ಸಿಲಿಕಾನ್ ಸಿಟಿ ಬಿಜೆಪಿ ಆಡಳಿತದಲ್ಲಿ ಕಮೀಷನ್ ಸಿಟಿಯಾಗಿದೆ: ಡಾ. ಅಜಯ್ ಸಿಂಗ್ ಲೇವಡಿ

0
22

ಕಲಬುರಗಿ: ಭಾರತ ದೇಶದ ಸಿಲಿಕಾನ್ ಸಿಟಿ ಎಂದೇ ಹೆಸರಾಗಿದ್ದ ಬೆಂಗಳೂರು ಇದೀಗ ಬಿಜೆಪಿ ಆಡಳಿತದಲ್ಲಿ ಸಾಲುಸಾಲು ಹಗರಣಗಳಿಂದಾಗಿ ಕಮಿಷನ್ ಸಿಟಿಯಾಗಿ ಪರಿವರ್ತಿತವಾಗಿದೆ. ಕರ್ನಾಟಕ ದೇಶದ ಲಂಚದ ಕೇಂದ್ರಸ್ಥಾನವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಕಾಂಗ್ರೆಸ್ ಶಾಸಕ ಡಾ. ಅಜಯ್ ಸಿಂಗ್ ಲೇವಡಿ ಮಾಡಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಸಿಲಿಕಾನ್ ಕ್ಯಾಪಿಟಲ್, ಸಿಲಿಕಾನ್ ವ್ಯಾಲಿಯಂತಿದ್ದ ಬೆಂಗಳೂರು ಇದೀಗ ಎಲ್ಲರ ಮುಂದೆ ನಗೆಪಾಟಲಿಗಡಾಗಿದೆ. ಶೇ. 40 ಕಮೀಷನ್ ಹಗರಣದಲ್ಲಿ ಗುತ್ತಿಗದಾರ ಸಂತೋಷ ಸಾವಾಯ್ತು, ಈಶ್ವರಪ್ಪ ಬಂಧನವಾಗಿಲ್ಲ. ಕಲಬುರಗಿಲ್ಲಿ ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲೇ ಭಾರಿ ಹಗರಣವಾಗಿದೆ. ಮುಕ್ಯ ಆರೋಪಿ ದಿವ್ಯಾ ಹಾಗರಗಿ 10 ದಿನವಾದರೂ ಪೆÇಲೀಸರಿಗೆ ಸಿಗುತ್ತಿಲ್ಲ. ಇವೆಲ್ಲ ನೋಡಿದರೆ ಬಿಜೆಪಿ ಆಡಳಿತದಲ್ಲಿ ಹಗರಣಗಳೇ ಹೆಚ್ಚುತ್ತಿವೆ ಎಂದು ಡಾ. ಸಿಂಗ್ ದೂರಿದರು.

Contact Your\'s Advertisement; 9902492681

ಇದನ್ನೂ ಓದಿ: ಸರಕಾರದ ಮಹಿಳಾ ಕೇಂದ್ರಿತ ನೀತಿಗಳಿಗೆ ಡಾ ಅಂಬೇಡ್ಕರ್ ಕಾರಣ : ಬಡಿಗೇರ್

ಮಠ, ಮಂದಿರಗಳಿಗೂ ಅನುದಾನ ನೀಡುವ ವಿಚಾರದಲ್ಲಿ ಕಮೀಷನ್ ಪಡೆಯುತ್ತಿದ್ದಾರೆಂಬ ದಿಂಗಾಲೇಶ್ವರ ಶ್ರೀಗಳ ಆರೋಪವನ್ನು  ನೋಡಿದರೆ ಬಿಜೆಪಿಯರು ಮಠಗಳಿಗೂ ಬಿಡುತ್ತಿಲ್ಲವಲ್ಲ ಎಂದು ನೋವಾಗುತ್ತಿದೆ. ಈ ಪರಿಯಲ್ಲಿ ಲಂಚಗುಳಿತನ, ಭ್ರಷ್ಟರ ಸರಕಾರ ಬಿಜೆಪಿಯದ್ದಾಗಿರೋದು ಕರುನಾಡಿನ ಪಾಲಿಗೆ ಶಾಪವಾದಂತಾಗಿದೆ ಎಂದು ಡಾ. ಅಜಯ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಜನ ಬಿಜೆಪಿ ಸರ್ಕಾರದಲ್ಲಿನ ಹಗರಣಗಳನ್ನು ನೋಡುತ್ತಿದ್ದಾರೆ. ನೇಮಕಾತಿಯಲ್ಲೂ ಹಗರಣ ನಡೆಯೋದು ನೋಡಿದರೆ ಜನ ಅದ್ಯಾವಾಗ ಬಿಜೆಪಿ ಸರ್ಕಾರವನ್ನ ಕಿತ್ತಿ ಎಸೆಯಬೇಕು ಎಂಬುದನ್ನು ಕಾಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ವೆಲ್ಲ ಸಂಗತಿಗಳನ್ನು ಇಟ್ಟುಕೊಂಡು ನಿರಂತರ ಹೋರಾಟ ಮಾಡುತ್ತದೆ ಎಂದೂ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಶಿಕ್ಷಕರ ಅಸಲಿ ನಾಯಕ, ಈಗ ಸಭಾಪತಿಯಾಗಿರುವ ಬಸವರಾಜ್ ಹೊರಟ್ಟಿ ನಡೆದು ಬಂದ ದಾರಿ

ಕಲಬುರಗಿಯಲ್ಲಿ ಸ್ಫೋಟಗೊಂಡಿರುವ ಪಿಸ್‍ಐ ಹಗರಣದಲ್ಲಿ ಮುಖಂಡೆ ದಿವ್ಯಾ ಹೆಸರು ಬಯಲಿಗೆ ಬಂದಿದೆ. ಇವರು 10 ದಿನದಿಂದ ನಾಪತ್ತೆಯಾಗಿದ್ದಾರೆ. ಇವರೆಲ್ಲಿ ಎಂಬುದು ಪೆÇಲೀಸರಿಗೆ ಗೊತ್ತಿಲ್ಲವೆ? ಅವರ ರಕ್ಷಣೆ ಮಾಡಲಾಗುತ್ತಿದೆ. ಬಿಜೆಪಿ ಪ್ರಮುಖರಿಗೆ ಆಪ್ತರಾಗಿರುವ ಕಾರಣದಿಂದಾಗಿ ದಿವ್ಯರನ್ನು ರಕ್ಷಿಸಲಾಗುತ್ತಿದೆ, ಇದರಿಂದಲೇ ಹಗರಣಗಳು ಹೆಚ್ಚುತ್ತಿವೆ ಎಂದು ಡಾ. ಅಜಯ್ ಸಿಂಗ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಬಿಜೆಪಿಯ ಇಂತಹ ಧೋರಣೆಗಳು ಪ್ರಾಮಾಣಿಕವಾಗಿ ಪಿಎಸ್‍ಐ ಪರೀಕ್ಷೆ ಬರೆದವರ ಪಾಲಿಗೆ ಉರುಳುಗಾತ್ತಿವೆ. ಇನ್ನಾದರೂ ತಕ್ಷಣ ತಪ್ಪಿತಸ್ಥರನ್ನೆಲ್ಲ ಬಂಧಿಸಿ ವಿಚಾರಣೆ ನಡೆಸಿ  ಪ3ಆಮಾಣಿಕವಾಗಿ ಪರೀಕ್ಷೆ ಬರೆದವರಿಗೆ ನ್ಯಾಯ ಕೊಡಬೇಕು ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದರೆ.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here