ನಗ್ನ ಸತ್ಯ ಅನಾವರಣಗೊಳಿಸುವ “ಭಾವ ದೀಪ್ತಿ”

0
256

ಕಲಬುರಗಿ: ಕವಿಯದವರು ಸೂಕ್ಷ್ಮ ಸಂವೇದನಾಶೀಲರಾಗಿರಬೆಕು ಎನ್ನುವ ಮಾತಿಗೆ ಭಾವ ದೀಪ್ತಿ ಗ್ರಂಥ ಉತ್ತಮ ಉದಾಹರಣೆಯಾಗಿದ್ದು, ಸಮಾಜದ ವಿವಿಧ ಕ್ಷೇತ್ರಗಳ ನಗ್ನ ಸತ್ಯ ಅನಾವರಣಗೊಳಿಸುವಂತಿದೆ ಎಂದು ಹೈದರಾಬಾದ್ ಉಸ್ಮಾನಿಯಾ ವಿಸ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಲಿಂಗಣ್ಣ ಗೋನಾಲ ತಿಳಿಸಿದರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಭಾನುವಾರ ವಿಕಾಸ ಈಶ್ವರಯ್ಯ ಹಿರೇಮಠ ವಿರಚಿತ ಭಾವ ದೀಪ್ತಿ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿ, ಇಲ್ಲಿನ ಕಾವ್ಯ ರೂಪದ ಬರಹಗಳು ಆಪ್ತವಾಗಿವೆ. ಅಪ್ಯಾಯಮಾನವಾಗಿವೆ ಎಂದು ಹೇಳಿದರು.

Contact Your\'s Advertisement; 9902492681

ಇದನ್ನೂ ಓದಿ: ಹಿಂದೂ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆ ಮೇಲೆ ಸಿಐಡಿ ದಾಳಿ

ಮುಖ್ಯ ಅತಿಥಿಯಾಗಿದ್ದ ಕಸಪಾ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ಸೊಗಸಾದ ಕೋಟ್ಸ್‌ಗಳನ್ನು ಒಳಗೊಂಡಿರುವ ಈ ಕೃತಿ ಕವಿತೆ, ಹನಿಗವಿತೆ, ಕೋಟ್ಸ್‌ಗಳಿಂದ ಕೂಡಿದ ಮುಕ್ತ ಛಂದಸ್ಸಿನ ರೂಪ ಪಡೆದಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಮುಗ್ಧ ಮನಸ್ಸಿನ ಭಾವ ಭಾವನೆಗಳಿಗೆ ಅಕ್ಷರ ರೂಪ ಹೊದಿಸಿರುವ ಇಲ್ಲಿನ ಕವಿತೆಗಳಿಗೆ ಪದ್ಯದ ಲಯ, ಭಾವಗಳಿವೆ. ಬದುಕಿಗೆ ಬೆಳಕಾಗಬಲ್ಲ ಅನೇಕ ಎಳೆಗಳು ಇಲ್ಲಿ ಕಂಡು ಬರುತ್ತವೆ. -ಡಾ. ವಿ.ಜಿ. ಪೂಜಾರ, ವಿಶ್ರಾಂತ ಪ್ರಾಧ್ಯಾಪಕ, ಕಲಬುರಗಿ.

ಕೃತಿ ಪರಿಚಯಿಸಿದ ಪತ್ರಕರ್ತ ಡಾ. ಶಿವರಂಜನ್ ಸತ್ಯಂಪೇಟೆ, ನೆಮ್ಮದಿಯ ಬದುಕಿನ ನಿಲ್ದಾಣದಂತಿರುವ ಇಲ್ಲಿನ ಕವಿತೆಗಳು ತಲ್ಲಣದ ಈ ಬದುಕಿಗೆ ತಂಪನೆರೆಯುವ ಮುಕ್ತಗಳಾಗಿವೆ. ಗ್ರಂಥವನ್ನು ಓದಿ ಮುಗಿಸಿದಾಗ ಆಧ್ಯಾತ್ಮಿಕ ಪ್ರವಚನ ಕೇಳಿದಂತಹ ಅನುಭವಾಗುತ್ತದೆ, ಸಮಾಜ, ಧರ್ಮ, ವಿಜ್ಞಾನ ಮುಂತಾದ ವಿಚಾರಗಳನ್ನು ತನ್ನ ಕಾವ್ಯದಲ್ಲಿ ಅಳವಡಿಸುವ ಮೂಲಕ ಸಾಮಾಜಿಕ ಸಂದೇಶ ನೀಡಿದ್ದಾರೆ ಎಂದರು.

ಇದನ್ನೂ ಓದಿ: ಗಲಭೆಗಳಿಗೆ ಬಿಜೆಪಿ ಸರಕಾರ ಕುಮ್ಮಕ್ಕು ನೀಡುತ್ತಿದೆ: ಖಂಡ್ರೆ ಕಿಡಿ

ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಕೆ. ವಿಶ್ವನಾಥ ನೇತೃತ್ವ ವಹಿಸಿದ್ದರು. ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಅಧ್ಯಕ್ಷತೆ ವಹಿಸಿದ್ದರು. ಡಾ. ಕಲ್ಯಾಣರಾವ ಪಾಟೀಲ, ಶರಣಯ್ಯ ಸ್ವಾಮಿ ಹಿರೇಮಠ, ಪ್ರಕಾಶಕಿ ಪವಿತ್ರಾದೇವಿ ಈ. ಮಠ, ಲೇಖಕ ವಿಕಾಸ ಹಿರೇಮಠ ವೇದಿಕೆಯಲ್ಲಿದ್ದರು. ಅಕ್ಷರ ಈಶ್ವರಯ್ಯ ಮಠ ಸ್ವಾಗತಿಸಿದರು. ಸಿದ್ದಯ್ಯ ಸ್ಥಾವರಮಠ ನಿರೂಪಿಸಿದರು. ಸಿದ್ದಯ್ಯ ಸ್ವಾಮಿ ಹಿರೇಮಠ ದೇವರಗೋನಾಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here