ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹವಿದ್ಯಾಲಯದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿನ ವಿಶೇಷ ಪ್ರಕಲ್ಪ ಯೋಜನೆಗಳಿಗಾಗಿ ಇರುವ ಹಕ್ಕುಗಳ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಲಿಂಗೈಕ್ಯ ಬಸವರಾಜಪ್ಪ ಅಪ್ಪಾ ಮತ್ತು ಲಿಂ. ನಳೀನಿ ತಾಯಿ ಅವ್ವಾ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಬ್ಬರು ಮಹನಿಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಬಾರ್ಚನೆ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಐ.ಪಿ.ಆರ್ (ಭೌದ್ಧಿಕ ಆಸ್ತಿ ಹಕ್ಕುಗಳು) ತಜ್ಞ ಜ್ಞಾನತೇಜ ಐ.ಐ.ಟಿ ಖರಗ್ಪೂರ ಅವರು ವಿಶೇಷ ಉಪನ್ಯಾಸ ನೀಡಿ, ಭೌದ್ಧಿಕ ಹಕ್ಕುಗಳನ್ನು ಎಲ್ಲರೂ ಗುರುತಿಸಿ ರಕ್ಷಸಿಕೊಳ್ಳುವುದರಿಂದ ಉತ್ತಮ ಜೀವನ ನಡೆಸಬಹುದು ಮತ್ತು ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ಸಾದ್ಯವಾಗುತ್ತದೆ ಎಂದರು.
ಇದನ್ನೂ ಓದಿ: ವಕೀಲರ ಸಂಘದ ಚುನಾವಣೆ ನಡೆಸಲು ಆಗ್ರಹ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್. ನಿಷ್ಠಿ ಭಾಗವಹಿಸಿದ್ದರು ಮತ್ತು ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಶರಣಬಸವಪ್ಪ ಸಾಲಿ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಸವರಾಜಪ್ಪ ಅಪ್ಪಾ ಅವರು ನಮ್ಮ ಸಂಸ್ಥೆಗೆ ಬೇಟಿ ನೀಡಿದಾಗ ಸವಿ ನೆನಪಿನ ಪುಸ್ತಕಲ್ಲಿ ದಾಖಲೆಮಾಡಿದ ಅವರ ಅನುಭವದ ಬರವಣಿಗೆಯನ್ನು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಮೋಹನ ರೆಡ್ಡಿ ದೇಸಾಯಿಯವರು ಓದಿದರು.
ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮವನ್ನು ಪ್ರೋ. ಗಂಗಾಧರ ಹೂಗಾರ ರವರು ನಿರೂಪಿಸಿ ವಂದಿಸಿದರು.