್ ಸಾಧನಗಳನ್ನು ವಿತರಿಸಲು 2 ಎನ್|ಜಿಒಗಳ ಜತೆ ಸಹಭಾಗಿತ್ವ ಹೊಂದಿದೆ.

ನಗರದ ಸೌಲಭ್ಯವಂಚಿತ ಬಡ ಮಕ್ಕಳ ಶೈಕ್ಷಣಿಕ ಜೀವನ ಪರಿವರ್ತಿಸುವ ಗುರಿ ಹೊಂದಿರುವ ಈ ಡಿಜಿಟಲ್ ಸಾಕ್ಷರತಾ ಅಭಿಯಾನಕ್ಕೆ ಕಂಪನಿಯು ಅಂದಾಜು 1.19 ಕೋಟಿ ರೂ. ಮೌಲ್ಯದ ವಿದ್ಯುನ್ಮಾನ ಸಾಧನಗಳನ್ನು ವಿತರಿಸಿದೆ. ಕಂಪನಿಯ ಜತೆ ಸಹಭಾಗಿತ್ವ ಹೊಂದಿರುವ 2 ಎನ್ ಜಿಒಗಳ ಮೂಲಕ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಡಿಜಿಟಲ್ ಸಾಧನಗಳನ್ನು ಹಸ್ತಾಂತರಿಸಲಾಯಿತು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಮನ್ ದೀಪ್ ಲೋಹನ್, ಮುಖ್ಯ ಹಣಕಾಸು ಅಧಿಕಾರಿ ಶ್ರೀ ಶರತ್ ನರಹರಿ ಬೇಲೂರು ಮತ್ತು ಇತರ ಪ್ರಮುಖ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರ ಕಾರ್ಯಕ್ರಮ ನೆರವೇರಿತು.

Contact Your\'s Advertisement; 9902492681

ವಿದ್ಯುನ್ಮಾನ ಸಾಧನಗಳ ವಿತರಣೆಯ ಮೂಲಕ, ಭಾರತದಲ್ಲಿರುವ ಡಿಜಿಟಲ್ ಸಾಧನಗಳ ಬಳಕೆ ತಾರತಮ್ಯ (ಡಿಜಿಟಲ್ ಡಿವೈಡ್) ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಕಂಪನಿಯು ನಂಬಿಕೆಯಾಗಿದೆ. ಸವಲತ್ತು ವಂಚಿತ ವರ್ಗಗಳಿಗೆ ಮತ್ತು ಮಕ್ಕಳಿಗೆ ಇದು ಡಿಜಿಟಲ್ ಸಬಲೀಕರಣ ಮತ್ತು ಡಿಜಿಟಲ್ ಸಾಕ್ಷರತೆಯ ಕನಸುಗಳ ಸಾಕಾರಕ್ಕೆ ರೆಕ್ಕೆಪುಕ್ಕೆ ನೀಡುತ್ತದೆ. ದೇಶದಲ್ಲಿ ಡಿಜಿಟಲ್ ತಾರತಮ್ಯ ಕಡಿಮೆ ಮಾಡಲು ಭಾರತ ಸರ್ಕಾರ ಆರಂಭಿಸಿರುವ ‘ಡಿಜಿಟಲ್ ಇಂಡಿಯಾ’ ಅಭಿಯಾನವನ್ನು ಪ್ರತಿಧ್ವನಿಸುವುದು ಕಂಪನಿಯ ಗುರಿಯಾಗಿದೆ.

