ಸರಕಾರದ ಮಹಿಳಾ ಕೇಂದ್ರಿತ ನೀತಿಗಳಿಗೆ ಡಾ ಅಂಬೇಡ್ಕರ್ ಕಾರಣ : ಬಡಿಗೇರ್

0
75

ಕಲಬುರಗಿ; ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಸರಿಸುತ್ತಿರುವ ಎಲ್ಲಾ ಮಹಿಳಾ ಕೇಂದ್ರಿತ ನೀತಿಗಳಿಗೆ ಭದ್ರ ಬುನಾದಿ ಹಾಕಿಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಸುರೇಶ ಬಡಿಗೇರ್ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಆಂಗ್ಲ ವಿಭಾಗ ಹಾಗೂ ಕನ್ನಡ ವಿಭಾಗ ಬುಧವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಅಂಗವಾಗಿ ಬಡಿಗೇರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಮಹಿಳೆಯರಿಗೆ ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ಒದಗಿಸುವ ಅವರ ಪ್ರಸ್ತಾವಿತ ಹಿಂದೂ ಕೋಡ್ ಮಸೂದೆಯನ್ನು ಆಗಿನ ಪ್ರಧಾನಿ ಶ್ರೀ ನೆಹರು ತಿರಸ್ಕರಿಸಿದಾಗ ಡಾ ಅಂಬೇಡ್ಕರ್ ಅವರು ಜವಾಹರಲಾಲ್ ನೆಹರು ಕ್ಯಾಬಿನೆಟ್‍ಗೆ ರಾಜೀನಾಮೆ ನೀಡಿದ್ದರು ಎಂದು ಸ್ಮರಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ಶಿಕ್ಷಕರ ಅಸಲಿ ನಾಯಕ, ಈಗ ಸಭಾಪತಿಯಾಗಿರುವ ಬಸವರಾಜ್ ಹೊರಟ್ಟಿ ನಡೆದು ಬಂದ ದಾರಿ

ಡಾ ಅಂಬೇಡ್ಕರ್ ರೂಪಿಸಿದ ಹಿಂದೂ ಕೋಡ್ ಬಿಲ್ ಮಹಿಳೆಯರಿಗೆ ಪೂರ್ವಜರ ಆಸ್ತಿಯ ಮೇಲಿನ ಹಕ್ಕನ್ನು ವಿಸ್ತರಿಸುವ ಮೊದಲ ಸಧೃಡ ಮಸೂದೆಯಾಗಿದ್ದು ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಮತ್ತು ಇತರ ಪ್ರಯೋಜನಗಳನ್ನು ನೀಡುವ ಮಸೂದೆಗೆ ”ಶ್ರೀ ನೆಹರೂ ಅವರು ವಿವಿಧ ಕಾರಣಗಳನ್ನು ಉಲ್ಲೇಖಿಸಿ ಮಸೂದೆಯನ್ನು ತಿರಸ್ಕರಿಸಿದರು”. ಇದನ್ನು ವಿರೋಧಿಸಿ ಅಂಬೇಡ್ಕರ್ ಅವರು ಕೇಂದ್ರ ಕಾನೂನು ಮತ್ತು ನ್ಯಾಯ ಸೇವೆಗಳ ಸಚಿವ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಿದರು. ಕೇಂದ್ರದಲ್ಲಿ ನಂತರದಲ್ಲಿ ಬಂದ ಸರಕಾರಗಳು ಸಮಾಜದಲ್ಲಿ ಮಹಿಳೆಯರ ಪೂರ್ಣ ಹಕ್ಕುಗಳನ್ನು ಮರುಸ್ಥಾಪಿಸಲು ಮಸೂದೆಯಲ್ಲಿ ಮಾಡಿದ ಮಹಿಳಾ ಕೇಂದ್ರಿತ ಪ್ರಸ್ತಾಪಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಲಾಯಿತು ಎಂದರು.

