ವೆಂಚುರ್ಸ ವಿತ್ ಇಂಟಲೆಕ್ಚಯುಲ್ ಪ್ರಾಪರ್ಟಿ ರೈಟ್ಸ (CIPAM)

0
20

ಕಲಬುರಗಿ: ಪೂಜ್ಯ ದೊಡ್ಡಪ್ಪ ಅಪ್ಪಾ ಇಂಜಿನಿಯರ್ ಕಾಲೇಜಿನಲ್ಲಿ ಸಿ.ಐ.ಪಿ.ಎ.ಎಂ (ಇದನ್ನೂ ಓದಿ: )ಇವರ ಸಹಯೋಗದೊಂದಿಗೆ, ವೆಂಚುರ್ಸ ವಿತ್ ಇಂಟಲೆಕ್ಚಯುಲ್ ಪ್ರಾಪರ್ಟಿ ರೈಟ್ಸ ಕುರಿತಾದ 03 ದಿನಗಳ 18 ರಿಂದ 20ರವರೆಗೆ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.

ಈ ಜಾಗೃತಿ ಕಾರ್ಯಾಗಾರವು ವಿವಿಧ ರೀತಿಯ ಐಪಿಆರ್‍ನಲ್ಲಿ ಭಾಗವಹಿಸುವವರಿಗೆ ಪ್ರೋತ್ಸಾಹಿಸಿ, ಅವರಲ್ಲಿಯ ಹೊಸ ವಿಚಾರಗಳನ್ನು ಪ್ರವೃತ್ತಿಗಳನ್ನು ಭೌದ್ಧಿಕವಾಗಿ ಪರಿವರ್ತಿಸಲು, ಪ್ರೇರೇಪಿಸುತ್ತದೆ, ಈ ಕಾರ್ಯಾಗಾರದಲ್ಲಿ ವಾಸ್ತುಶಿಲ್ಪಗಳಿಗೆ, ಇಂಜಿನಿಯರ್‍ಗಳನ್ನು ವಕೀಲರಿಗೆ, ವೈದ್ಯರಿಗೆ ಬೇಕಾದ ಮಾಹಿತಿಗಳನ್ನು ಪೂರೈಸಲಾಗುತ್ತದೆ. ಡೆಂಟಲ್, ಫಾರ್ಮಾಸಿ ಹಾಗೂ ವಿ.ಜಿ. ಮಹಿಳಾ ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದಾರೆ. ಅನೇಕ ಮಹಾವಿದ್ಯಾಲಯಗಳಿಂದ 150 ಜನ ಪ್ರವೇಶ ಬಯಸಿದರೆ, ಕೇವಲ 100 ಜನರನ್ನು ಮಾತ್ರ ಕಾರ್ಯಗಾರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

Contact Your\'s Advertisement; 9902492681

ಇದನ್ನೂ ಓದಿ: ಅಂಬೇಡ್ಕರ್ ಭಾವಚಿತ್ರಗಳ ಮೆರವಣಿಗೆಗಿಂತ ವಿಚಾರಗಳ ಮೆರವಣಿಗೆ ಅಗತ್ಯ- ಜ್ಞಾನಪ್ರಕಾಶ ಸ್ವಾಮೀಜಿ

