ಕಲಬುರಗಿ: ಸ್ಲಂ ಜನಾಂದೋಲನ ಜಿಲ್ಲಾ ಘಟಕ ವತಿಯಿಂದ ಸಾಮ್ರಾಟ್ ಅಶೋಕ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಜನ್ಮದಿನಾಚರಣೆಯನ್ನು ಕಪನುರ ರೇವಣಸಿದ್ದೇಶ್ವರ ಕಾಲೋನಿಯಲ್ಲಿ ಸ್ಲಂ ಮಕ್ಕಳ ಕಲಿಕಾ ಕೇಂದ್ರದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಸಂಘಟನೆಯ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ ಮಾತನಾಡುತ್ತಾ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರುಮೂಡಿಬರುತ್ತದೆ ಸಾಮ್ರಾಟ್ ಅಶೋಕ ವಿಶ್ವದಲ್ಲೆಡೆ ಬೌದ್ಧಮತ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದವರು.
ಅಶೋಕ ಶಬ್ದಕ್ಕೆ ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥ ಅಶೋಕ ದಕ್ಷಿಣ ಏಷ್ಯಾದ ಬಹುಭಾಗ ವಷ್ಟೆ ಅಲ್ಲ ಅದರಾಚೆಗೂ ಪಶ್ಚಿಮದಲ್ಲಿ ಇವತ್ತಿನ ಅಪಘಾನಿಸ್ತಾನ್ ಮತ್ತು ಪರ್ಷಿಯಾದಿಂದ ಪೂರ್ವದಲ್ಲಿ ಮತ್ತು ಅಸ್ಸಾಂ ವರೆಗೆ ದಕ್ಷಿಣದಲ್ಲಿ ಮೈಸೂರಿನವರಿಗೆ ರಾಜ್ಯವನ್ನಾಳಿದ ನು ಬೌದ್ಧಧರ್ಮದ ಅನುಯಾಯಿಯಾದ ಅಶೋಕನು ಶಾಕ್ಯಮುನಿ ಬುದ್ಧನ ಜೀವನದಲ್ಲಿನ ಮಹತ್ವದ ಸ್ಥಳಗಳಲ್ಲಿ ಅನೇಕ ಸ್ಮಾರಕಗಳನ್ನು ನಿಲ್ಲಿಸಿದನು ಸಂಪ್ರದಾಯದ ಪ್ರಕಾರ ಅವನು ಬೌದ್ಧಧರ್ಮದ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡರು ಎಂದರು.
ಈ ಸಂದರ್ಭದಲ್ಲಿ ಸುನಿತಾ ಎಂ ಕೊಲ್ಲೂರ್, ಗೌರಮ್ಮ ಮಕಾ, ಹೀನ ಶೇಕ್ ಹಾಗೂ ಸ್ಲಂ ಕಲಿಕಾ ಕೇಂದ್ರದ ಮಕ್ಕಳು ಭಾಗವಹಿಸಿದ್ದರು.