ದೋಸ್ತಿ ಸರಕಾರ ಖತಂ, ಬಿಜೆಪಿಗೆ ಬಹುಮತ, ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ

0
161

ಬೆಂಗಳೂರು: ಇಂದಿನ ವರೆಗೆ 14 ತಿಂಗಳಿನಿಂದ ಜಾರಿಯಲ್ಲಿದ್ದ ಮೈತ್ರಿ ಪಕ್ಷದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಸದನದ ವಿಶ್ವಾಸ ಕಳೆದುಕೊಳ್ಳುವ ಮೂಲಕ 18 ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಕ್ಕೆ ತೆರೆ ಬಿದ್ದಿತು.

ಮೊದಲು ದೋಸ್ತಿ ಸರ್ಕಾರದ ಪರವಾಗಿ ಇದ್ದವರ ಲೆಕ್ಕ ಮಾಡಲಾಯಿತು. ಇದಾದ ಮೇಲೆ ವಿಶ್ವಾಸ ಮತಕ್ಕೆ ವಿರುದ್ಧವಾಗಿ ಇದ್ದವರ ಲೆಕ್ಕ ಹಾಕಲಾಯಿತು. ಎಲ್ಲರ ಹೆಸರನ್ನು ಅಧಿಕಾರಿಗಳು ಬರೆದುಕೊಂಡು ಲೆಕ್ಕ ಹಾಕಿದರು.

Contact Your\'s Advertisement; 9902492681

ಸದನದ ಇಂದಿನ ಸಂಖ್ಯಾ ಬಲ

ಸದನದಲ್ಲಿ ಹಾಜರಿದ್ದವರು ಒಟ್ಟು ಸದಸ್ಯರು : 204

ಮೈತ್ರಿ ಸರಕಾದ ಪರ ಮತ : 99

ಬಿಜೆಪಿ ಪರ ಬಿದ್ದ ಮತಗಳು: 105

ಗೈರಾದವರು 2 ಪಕ್ಷೇತರರು ಸೇರಿ 20

ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಯ ವೇಳೆ ಒಟ್ಟು 20 ಶಾಸಕರು ಗೈರು ಹಾಜರಿ ಹಾಕಿದ್ದರು. ಕಾಂಗ್ರೆಸ್ 14, ಜೆಡಿಎಸ್ 3 ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರ ಜೊತೆ ಬಿಎಸ್ಪಿಯ ಎನ್ ಮಹೇಶ್ ಗೈರ ಹಾಜರಾಗಿದ್ದರು. ಇಂದು ದೋಸ್ತಿ ಪಕ್ಷದ ಒಟ್ಟು 99 ಶಾಸಕರು ಹಾಜರಾಗಿದ್ದರೆ ಬಿಜೆಪಿಯ 105 ಶಾಸಕರು ಹಾಜರಾಗಿದ್ದರು.

ವಿಶ್ವಾಸಮತಯಾಚನೆ ವೇಳೆ ಸರ್ಕಾರದ ಪರವಾಗಿ 99 ಮತಗಳು ಬಿದ್ದರೆ ವಿರುದ್ಧವಾಗಿ 105 ಮತಗಳು ಬಿದ್ದವು. ಮೂಲಕ ಸಿಎಂ ಸಲ್ಲಿಸಿದ್ದ  ವಿಶ್ವಾಸ ಮತಯಾಚನೆ ಬಿದ್ದು ಹೋಗಿದೆ.

ನಂತರ ಸಿಎಂ ಕುಮಾರಸ್ವಾಮಿ ರಾಜಭವನಕ್ಕೆ ತೆರಳಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಶಾಸರಕು ಮತ್ತು ಕಾಂಗ್ರೆಸ್ ಶಾಸಕರು ಜೊತೆಗೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here