ಪಿಡಿಎ ಸಂಸ್ಥೆಯ ಸಂಶೋಧನೆ ಹಾಗೂ ಅವಿಷ್ಕಾರಗಳನ್ನು ಉತ್ತೇಜಿಸುವ ಗುರಿಯೊಂದಿಗೆ, ಐಪಿಆರ್ ಸೆಲ್‍ನ್ನು ಸ್ಥಾಪಿಸಿದೆ. ಈ ಸೆಲ್ ಮುಖಾಂತರ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಗುರುತಿಸಿ, ಇನೋವೇಷನ್ ಮತ್ತು ಪೇಟೆಂಟ್ ಆಗಿ ಸಂಶೋಧನಾ ಕಾರ್ಯಗಳನ್ನು ಯೋಜನೆಗಳನ್ನು ಪರಿವರ್ತಿಸಲು ಭೌದ್ಧಿಕ ಆಸ್ತಿಯ ಹಕ್ಕು ಹಾಗೂ ನಮ್ಮ ರಾಷ್ಟ್ರದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು, ಅನುಕೂಲವಾದ ಸ್ಥಾನವನ್ನು ಪಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಆರ್&ಡಿ ಸಿಬ್ಬಂಧಿ ಮತ್ತು ಇನ್‍ಪ್ರಾಸ್ಟ್ರಕ್ಚರ್ ಫೆಸಿಲಿಟಿ ದೊಡ್ಡ ಆಸ್ತಿಯನ್ನು ಹೊಂದಿದೆ. ನಮ್ಮ ಭಾಗದ ಇಂಜಿನಿಯರ್ಸ, ಆರ್ಕಿಟೆಕ್ಟ ,ವಕೀಲರು, ವೈದ್ಯರು ಇದರ ಲಾಭವನ್ನು ಪಡೆದುಕೊಳ್ಳಬೇಕಾಗಿದೆ.

ಇದನ್ನೂ ಓದಿ: ಕಲಬುರಗಿ: ಗುಡುಗು, ಗಾಳಿ, ಆಣೆಕಲ್ಲು ಸಹಿತ ಮಳೆ

ಈ ಕಾರ್ಯಾಗಾರದ ಮುಖ್ಯಅತಿಥಿಗಳಾದ,ಹೆಚ್‍ಕೆಇ ಸೊಸೈಟಿಯ ಅಧ್ಯಕ್ಷರಾದ ಡಾ. ಭೀಮಾಶಂಕರ.ಸಿ.ಬಿಲಗುಂದಿಯವರು ಕಾರ್ಯಾಗಾರವನ್ನು ಉದ್ಘಾಟಿಸಿ, ಪೇಟೆಂಟ್‍ಗಳ ಪ್ರಾಮುಖ್ಯತೆ ಮತ್ತು ಅವುಗಳ ವಾಣಿಜ್ಯಕರಣದ ಕುರಿತು ಮಾತನಾಡಿ, ಭೌತಿಕ ಶಕ್ತಿಯ ಉತ್ಪನ್ನಗಳ ರಕ್ಷಣೆಗೆ ಹೆಚ್ಚಿನ ಮಾಹಿತಿ ದೃಷ್ಟಿಕೋನ ಮತ್ತು ತಂತ್ರಗಳು, ಉತ್ತಮ ಗುಣಮಟ್ಟದೊಂದಿಗೆ ಬರಲು ಸಲಹೆಗಳನ್ನು ನೀಡಿದರು. ಮಾನಸ ಗಂಗೋತ್ರಿಯ ಅಖಿಲಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಪೇಟೆಂಟ್ ಕೋಶದ ಮುಖ್ಯಸ್ಥರಾದ, ಶ್ರೀ ಶರತ್ ಕುಮಾರರವರು ಸಭೆಯನ್ನು ಉದ್ದೇಶಿಸಿ, ಮಾತನಾಡುತ್ತಾ, ಐ.ಪಿ.ಆರ್ ಉತ್ತಮ ಅವಿಷ್ಕಾರಗಳನ್ನು ಹಾಗೂ ಅವಿಷ್ಕಾರಕರನ್ನು ಹೊರತರಲು ಪ್ರೋತ್ಸಾಹಿಸಬೇಕು.ಕೃಷಿಯಿಂದ ಬಾಹ್ಯಾಕಾಶದ ಸಂಶೋಧನೆಗಳಿಗೆ ವಿವಿಧ ಕ್ಷೇತ್ರಗಳಲ್ಲಿನ, ವೈಜ್ಞಾನಿಕ ಸೃಷ್ಟಿಗಳಿಗೆ ದೇಶವು ಹೆಸರುವಾಸಿಯಾಗಲಿದೆ.