ಇತ್ತೀಚಿನ ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಪ್ರಭಾವವು ವಿಶೇಷವಾಗಿ, ವಿದ್ಯಾರ್ಥಿಗಳು ಡಿಜಿಟಲ್ ಶಿಕ್ಷಣಕ್ಕೆ ಹೊಂದಿಕೊಂಡ ವಿಧಾನದ ಮೇಲೆ ಗಾಢ ಪ್ರಭಾವ ಬೀರಿತು. ಭೌತಿಕ ಶಾಲೆಗಳು ಮತ್ತು ತರಗತಿಗಳ ಸುತ್ತಲೂ ನಿರ್ಮಿಸಲಾದ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳು ದೂರ ಸರಿದರು. ಈ ಹಿನ್ನೆಲೆಯಲ್ಲಿ, ಕಂಪನಿಯ ಈ ಉಪಕ್ರಮದ ಪ್ರಾಥಮಿಕ ಉದ್ದೇಶವು ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಅನಿಯಮಿತ ಪ್ರವೇಶ ಕಲ್ಪಿಸಲು ಅನುವು ಮಾಡಿಕೊಡುತ್ತದೆ. ಕಂಪನಿಯು ತನ್ನ ಪ್ರಮುಖ ಕಾರ್ಯಕ್ರಮದ ಮೂಲಕ, ‘ತಂತ್ರಜ್ಞಾನ ಶಿಕ್ಷಣ’ ಮತ್ತು ‘ಡಿಜಿಟಲ್ ಕನಸುಗಳನ್ನು ಸಾಕಾರಗೊಳಿಸುವುದು’, ಶಿಕ್ಷಕರು ಮತ್ತು ಸೌಲಭ್ಯವಂಚಿತ ಮಕ್ಕಳಿಗೆ ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳೊಂದಿಗೆ ಸಬಲೀಕರಣಗೊಳಿಸಲು ಮತ್ತು ಡಿಜಿಟಲ್ ಲೈಬ್ರರಿ ಸ್ಥಾಪಿಸಲು ಸಹಾಯ ಮಾಡಲು ಮುಂದೆ ಬಂದಿದೆ. ಕಂಪನಿಯು ಯುವಲೋಕ್ ಫೌಂಡೇಶನ್ಗೆ 54 ಲ್ಯಾಪ್ಟಾಪ್ಗಳು, 7 ಡೆಸ್ಕ್ಟಾಪ್ಗಳು ಮತ್ತು 95 ಟ್ಯಾಬ್ಲೆಟ್ಗಳನ್ನು ಮತ್ತು ಕ್ರಿಸ್ಟಲ್ ಹೌಸ್ ಇಂಡಿಯಾಗೆ 120 ಲ್ಯಾಪ್ಟಾಪ್ಗಳನ್ನು ವಿತರಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಪ್ಪಾರಿಯೊ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಅಮನ್ ದೀಪ್ ಲೋಹನ್, “ಇಂದಿನ ಡಿಜಿಟಲ್ ಯುಗದಲ್ಲಿ ಸೌಲಭ್ಯವಂಚಿತ ಮಕ್ಕಳಿಗೆ ಅಂತರ್ಜಾಲ ಸೌಲಭ್ಯ ಒದಗಿಸುವಲ್ಲಿ ಮತ್ತು ಅವರ ಜೀವನದಲ್ಲಿ ದೊಡ್ಡ ಅವಕಾಶ ಪಡೆಯಲು ಸಹಾಯ ಮಾಡುವ ಘನ ಉದ್ದೇಶಕ್ಕೆ ಕೊಡುಗೆ ನೀಡಲು ನಾವು ಸಂತೋಷಪಡುತ್ತೇವೆ. ಡಿಜಿಟಲ್ ಸಬಲೀಕರಣ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸುವ ಅವಕಾಶವು ಭಾರತದಲ್ಲಿ ಡಿಜಿಟಲ್ ಕಂದಕವನ್ನು ಕಡಿಮೆ ಮಾಡಲು ಪ್ರಮುಖ ಅಂಶವಾಗಲಿದೆ.

ಇದು ಆದಾಗ ಮಾತ್ರ ಭಾರತವು ಎಲ್ಲರನ್ನೂ ಒಳಗೊಳ್ಳುವ ಮತ್ತು ನಮ್ಮ ದೇಶದ ಸೌಲಭ್ಯವಂಚಿತ ಯುವ ಸಮುದಾಯದ ಕಲಿಕೆ ಮತ್ತು ಬೆಳವಣಿಗೆಗೆ ಸಮಾನ ಅವಕಾಶವನ್ನು ನೀಡುತ್ತದೆ. ಈ ಮಕ್ಕಳ ಶಿಕ್ಷಣ ಭವಿಷ್ಯ ಮತ್ತು ಡಿಜಿಟಲ್ ಚಿಂತನೆಯ ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ಪೋಷಿಸಬೇಕು. ಇದೇ ಈ ಯೋಜನೆಯ ಹಿಂದಿರುವ ಏಕೈಕ ಚಿಂತನೆಯಾಗಿದೆ. ಇದು ಬೆಂಗಳೂರಿನ ನಮ್ಮ ಸೌಲಭ್ಯವಂಚಿತ ಮಕ್ಕಳ ಕನಸುಗಳನ್ನು ಸಾಕಾರಗೊಳಿಸಲು ರೆಕ್ಕೆಪುಕ್ಕ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.

ಅಪ್ಪಾರಿಯೊ ಮುಖ್ಯ ಹಣಕಾಸು ಅಧಿಕಾರಿ ಶ್ರೀ ಶರತ್ ನರಹರಿ ಬೇಲೂರು ಮಾತನಾಡಿ, “ಒಂದು ದೇಶವಾಗಿ ನಾವು ಸಂಪೂರ್ಣವಾಗಿ ಡಿಜಿಟಲ್ ಸಬಲೀಕರಣದ ಗುರಿ ಹೊಂದಿದ್ದೇವೆ. ಆದಾಗ್ಯೂ, ಡಿಜಿಟಲ್ ಕಂದಕವನ್ನು ಮುಚ್ಚುವ ಮೂಲಕ ಮಾತ್ರ ಈ ಉದಾತ್ತ ದೃಷ್ಟಿಕೋನವನ್ನು ಪೂರ್ಣಗೊಳಿಸಬಹುದು. ಎಲ್ಲಾ ವರ್ಗದ ಮಕ್ಕಳಿಗೆ ಅನುಕೂಲವಾಗುವ ವಾತಾವರಣ ನಿರ್ಮಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ.

ಈ ಯೋಜನೆಗಳ ಮೂಲಕ, ನಾವು ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸುವ ಗುರಿ ಹೊಂದಿದ್ದೇವೆ. ಜತೆಗೆ, ಸೌಲಭ್ಯವಂಚಿತ ಮಕ್ಕಳ ಶೈಕ್ಷಣಿಕ ಸ್ಥಿತಿಗತಿ ಸುಧಾರಿಸುತ್ತೇವೆ. ಅದು ಅವರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮತ್ತು ಡಿಜಿಟಲ್ ಚಾಲಿತ ಜಗತ್ತಿನಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ಕಲ್ಪಿಸುತ್ತದೆ. ಈ ಮಕ್ಕಳು ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಯಶಸ್ವಿಯಾಗುವುದನ್ನು ನೋಡುವುದೇ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here