ಕಲಬುರಗಿ: ಹೀರಾಪೂರನಲ್ಲಿರುವ ನಗರ ಪ್ರಥಮಿಕ ಆರೋಗ್ಯ ಕೇಂದ್ರದಲ್ಲಿ ಅನುಗೃಹ ಕಣ್ಣಿನ ಆಸ್ಪತ್ರೆ, ಸ್ಲಂ-ಜನಾಂದೋಲನ ಕರ್ನಾಟಕ, ಪ್ರಗತಿ ಅಭಿವೃದ್ಧಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ೧೩೧ನೇ ಜಯಂತೋತ್ವವದ ಅಂಗವಾಗಿ ಬೃಹತ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಮಾಜಿ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಅವರು ಚಾಲನೆ ನೀಡಿದರು.
ನಗರ ಪ್ರಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನೀತಾ ಜಾಧವ, ಪಾಲಿಕೆ ಸದಸ್ಯ ಅಲಿಮೋದ್ದಿನ್ ಪಟೇಲ್, ಆಡಳಿತ ಅಧಿಕಾರಿ ಬಾಬು ಧಡೆದ್, ಶಿಬಿರದ ಸಂಯೋಜಕ ಬ್ರಹ್ಮಾನಂದ ಮಿಂಚಾ, ಸ್ಲಂ-ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕದ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಶಿವಯೋಗಿ ದೊಡ್ಮನಿ, ಪ್ರಕಾಶ ಪಾಟೀಲ, ಭೀಮಾಶಂಕರ ದುದನಿ, ರೇವಣಸಿದ್ದ ದಿಕ್ಸಂಗಿ, ಅನೀಲಕುಮಾರ ದಿಕ್ಸಂಗಿ, ಶಿವಕುಮಾರ ಚಿಂಚೋಳಿ, ಸ್ಲಂ-ಜನಾಂದೋಲನ ಕನಾಟಕ ಜಿಲ್ಲಾ ಘಟಕದ ಕಾರ್ಯದರ್ಶಿ ವಿಕಾಸ ಸವಾರಿಕರ್ ಹಾಗೂ ಬಡಾವಣೆಯ ಮುಖಂಡರು ಇದ್ದರು.