ಸುರಪುರ: ಯಾದಗಿರಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದಲ್ಲಿ ಕಾರ್ಯಕಾರಿಣಿ ಸಭೆ ನಡೆಸಲಾಯಿತು.ನಗರದ ಹೋಟೆಲ್ ಮಣಿಕಂಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕಾರಿಣಿಯನ್ನು ಸುರಪುರ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಶಾರದಾ ಭೀಮಣ್ಣ ಬೇವಿನಾಳ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾರದಾ ಬೇವಿನಾಳ,ನಮ್ಮ ನಾಯಕರಾದ ನರೇಂದ್ರ ಮೋದಿಜಿ ಹಾಗೂ ಅಮಿತ್ ಶಾ ಮತ್ತು ಜೆ.ಪಿ ನಡ್ಡಾ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಪಕ್ಷ ಉತ್ತಮವಾಗಿ ಕೆಲಸ ಮಾಡುತ್ತಿದ್ದು ದೇಶದ ಸಮಗ್ರ ಅಭಿವೃಧ್ಧಿಗೆ ಹಗಲಿರಳು ಶ್ರಮಿಸುತ್ತಿದ್ದು ನಾವೆಲ್ಲರು ಅವರ ಮಾರ್ಗದರ್ಶನದಲ್ಲಿ ದೇಶದ ಸೇವೆ ಮಾಡೋಣ ಎಂದರು.
ಇದನ್ನೂ ಓದಿ: ವೆಂಚುರ್ಸ ವಿತ್ ಇಂಟಲೆಕ್ಚಯುಲ್ ಪ್ರಾಪರ್ಟಿ ರೈಟ್ಸ (CIPAM)
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷ ವೀಣಾ ಮೋದಿ ಮಾತನಾಡಿ,ನಮ್ಮೆಲ್ಲ ಬಿಜೆಪಿ ನಾಯಕರ ಮಾರ್ಗದರ್ಶನದಂತೆ ಜಿಲ್ಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾಕ್ಕೆ ಹೆಚ್ಚು ಸದಸ್ಯರನ್ನು ಮಾಡುವುದು ಜೊತೆಗೆ ಮಹಿಳೆಯರ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ಮಾಡೋಣ.ಸರಕಾರ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಅವೆಲ್ಲವುಗಳನ್ನು ಮಹಿಳೆಯರಿಗೆ ತಿಳಿಸುವ ಮತ್ತು ತಲುಪಿಸುವ ಮೂಲಕ ಎಲ್ಲಾ ಮಹಿಳೆಯರನ್ನು ಬಿಜೆಪಿ ಪಕ್ಷಕ್ಕೆ ಕರೆತರುವ ಕೆಲಸ ಮಾಡೋಣ ಜೊತೆಗೆ ಮುಂಬರುವ ದಿನಗಳಲ್ಲಿ ಮಹಿಳಾ ಸಮಾವೇಶಗಳನ್ನು ಆಯೋಜಿಸುವ ಜೊತೆಗೆ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳುವಂತೆ ಜಾಗೃತಿ ಮೂಡಿಸೋಣ ಎಂದರು.
ಕಾರ್ಯಕಾರಿಣಿಯಲ್ಲಿ ಮುಖ್ಯ ಅತಿಥಿಗಳಾಗಿ ಶರಣಮ್ಮ ಕಾಮರಡ್ಡಿ,ಸುಜಾತಾ ವೇಣುಗೋಪಾಲ ಜೇವರ್ಗಿ,ಸುರೇಖಾ ಕುಂಬಾರ,ಸ್ನೇಹಾ ರಸಾಳಕರ್,ಮಂಜುಳಾ ಕಟ್ಟಿಮನಿ,ಸುಮಂಗಲಾ ನಂದಪ್ಪ ಪೀರಾಪುರ,ಮಲ್ಲಮ್ಮ ಹೊಸಪೇಟೆ ಹಾಗೂ ಲಲಿತಾ ರಂಗಪ್ಪ ನಾಯಕ ವೇದಿಕೆ ಮೇಲಿದ್ದರು.ತಾಲುಕು ಬಿಜೆಪಿ ಅಧ್ಯಕ್ಷ ಮೇಲಪ್ಪ ಗುಳಗಿ ನಿರೂಪಿಸಿದರು,ಲಲಿತಾ ನಾಯಕ ಸ್ವಾಗತಿಸಿದರು,ನಿರ್ಮಲಾ ಆವಂಟಿ ವಂದಿಸಿದರು.