ಸಂವಿಧಾನ ಬದಲಾವಣೆ ಮಾಡ ಹೊರಟರೆ‌ ಜನರ ಶವಗಳ ಮೇಲೆ ನಡೆದುಕೊಂಡು ಹೋಗಬೇಕಾಗುತ್ತದ: ಪ್ರಿಯಾಂಕ್ ಖರ್ಗೆ

0
26

ಕಲಬುರಗಿ: ಸಂಸತ್ತಿನಲ್ಲಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನವನ್ನು ಸಂಸತ್ತಿನಲ್ಲಿ ಮಂಡನೆ ಮಾಡುತ್ತಿರುವಾಗ ಹೊರಗಡೆ ಆರ್ ಎಸ್ ಎಸ್ ಸೇರಿದಂತೆ ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸಿ ಅಂಬೇಡ್ಕರ ಅವರು ಮಂಡಿಸಿರುವ ಸಂವಿಧಾನವನ್ನು ನಾವು ಒಪ್ಪಲ್ಲ ನಮಗೆ ಮನುಸ್ಮೃತಿನೇ ಬೇಕು ಎಂದು ಸಂವಿಧಾನದ ಪ್ರತಿಯನ್ನು ಸುಟ್ಟಿದ್ದರು.ಅಂತವರು ಈಗ ನಮಗೆ ದೇಶಪ್ರೇಮದ ಪಾಠ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವರಾದ ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಡೋಂಗರಗಾಂವ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ 131 ನೆಯ ಜಯಂತ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಇದನ್ನೂ ಓದಿ: ಸಂಭ್ರಮದ ಮಧ್ಯ ನಿರಗುಡಿ ಶ್ರೀ ಸಿದ್ಧೇಶ್ವರ ಜಾತ್ರೆ ಪಲ್ಲಕ್ಕಿ ಉತ್ಸವಕ್ಕೆ ತೆರೆ

ಪ್ರಸ್ತುತ ದೇಶದಲ್ಲಿ ವಾತಾವರಣ ಕಲುಷಿತಗೊಳ್ಳುತ್ತಿದೆ. ಧರ್ಮಗಳ ನಡುವೆ ಜಗಳ ತಂದಿಡುತ್ತಿದ್ದಾರೆ. ಅವರಿಗೆ ಜನರು ನೆಮ್ಮದಿಯಾಗಿರುವುದು ಬೇಕಿಲ್ಲ. ಸಂವಿಧಾನ‌ ಪಾಲನೆ‌ಯಂತೂ ಮೊದಲೇ ಬೇಕಿಲ್ಲ‌ ಹಾಗಾಗಿ‌ ಈಗಲೂ ಕೆಲ ಸಂಘಟನೆಗಳು ಸಂವಿಧಾನ ಬದಲಿಸುವ ಹುನ್ನಾರ ಮಾಡುತ್ತಿದೆ. ಅದು ಅಸಾಧ್ಯದ ಮಾತು. ನಾವು ಅದಕ್ಕೆ‌ಅವಕಾಶ ನೀಡುವುದೇ ಇಲ್ಲ ಅಂತಹ ಸ್ಥಿತಿ ಎದುರಾದರೆ ನಮ್ಮಂತ ಸಾವಿರಾರು ಜನರ ಶವದ ಮೇಲೆ ನಡೆದುಕೊಂಡು ಹೋಗಬೇಕಾಗುತ್ತದೆ ಎಂದು ಸವಾಲಾಕಿದರು.