ಶ್ರೀ ಡಾ. ಶರಣಬಸಪ್ಪ ಹರವಾಳ, ಉಪಾಧ್ಯಾಕ್ಷರು, ಡಾ. ಮಹದೇವಪ್ಪ ರಾಂಪೂರೆ, ಜಂಟಿ ಕಾರ್ಯಾಧ್ಯಕ್ಷರು, ವಾಸ್ತುಶಿಲ್ಪ ಶ್ರೀವಿನಯ್ .ಎಸ್. ಪಾಟೀಲ್, ಶ್ರೀ ಸೋಮನಾಥ.ಸಿ. ನಿಗ್ಗುಡಗಿ, ಡಾ. ಅನಿಲಕುಮಾರ.ಬಿ. ಪಟ್ಟಣ ಮತ್ತು ಶ್ರೀ ಸಾಯಿನಾಥ.ಎನ್. ಪಾಟೀಲ್ ಉಪಸ್ಥಿತರಿದ್ದರು.

ಇದನ್ನೂ ಓದಿ: ವಚನ ಜಾತ್ರೆ-೨೦೨೨ ರಲ್ಲಿ ವಿವಿಧ ಸಾಧಕರಿಗೆ ಗೌರವ ಸನ್ಮಾನ

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಜ್ಞಾನತೇಜ, ರೀಸರ್ಚ ಅಸಿಸ್ಟೆಂಟ್, ಡಿಪಿಐಐಟಿ, ಛೇರ-ಆನ್, ಐಪಿಆರ್, ಎನ್ ಎಲ್.ಎಸ್ ಐ ಯು, ಬೆಂಗಳೂರು, ಶ್ರೀ ಸಂಜಿತ್ ಹೆಗ್ಗಡೆ, ಸೀನಿಯರ್ ಪಾರ್ಟನರ್, ಬನಾನ ಐಪಿ ಕೌನ್ಸಿಲ್, ಬೆಂಗಳೂರು ಮತ್ತು ರಾಹುಲ್ ಕುಲಕರ್ಣಿ, ಮ್ಯಾನೇಜರ್, ಬನಾನ ಐಪಿ ಕೌನ್ಸಿಲ್, ಬೆಂಗಳೂರು ಇವರು ಉಪಸ್ಥಿತರಾಗಿ ಐಪಿಆರ್ ಬಗ್ಗೆ ಮಾಹಿತಿ ನೀಡಿದರು.

ಡಾ.ಎಸ್.ಎಸ್. ಕಲಶೆಟ್ಟಿ, ಪ್ರಾಚಾರ್ಯರು, ಅಧ್ಯಕ್ಷೀಯ ನುಡಿಗಳನ್ನಾಡಿದರು, ಡಾ. ಸಿದ್ಧರಾಮ.ಆರ್. ಪಾಟೀಲ್, ಉಪಪ್ರಾಚಾರ್ಯರು, ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿ, ಎಲ್ಲರನ್ನು ಸ್ವಾಗತಿಸಿದರು.

ಡಾ. ಜಯಶ್ರೀ ಅಗರಖೇಡ್, ಸಂಯೊಜಕರು, ಹಾಗೂ ಐ.ಪಿ.ಆರ್.ಸೆಲ್ ಕೋಆರ್ಡಿನೇಟರ್ ಇವರು ಕಾರ್ಯಾಗಾರದ ಕುರಿತು ಹಾಗೂ ಸಂಪನ್ಮೂಲ ವ್ಯಕ್ತಿಯ ಕುರಿತು ಸಂಕ್ಷಿಪ್ತ ಪರಿಚಯ ನೀಡಿದರು, ಪ್ರೊ. ರೇಷ್ಮಾ ಪರ್ವೀನ್ ವಂದಿಸಿದರು. ಸಂಯೋಜಕರಾದ, ಪ್ರೊ. ಪಲ್ಲವಿ ಪಾಟೀಲ್ ಹಾಗೂ ಸರಿತಾ ಮೇಳಕುಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಜೆಡಿಎಸ್, ಬಿಜೆಪಿ ಬೀ ಟೀಮ್ ಎಂಬ ಆರೋಪಕ್ಕೆ ಹೆಚ್ಡಿಕೆ ಪಲಟ್ ವಾರ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here