ಬಡಿಗೇರ್ ಮಾತನಾಡಿ, ಮಹಿಳೆಯರಿಗೆ ವೃದ್ಧಾಪ್ಯ ವೇತನವನ್ನು ಮೊದಲು ಪರಿಚಯಿಸಲು ಸಲಹೆ ನೀಡಿದವರು ಡಾ. ಅಂಬೇಡ್ಕರ್ ಮತ್ತು ಈ ಪ್ರಸ್ತಾಪವನ್ನು ಶ್ರೀಮತಿ ಇಂದಿರಾ ಗಾಂಧಿ ಅವರು ದೇಶದ ಪ್ರಧಾನಿಯಾದಾಗ ಅಳವಡಿಸಿಕೊಂಡರು. “ವೃದ್ಧಾಪ್ಯ ವೇತನದ ಶ್ರೇಯಸ್ಸು ಡಾ. ಅಂಬೇಡ್ಕರ್ ಅವರಿಗೆ ಸಲ್ಲಬೇಕು” ಎಂದು ಹೇಳಿದರು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಅವಧಿಯಲ್ಲಿ 1000 ಮತ್ತು 500 ರೂ ಮುಖಬೆಲೆಯ ನೋಟುಗಳ ಅಮಾನ್ಯೀಕರಣವನ್ನು ಉಲ್ಲೇಖಿಸಿ, ಮಾತನಾಡಿದ ಬಡಿಗೇರ್, ಮೂಲತಃ ಹತ್ತು ವರ್ಷಗಳಿಗೊಮ್ಮೆ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸುವ ಕಲ್ಪನೆಯನ್ನು ಡಾ. ಅಂಬೇಡ್ಕರ್ ಅವರು ಸಂವಿಧಾನ ರೂಪಿಸುವ ಸಮಯದಲ್ಲಿ ಪ್ರಸ್ತಾಪಿಸಿದ್ದರು. ಕಪ್ಪುಹಣ ಮತ್ತು ಭ್ರμÁ್ಟಚಾರಕ್ಕೆ ಕಡಿವಾಣ ಹಾಕಲು ಡಾ.ಅಂಬೇಡ್ಕರ್ ಅವರು ನೋಟು ಅಮಾನ್ಯೀಕರಣದ ಪ್ರಸ್ತಾವನೆಯನ್ನು ಸೂಚಿಸಿದ್ದರು ಎಂದು ತಿಳಿಸಿದರು.

ಬಡಿಗೇರ್ ಮಾತನಾಡಿ, ಕೇಂದ್ರ ಸರಕಾರ ಕಲಬುರಗಿ ಜಿಲ್ಲೆಯ ವಾಡಿ ರೈಲ್ವೆ ಜಂಕ್ಷನ್‍ನಲ್ಲಿ ಹಾಗೂ ಧಾರವಾಡದಲ್ಲಿ ಡಾ.ಅಂಬೇಡ್ಕರ್ ಅವರ ಸಂಬಂಧವಿರುವ ಸ್ಮಾರಕ ನಿರ್ಮಿಸಬೇಕು. ಅಂಬೇಡ್ಕರ್ ಅವರ ಮೊದಲ ಪತ್ನಿ ಶ್ರೀಮತಿ ರಮಾಬಾಯಿ ಅವರು ಮೂರು ತಿಂಗಳ ಕಾಲ ಧಾರವಾಡದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಡಾ ಅಂಬೇಡ್ಕರ್ ಅವರ ಪತ್ನಿಯನ್ನು ನೋಡಲು ನಿಯಮಿತವಾಗಿ ಭೇಟಿ ನೀಡುತ್ತಿದ್ದರು ಎಂದು ಅವರು ಹೇಳಿದರು. ಅಂಬೇಡ್ಕರ್ ಅವರು ವಾಡಿ ರೈಲು ನಿಲ್ದಾಣಕ್ಕೆ ಒಮ್ಮೆ ಭೇಟಿ ನೀಡಿದ್ದರು ಮತ್ತು 45 ನಿಮಿಷಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ವಿವಿಧ ವರ್ಗಗಳ ಜನರೊಂದಿಗೆ ಮಾತನಾಡಿದ್ದರು. ಅಂಬೇಡ್ಕರ್ ಅವರು ಈ ಎರಡೂ ಸ್ಥಳಗಳಿಗೆ ಭೇಟಿ ನೀಡಿದ ನೆನಪಿಗಾಗಿ ವಾಡಿ ರೈಲು ನಿಲ್ದಾಣ ಮತ್ತು ಧಾರವಾಡದಲ್ಲಿ ತಲಾ ಒಂದು ಸ್ಮಾರಕವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಜ್ಞಾನ ಜ್ಯೋತಿ ಶಾಲೆ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಪರವಾನಿಗೆ ರದ್ದು ಮಾಡಬೇಕು: ಲಿಂಗರಾಜ ಸಿರಗಾಪೂರ

ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪೆÇ್ರ.ವಿ.ಡಿ.ಮೈತ್ರಿ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಡೀನ್ ಟಿ ವಿ ಶಿವಾನಂದನ್ ಹಾಗೂ ಕನ್ನಡ ವಿಭಾಗದ 4ನೇ ಸೆಮಿಸ್ಟರ್ ವಿದ್ಯಾರ್ಥಿನಿ ಭಾಗ್ಯಶ್ರೀ ಮಾತನಾಡಿದರು. ಸುನೀತಾ ಪಾಟೀಲ ಸ್ವಾಗತಿಸಿ, ಉμÁ ಹತ್ತಿ ವಂದಿಸಿದರು. ಡಾ ಸುಮಂಗಲಾ ರೆಡ್ಡಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here