ದೇಶದಲ್ಲಿ ಧರ್ಮ ರಕ್ಷಣೆಗೆ, ಗೋರಕ್ಷಣೆಗೆ ‌ನಮ್ಮ ಮಕ್ಕಳು ಬೇಕು. ಆದರೆ ಬಿಜೆಪಿಯ ನಾಯಕರ ಮಕ್ಕಳ ಉನ್ನತ ವಿದ್ಯಾಭ್ಯಾಸ ಮಾಡಬೇಕಾ? ಎಂದು ಪ್ರಶ್ನಿಸಿದ ಅವರು ಹಿಂದುತ್ವವಾದಿಗಳು ನಮ್ಮ ಮಕ್ಕಳನ್ನು ಧರ್ಮದ ಹೆಸರಲ್ಲಿ ಅವರ ಹೆಗಲಿಗೆ ಕೇಸರಿ ಶಾಲು ಹಾಕಿಸಿ ಬಳಸಿಕೊಳ್ಳುತ್ತಾರೆ. ಇಂತಹ ವಂಚನೆಗಳಿಂದ‌ ನಮ್ಮ ಮಕ್ಕಳು ದೂರವಿರಬೇಕು ಎಂದು ಎಚ್ಚರಿಸಿದರು.

ಬುದ್ದ ಬಸವ ಅಂಬೇಡ್ಕರ ಅವರ ತತ್ವಗಳ ಪಾಲನೆ ಮಾಡಬೇಕು ಅವರ ಆದರ್ಶಗಳೇ ಸಂವಿಧಾನದಲ್ಲಿ ಅಡಕವಾಗಿದೆ. ನೀವು ಸಂವಿಧಾನದ ಅಂಶಗಳ ಪಾಲನೆ ಮಾಡಬೇಕೆ ಹೊರತು ವ್ಯಕ್ತಿ ಪೂಜೆ ಮಾಡಬಾರದು. ಶಾಸಕ ಸಚಿವರಿಗೆ ಮಾನ ಸನ್ಮಾನದ ಅವಶ್ಯಕತೆ ಇಲ್ಲ. ನಮ್ಮನ್ನು ನೀವು ಆರಿಸಿ ಕಳಿಸಿದ್ದು ನಿಮ್ಮ ಸೇವೆ ಮಾಡಲು ಹೊರತೇ ನಮ್ಮನ್ನು ಸನ್ಮಾನಿಸಲು ಅಲ್ಲ ಎಂದರು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಪ್ರಬುದ್ದ ಹಾಗೂ ಸಮೃದ್ದ ಭಾರತ ಆಗಬೇಕಾದರೆ‌ ಶಿಕ್ಷಣದ ಅವಶ್ಯಕತೆ ಇದೆ. ಶಿಕ್ಷಣ ಪಡೆದುಕೊಳ್ಳಬೇಕಾದರೇ, ಬಾಬಾಸಾಹೇಬರ ಮತ್ತು ಬಸವಣ್ಣನವರ ತತ್ವಗಳ ಪರಿಪಾಲನೆ ಮಾಡಬೇಕು. ಮಹಿಳೆಯರಿಗೆ ಶಿಕ್ಷಣ ಕೊಡಿಸಿ ಎಂದು ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ಮಹಾನ್ ವ್ಯಕ್ತಿಗಳನ್ನು ಕೇವಲ ಜಾತಿಗೆ ಸೀಮಿತಿಗೊಳಿಸಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಅಂಬೇಡ್ಕರ, ಬಸವಣ್ಣನವರಂತ ದಾರ್ಶನಿಕರ ಜಯಂತಿಗಳನ್ನ ಆಯಾ ಏರಿಯಾಗಳಲ್ಲೇ ಆಚರಣೆ ಮಾಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಅಂಬೇಡ್ಕರ ಜಯಂತಿಯನ್ನು ಎಲ್ಲರೂ ಸೇರಿ ಆಚರಣೆ ಮಾಡಬೇಕು ಯಾಕೆಂದರೆ ಅದು‌ ಸಂವಿಧಾನದ ಆಚರಣೆಯಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವ್ಯಕ್ತಿಪೂಜೆ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ನೀವು ಎಲ್ಲಿಯವರಿಗೆ ವ್ಯಕ್ತಿಪೂಜೆ ಬಿಡುವುದಿಲ್ಲವೋ ಅಲ್ಲಿಯವರೆಗೆ ಪ್ರಬುದ್ದರಾಗಲು ಸಾಧ್ಯವಿಲ್ಲ ಎಂದರು.

