ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಖಾಸಗಿ ವಲಯದಲ್ಲಿ ಶೇ. 75% ಉದ್ಯೋಗ ಸ್ಥಳೀಯರಿಗೆ ಮೀಸಲಿಡುವಂತೆ ಕಾನೂನು ಜಾರಿಗೆ ತರುವ ಮೂಲಕ ಅವರು ಇಲಾಖೆಗೆ ಆದೇಶ ಕಳಿಸಿದ್ದಾರೆ.
ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಹೊಸ ನಿಯಮದ ಹಿನ್ನೆಲೆ: ವಿಧಾನಸಭೆ ಚುನಾವಣೆಗೂ ಮುನ್ನ ಜಗನ್ ಮೋಹನ್ ರೆಡ್ಡಿ ಪಾದಯಾತ್ರೆ ನಡೆಸಿ ಜನರ ಅಹವಾಲುಗಳನ್ನು ಸ್ವೀಕರಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಎಂಬುದು ದೊಡ್ಡ ಸಮಸ್ಯೆಯಾಗಿ ಕಾಣಿಸಿಕೊಂಡಿದೆ.
ಇದೇ ವೇಳೆಯಲ್ಲಿ ಯುವ ಪ್ರತಿಭಾವಂತರಿಗೆ ಅವಕಾಶ ನೀಡಿದ ಜಗನ್ ಅವರು, ವೈಎಸ್ಸಾರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ‘ಉದ್ಯೋಗ ಮೀಸಲಾತಿ’ ಒದಗಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಈ ನಿರ್ಣಯದ ಲಾಭವು ನೇರವಾಗಿ ಕೈಗಾರಿಕಾ ವಲಯಕ್ಕಾಗಿ ತಮ್ಮ ಸ್ವಂತ ಜಮೀನು ಕಳೆದುಕೊಂಡವರಿಗೆ ತಲುಪಬೇಕಿದೆ ಎಂದು ಜಗನ್ ಬಯಸಿದ್ದಾರೆ.