ಜನಪದ ಗೀತೆ ಸ್ಪರ್ಧೆ: ಕಲಬುರಗಿ ತಂಡಕ್ಕೆ ತೃತೀಯ ಬಹುಮಾನ

0
105

ಕಲಬುರಗಿ: ಬೆಂಗಳೂರಿನ ಕನ್ನಡ ಜಾನಪದ ಪರಿಷತ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ  ದಿ.ಟಿ.ಕೆ. ಗೌಡ ಸ್ಮರಣಾರ್ಥ ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಈಚೆಗೆ ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆ ಕಾರ್ಯಕ್ರಮ ನಡೆಯಿತು.

ಕಲಬುರಗಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಹಾಗೂ ಯಡ್ರಾಮಿ ಘಟಕದಿಂದ ಶ್ರೀ ಬೀರಲಿಂಗೇಶ್ವರ ಜಾನಪದ ಕಲಾ ತಂಡವು ಭಾಗವಹಿಸಿ ಡೊಳ್ಳಿನ ಹಾಡುಗಳು ಪ್ರಸ್ತುತಪಡಿಸಿ ಇಡೀ ಸ್ಪರ್ಧೆಯಲ್ಲಿ ಕಲಬುರಗಿ ತಂಡ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿತು.

Contact Your\'s Advertisement; 9902492681

ರೇವಣಸಿದ್ದಪ್ಪ ಯಡ್ರಾಮಿ, ಮುದುಕಪ್ಪ ಪೂಜಾರಿ, ಸುಭಾಷ ಸೋಮಪ್ಪಗೋಳ, ಮಹಾಂತೇಶ ಸುಂಬಡ್, ನಾಗರಾಜ್ ಮಳ್ಳಿ, ತೋಟಪ್ಪ ಮಳ್ಳಿ ಸೇರಿದಂತೆ ಮೊದಲಾದ ಕಲಾವಿದರು ಗೀತೆ ಗಾಯನ ಹಾಗೂ ಡೊಳ್ಳು ಕುಣಿತ ಮಾಡಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು. ನಂತರ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್.ಬಾಲಾಜಿ, ಸಂಚಾಲಕಿ ಕನಕತಾರಾ, ದಾವಣಗೆರೆ ತಾಲೂಕು ಅಧ್ಯಕ್ಷ ಗೀತಾ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಸೇರಿ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here