ಸುರಪುರ: ಇತ್ತೀಚೆಗೆ ಮಕ್ಕಳು ಕಾಣೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.ಆದ್ದರಿಂದ ವಿದ್ಯಾರ್ಥಿಗಳು ಅಥವಾ ಸಾರ್ವಜನಿಕರು ತಮಗೆ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೆ ಪೊಲೀಸರಿಗೆ ತಿಳಿಸುವಂತೆ.
ಯದಗಿರಿ ಜಿಲ್ಲಾ ಪೊಲೀಸ್ ಇಲಾಖೆ ಜುಲೈ ೧ ರಿಂದ ೩೧ರ ವರೆಗೆ ಹಮ್ಮಿಕೊಂಡ ಆಪರೇಷನ್ ಮುಸ್ಕಾನ್ ಕುರಿತ ಜಾಗೃತಿ ಅಭಿಯಾನದ ಅಂಗವಾಗಿ ನಗರದ ಶ್ರೀ ಪ್ರಭು ಆಂಡ್ ಜೆ.ಎಮ್.ಬೋಹರಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ಮಕ್ಕಳನ್ನು ಕಳ್ಳಸಾಗಾಣಿಕೆ ಮಾಡುವುದು, ಮಕ್ಕಳಿಗೆ ಮೋಸದಿಂದ ತಿಂಡಿ ತಿನುಸುಗಳ ತಿನಿಸಿ ಅಪಹರಣ ಮಾಡುವುದು,ಮಕ್ಕಳನ್ನು ಭೀಕ್ಷಾಟನೆಗೆ ತೊಡಗಿಸುವುದು, ಮಕ್ಕಳ ಅಂಗಾಂಗಳ ಮಾರಾಟ ಮಾಡುವುದು,ನಿಧಿಯಾಸೆಗೆ ಬಲಿ ನೀಡುವಂತ ಕೃತ್ಯಗಳಿಗು ಮಕ್ಕಳನ್ನು ದೂಡಲಾಗುತ್ತಿದೆ.
ಇವುಗಳಿಂದ ಮಕ್ಕಳನ್ನು ರಕ್ಷಿಸುವುದು ಪೋಷಕರ ಜವಬ್ದಾರಿಯಾಗಿದೆ.ಆದರೆ ಇಂತಹ ಕೃತ್ಯ ಎಸಗುವ ಯಾವುದೆ ವ್ಯಕ್ತಿಗಳು ಕಂಡಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಕರೆ ನೀಡಿದರು.ಅಲ್ಲದೆ ಬಾಲ ಕಾರ್ಮಿಕ ನಿಷೇಧ ಕಾಯ್ದೆ ೧೯೮೬,ಬಾಲ್ಯ ವಿವಾಹ ನಿಷೇಧ ಕಾಯ್ದೆ ೨೦೦೬ ಹಾಗು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ೨೦೧೨ರ ಫೋಕ್ಸೊ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು.
ಮತ್ತೋರ್ವ ಅತಿಥಿಗಳಾಗಿದ್ದ ಸುರಪುರ ಠಾಣೆ ನಿರೀಕ್ಷಕ ಆನಂದರಾವ್ ಮಾತನಾಡಿ,ವಿದ್ಯಾರ್ಥಿಗಳು ಕೂಡ ಸಾಮಾನ್ಯವಾದ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು.ಅಲ್ಲದೆ ವಿದ್ಯಾರ್ಥಿಗಳು ಕೂಡ ಕೆಲವೊಮ್ಮೆ ಅನುಚಿತವಾಗಿ ವರ್ತಿಸುವುದು ಕೆಲವೊಮ್ಮೆ ಕೇಳಿ ಬರುತ್ತದೆ.ಆದರೆ ವಿದ್ಯಾರ್ಥಿಗಳಾದವರಲ್ಲಿ ಶಿಸ್ತು ಮತ್ತು ಸನ್ನಡತೆ ಬಹಳ ಮುಖ್ಯ ಅಂದಾಗ ಆದರ್ಶ ವಿದ್ಯಾರ್ಥಿಗಳಾಗಲು ಸಾಧ್ಯ ಎಂದು ಕಾನೂನಿನ ಬಗ್ಗೆ ಅರಿವು ಮೂಡಿಸಿದರು.
ಪದವಿ ವಿಭಾಗದ ಪ್ರಾಂಶುಪಾಲ ಡಾ:ಎಸ್.ಹೆಚ್.ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಿಯು ವಿಭಾಗದ ಪ್ರಾಂಶುಪಾಲ ಎಂ.ಡಿ.ವಾರೀಸ್ ,ಪ್ರೊಫೇಸರ್ ಎಂ.ವಿಶ್ವನಾಥ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಈರಣ್ಣ ಜಾಕಾ,ಡಾ:ಬಾಲರಾಜ್ ಸರಾಫ್,ಮಲ್ಲರಾವ್ ಕುಲಕರ್ಣಿ,ಯಲ್ಲಪ್ಪ ಜಹಾಗಿರದಾರ್,ಸಂತೋಷ ಎಡಗಿನಾಳ ಹಾಗು ವಿದ್ಯಾರ್ಥಿಗಳಿದ್ದರು.ಪೇದೆ ದಯಾನಂದ್ ಸ್ವಾಗತಿಸಿದರು,ಡಾ: ಸಾಯಿಬಣ್ಣ ನಿರೂಪಿಸಿದರು,ಡಾ:ಸಿ.ಎಂ.ಸುತಾರ ವಂದಿಸಿದರು.