ಎರಡನೆಯ ವಿಶ್ವ ಯುದ್ದವಾದ ನಂತರ‌ ಭಾರತವೂ ಒಟ್ಟು 35 ರಾಷ್ಟ್ರಗಳು ಸ್ವತಂತ್ರವಾದವು. ಅದರೆ ಭಾರತ ಮಾತ್ರ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದರೆ ಉಳಿದ ರಾಷ್ಟ್ರಗಳು ಸರ್ವಾಧಿಕಾರಿ ಆಳ್ವಿಕೆಗೆ ಒಳಪಟ್ಟವು. ನಾವು ಇನ್ನೂ ಸುಭದ್ರ ಪ್ರಾಜಾತಂತ್ರ ರಾಷ್ಟ್ರವಾಗಿ‌ಉಳಿದಿರುವುದಕ್ಕೆ ಸಂವಿಧಾನವೇ ಕಾರಣ ಎಂದು ಒತ್ತಿ ಹೇಳಿದರು.

ಇದನ್ನೂ ಓದಿ:ಕೆಯುಡಬ್ಲ್ಯೂಜೆ ಜಿಲ್ಲಾ, ರಾಜ್ಯ ಸಂಘದ ಪದಾರ್ಥಗಳ ಪ್ರತಿಜ್ಞಾವಿಧಿ ಸ್ವೀಕಾರ

ಸಂವಿಧಾನದ ರಚನೆ ಮಾಡುವ ಸಂದರ್ಭ ಬಂದಾಗ ಗಾಂಧೀಜಿ ಹಾಗೂ ನೆಹರು‌ ಚರ್ಚೆ ನಡೆಸಿ‌ ಏರ್ಲೆಂಡ್ ದೇಶದವರಿಂದ ಭಾರತದ ಸಂವಿಧಾನ ರಚನೆ‌ ಮಾಡಬೇಕೆಂದು ಮೊದಲು ಚರ್ಚೆ ನಡೆಸಿದರು. ಆದರೆ, ಅಂತಿಮವಾಗಿ ಡಾ ಬಾಬಾಸಾಹೇಬರನ್ನು‌ ಸಂವಿಧಾನ ರಚನೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿಲಾಯಿತು. ಸಂವಿಧಾನ ರಚನೆ ಮಾಡಿದ ನಂತರ ಈ‌ ಕುರಿತು ಎರಡು ವರ್ಷದ ಸುದೀರ್ಘ ಚರ್ಚೆ ನಡೆದು ಸಾವಿರಾರು ಪ್ರಶ್ನೆಗಳನ್ನು ಅಂಬೇಡ್ಕರ ಅವರಿಗೆ ಕೇಳಿ ಅವರಿಂದ ಸಮರ್ಪಕ ಉತ್ತರ ಪಡೆದ ನಂತರ ಸಂವಿಧಾನವನ್ನು ಜಾರಿಗೊಳಿಸಲಾಯಿತು ಎಂದು ಖರ್ಗೆ ಅವರು ಅಂದಿನ ಸ್ಥಿತಿಯನ್ನು ಮೆಲುಕು ಹಾಕಿದರು.

ಸಂಜಯ್ ಮಾಕಲ್ ಹಾಗೂ ಡಾ ಪುಟ್ಟಮಣಿ ದೇವಿದಾಸ ಅವರು ವಿಶೇಷ ಉಪನ್ಯಾಸ‌ ನೀಡಿದರು.

ವೇದಿಕೆಯ ಮೇಲೆ‌ ವೈಜನಾಥ ತಡಕಲ್, ವಿಜಯಕುಮಾರ ರಾಮಕೃಷ್ಣ, ಸಂಜಯ ಮಾಕಲ್, ಸುರೇಶ ವರ್ಮಾ, ಡಾ ಪುಟ್ಟಮಣಿ ದೇವಿದಾಸ, ಬಸವರಾಜ ಪಾಟೀಲ್, ಲಕ್ಷ್ಮೀಬಾಯಿ ರಾಠೋಡ, ಮೇಧಾವಿನಿ ಕಟ್ಟಿ ಹಾಗೂ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here