ಶಿಕ್ಷಕರ ನೇಮಿಸಲು ಲಕ್ಷ್ಮೀಪುರ ಗ್ರಾಮಸ್ಥರ ಒತ್ತಾಯ

0
105

ಸುರಪುರ: ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರ ನೇಮಿಸಲು ಒತ್ತಾಯಿಸಿ ಗ್ರಾಮಸ್ಥರು ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗಾಂಧಿವಾದಿ ಹಯ್ಯಾಳಪ್ಪ ಕಡಿಮನಿ ಮಾತನಾಡಿ ಶಾಲೆಯಲ್ಲಿ ನಾಲ್ಕು ನೂರಕ್ಕು ಹೆಚ್ಚು ಮಕ್ಕಳಿದ್ದು ಖಾಯಂ ಶಿಕ್ಷಕರ ಸಂಖ್ಯೆ ಬರೀ ನಾಲ್ಕು ಎಂಬುದು ನೋವಿನ ಸಂಗತಿಯಾಗಿದೆ.ಕೂಡಲೆ ಕನಿಷ್ಟ ಹತ್ತು ಜನ ಶಿಕ್ಷಕರನ್ನು ನೀಡಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ನ್ಯಾಯವಾದಿ ಶರಣು ಅನಕಸುಗೂರ ಮಾತನಾಡಿ,ಶಿಕ್ಷಣ ಇಲಾಖೆ ನಮ್ಮ ಗ್ರಾಮದ ಶಾಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದೆ,ಖಾಯಂ ಶಿಕ್ಷಕರನ್ನು ನೀಡುವದಂತೆ ಅನೇಕ ಬಾರಿ ಮೌಖಿಕವಾಗಿ ವಿನಂತಿಸಿದರು ಇಲಾಖೆ ಸ್ಪಂಧಿಸುತ್ತಿಲ್ಲ ಇದರಿಂದ ಬೇಸತ್ತು ಇಂದು ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದು ಕೂಡಲೆ ನಿಯಮದಂತೆ ಶಿಕ್ಷಕರನ್ನು ಒದಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗಲಿದೆ ಎಂದು ಎಚ್ಚರಿಸಿ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬರೆದ ಮನವಿಯನ್ನು ಶಿಕ್ಷಣ ಸಂಯೋಜಕರ ಮೂಲಕ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಶಿಕ್ಷಣ ಸಂಯೋಜಕ ಸುಭಾಸ ಕೊಂಡಗುಳಿ ಮಾತನಾಡಿ,ಖಾಯಂ ಶಿಕ್ಷಕರನ್ನು ಸರಕಾರ ನೇಮಿಸಲಿದೆ,ಸದ್ಯ ಶಾಲೆಗೆ ಸುಮಾರು ಎಂಟು ಜನ ಅತಿಥಿ ಶಿಕ್ಷಕರನ್ನು ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಆರ್‌ಸಿ ಷಣ್ಮುಕಪ್ಪ ನುಚ್ಚಿ ಹಾಗು ಗ್ರಾಮಸ್ಥರಾದ ಚಂದ್ರಕಾಂತ ಮ್ಯಾಕಲ್,ಮಲ್ಲಪ್ಪ ಚೌಡೇಶ್ವರಿಹಾಳ,ದಾನಪ್ಪ ಕಡಿಮನಿ,ಹಣಮಂತ್ರಾಯಗೌಡ,ಪುರುಷೋತ್ತಮ ನಾಯಕ,ರಂಗು ನಾಯಕ ಸೇರಿದಂತೆ ಶಾಲಾ ಮಕ್ಕಳು ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here