ಸಂಭ್ರಮದ ಮಧ್ಯ ನಿರಗುಡಿ ಶ್ರೀ ಸಿದ್ಧೇಶ್ವರ ಜಾತ್ರೆ ಪಲ್ಲಕ್ಕಿ ಉತ್ಸವಕ್ಕೆ ತೆರೆ

0
15

ಆಳಂದ: ತಾಲೂಕಿನ ನಿರಗುಡಿ ಗ್ರಾಮ ಹೊರವಲಯದ ಐದು ದಿನಗಳ ಕಾಲ ನಡೆದ ಶ್ರೀ ಸಿದ್ಧೇಶ್ವರರ ಜಾತ್ರಾ ಮಹೋತ್ಸವ ಗುರುವಾರ ದೇವಸ್ಥಾನದಿಂದ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ವಿದ್ಯುಕ್ತವಾಗಿ ಪಲ್ಲಕ್ಕಿ ಉತ್ಸವ ವಾದ್ಯ ವೈಭವಗಳೊಂದಿಗೆ ನೆರವೇರಿತು.

ಈ ದೇವಸ್ಥಾನದ ವೈಶಿಷ್ಠ್ಯ ಪೂರ್ಣವಾಗಿರುವ ಪ್ರಾಚೀನ ಕಾಲದ ಶ್ರೀ ಸಿದ್ಧೇಶ್ವರ ಮೂರ್ತಿಯುವ ಶೀರಭಾಗದಲ್ಲಿ ಶಿವಲಿಂಗ ಮತ್ತು ಕಿವಿಯ ಎರಡು ಭಾಗಕ್ಕೆ ನಾಗರ ಹೆಡೆ ಕಿಂವಿಯೋಲೆ ನೋಡಲ ಬಹು ಅರ್ಕಶಕವಾಗಿ ಮೇಲ್ಭಾಗದಲ್ಲೂ ನಾಗರ ಹಡೆ ಹೊಂದಿದ್ದು, ವಿಶೇಷ ಗಮನ ಸೆಳೆದ ಈ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಎಂದಿನಂತೆ ಡೊಳ್ಳು, ವಾದ್ಯ ವೈಭವಗಳೊಂದಿಗೆ ಗ್ರಾಮದ ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ಪ್ರಮುಖ ಭಾಗದಲ್ಲಿ ನಡೆಯಿತು. ಈ ವೇಳೆ ಭಕ್ತಾದಿಗಳು ಕಾಯಿ ಕರ್ಪೂರ ಬೆಳಗಿ ನೈವೇದ್ಯ ಅರ್ಪಿಸಿ ದರ್ಶನ ಪಡೆದರು.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಸಂಜೆ ಜಂಗಿ ಪೈಲ್ವಾನರ ಕುಸ್ತಿ ನಡೆದು ರಾತ್ರಿ ರಂಗು ರಂಗಿನ ಮದ್ದುಸುಡುವ ಕಾರ್ಯಕ್ರಮ ಗೀ ಗೀ ಪದಗಳು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದವು. ಜಾತ್ರೆಯ ಆರಂಭದ ಮೊದಲು ದಿನ ಸಾಂಪ್ರದಾಯದಂತೆ ಗ್ರಾಮದ ಸಿದ್ಧಣ್ಣಾ ಮಾಣಿಕರಾವ್ ದೇಶಮುಖರ ಮನೆಯಿಂದ ಪಲ್ಲಕ್ಕಿ ಸಿದ್ಧೇಶ್ವರ ದೇವಸ್ಥಾನಕ್ಕೆ ತಲುಪಿ ವಾಸ್ತವ್ಯದ ಬಳಿಕ ಜಾತ್ರೆಯ ಕೊನೆಯದಿನವಾದ ಗುರುವಾರ ಮೆರವಣಿಗೆ ಮೂಲಕ ಮಳರಳಿ ದೇಶಮುಖರ ಮನೆವರೆಗೆ ನಡೆಸಿ ಸಂಪನ್ನ ಕೈಗೊಳ್ಳಲಾಯಿತು.

ಜಾತ್ರೆಯ ಉತ್ಸವದಲ್ಲಿ ಗ್ರಾಮ ಸೇರಿದಂತೆ ನೆರೆ ಹೊರೆಯ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿ ಸಜ್ಜಕ ಹುಗಿ ಪ್ರಸಾದ ಸವಿದರು.

ಇದನ್ನೂ ಓದಿ: ಡಾ. ಬಸವರಾಜ ಗವಿಮಠ ಅವರ ಛಾಯಾಚಿತ್ರಗಳ ಪ್ರದರ್ಶನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here