ಕಲಬುರಗಿ ನಗರದ ಸರಾಫ್ ಬಜಾರದಲ್ಲಿನ ಗಣೇಶ ಮಂದಿರಕ್ಕೆ ತನ್ನದೇಯಾದ ಇತಿಹಾಸವಿದೆ. ಸರಾಫ ಬಜಾರದ ಸುವರ್ಣ ವ್ಯಾಪಾರಿಗಳಿಂದ ಮಂದಿರವನ್ನು ಅತ್ಯಂತ ಮನಮೋಹಕವಾಗಿ ನವೀಕೃತಗೊಳಿಸಿದ್ದು, ಏ. ೧೯ ಧಾರ್ಮಿಕ ಪೂಜೆಗಳೂ ಹಾಗೂ ಏ. ೨೦ ರಂದು ಲೋಕಾರ್ಪಣೆ ಕಾರ್ಯಕ್ರ ಹಮ್ಮಿಕೊಳ್ಳಲಾಗಿದೆ ಎಂದು ಸರಾಫ ಸಂಘದ ಅಧ್ಯಕ್ಷರಾದ ರಾಘವೇಂದ್ರ ಮೈಲಾಪರ ತಿಳಿಸಿದ್ದಾರೆ.
ಭಾರತದ ಸ್ವಾತಂತ್ರ ಪೂರ್ವದಲ್ಲಿ ಅಂದರೆ ೧೯೪೪ ರಲ್ಲಿ ಗಣೇಶ ಮಂದಿರವನ್ನು ಸ್ಥಾಪಿಸಲಾಗಿತ್ತು. ನಿತ್ಯ ಸರಾಫ್ ಬಜಾರದ ವರ್ತಕರು ಅಲ್ಲದೇ ಅನೇಕ ಕಡೆಗಳಿಂದ ಭಕ್ತಾಧಿಗಳು ಮಂದಿರಕ್ಕೆ ಬಂದು ವರಸಿದ್ದಿ ಗಣೇಶನ ದರ್ಶನ ಪಡೆದು ಪುನೀತರಾಗಿದ್ದಾರೆ. ಗಣೇಶ ಮಂದಿರದ ನವೀಕೃತ ವಿನ್ಯಾಸ ಮನಮೋಹಕವಾಗಿದ್ದು ಜಿಲ್ಲೆಯ ಆಕರ್ಶಕ ಕೇಂದ್ರಗಳಲ್ಲೊಂದಾಗಿ ಗುರುತಿಸಲಾಗುತ್ತಿದ್ದು ಸರಾಫ ಬಜಾರದ ವರ್ತಕರಿಗೆ ಹೆಮ್ಮೆಯ ಕೇಂದ್ರವು ಹೌದು.
ಇದನ್ನೂ ಓದಿ: ನಗ್ನ ಸತ್ಯ ಅನಾವರಣಗೊಳಿಸುವ “ಭಾವ ದೀಪ್ತಿ”
ಏ. ೧೯ ರಂದು ಬೆಳಿಗ್ಗೆ ೮ ಗಂಟೆಗೆ ನಗರದ ಮಾಯಾ ಮಂದಿರದಿಂದ ಸಕಲ ವಾದ್ಯಗಳೊಂದಿಗೆ ಕುಂಭ, ಕಳಸಗಳ ಮೇರವಣಿಗೆ ವಿಜೃಂಭಣೆಯಿಂದ ಫೋರ್ಟ್ ರೋಡ್, ಕಪಡಾ ಬಜಾರ ಮುಖಾಂತರವಾಗಿ ಸರಾಫ್ ಬಜಾರದ ಪ್ರಮುಖ ಬೀದಿಯ ಮುಖಾಂತರ ನಡೆಸಲಾಗುತ್ತದೆ. ಮೇರವಣಿಗೆಯಲ್ಲಿ ಸರಾಫ್ ಬಜಾರದ ವರ್ತಕರು, ಸುವರ್ಣ ಕಾರ್ಖಾನೆಯವರು, ಸುವರ್ಣ ವ್ಯಾಪಾರೋದ್ಯಮಗಳಿ, ಸುವರ್ಣಕಾರರು ಸೇರಿದಂತೆ ಸುಪರ್ ಮಾರ್ಕೇಟ, ಕಿರಾಣ ಬಜಾರ, ಕಪಡಾ ಬಜಾರ, ಗಂಜ್ ಪ್ರದೇಶದ ವಿವಿಧ ವರ್ತಕರು ಮತ್ತು ಭಕ್ತಾಧಿಗಳು ಭಾಗವಹಿಸುವರು. ನಂತರ ನವೀಕೃತ ಮಂದಿರದ ಕಳಸಾರೋಹಣ ನಡೆವುದು. ಮಂದಿರದದಲ್ಲಿ ವಿಶೇಷವಾಗಿ ಲೋಕ ಕಲ್ಯಾಣಕ್ಕಾಗಿ ಹೋಮ ಹವನ ನಡೆಸಲಾಗುವುದು.
ಏ. ೨೦ ರಂದು ಬೆಳಿಗ್ಗೆ ೮-೦೦ ಗಂಟೆಗೆ ವರಸಿದ್ದಿ ವಿನಾಯ (ಗಣೇಶ) ಮಹಾಭಿಷೇಕ, ಹಾಗೂ ಮಂಗಳಾರತಿ ಯೊಂದಿಗೆ ಮಂದಿರವು ಲೋಕಾಪರ್ಣೆ ಕಾರ್ಯಕ್ರಮ ಹಮ್ಮಿಕೊಲ್ಲಲಾಘಿದೆ. ೧೦-೩೦ ಧಾರ್ಮಿಕ ಕಾರ್ಯದಲ್ಲಿ ಕೈಜೋಡಿಸಿರುವ ಗಣ್ಯರಿಗೆ ಹಾಗೂ ಮಂದಿರ ನವೀಕೃತ ಕಾರ್ಯದಲ್ಲಿ ಸಹಕಾರ ನೀಡಿದವರಿಗೆ ಗೌರವ ಸತ್ಕಾರ ನಡೆಸಲಾಗುವುದು. ನಂತರ ಸಕಲ ಭಕ್ತಾಧಿಗಳಿಗೆ ಮಹಾಪ್ರಸಾದ ವ್ಯವಸ್ಥೆ ನಡೆಸಲಾಗುವದು ಎಂದು ಸರಾಫ ಬಜಾರ ಗಣೇಶ ಮಂದಿರದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಮೈಲಾಪುರ, ಉಪಾಧ್ಯಕ್ಷರಾದ ಶ್ರೀ ನಾಗೇಂದ್ರಪ್ಪ ಪಾಟೀಲ ಶ್ರೀ ಶಾಮ ಪವಸ್ಕರ, ಶ್ರೀ ವೆಂಕಟೇಶ ರಾಮಚಂದ್ರ ಅಮ್ಮಣ್ಣ ಶ್ರೀ ಕೇಶವ ಹಾವಣಪ್ಪ ಸೀತನೂರ ಶ್ರೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆ ಮೇಲೆ ಸಿಐಡಿ ದಾಳಿ