ಬೆಂಗಳೂರು ನಗರದಲ್ಲಿ 144 ಜಾರಿ: ಪೊಲೀಸ್ ಕಮಿಷನರ್ ಅಲೋಕ್ ಕುಮಾರ್

0
101

ಬೆಂಗಳೂರು: ನಗರದಲ್ಲಿ ಸೆ. 144 ಜಾರಿಯಾಗಿದ್ದು, ಇಂದು ಸಂಜೆ 6 ಗಂಡೆಯಿಂದಲೇ ನಗರದ ಪಬ್, ಬಾರ್’ಗಳು ಬಂದ್ ಗೆ ನಗರ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಆದೇಶ ನೀಡಿದ್ದಾರೆ.

ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಹೆಚ್. ನಾಗೇಶ್ ಅವರು ನಗರದ ನಿತೀಶ್ ಅಪಾರ್ಟ್‍ಮೆಂಟ್ ನಲ್ಲಿರುವ ವಿಷಯ ತಿಳಿಯುತ್ತಿದ್ದಂತೆ ಮುಂದೆ ಆಗಮಿಸಿದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರರು ಒಳಗೆ ಪ್ರವೇಶಿಸಲು ಯತ್ನಿಸಿದ್ದರು. ಎರಡೂ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಯಿತು ಎನ್ನಲಾಗಿದ್ದು, ಅಪಾರ್ಟ್ ಮೆಂಟ್ ಪ್ರವೇಶಕ್ಕೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕುಳಿತ ಕೈ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿರುವ ಹೈಡ್ರಾಮ ನಡೆದಿತ್ತು.

Contact Your\'s Advertisement; 9902492681

ರಾಜ್ಯ ರಾಜಕೀಯ ಪಕ್ಷಗಳ ಕರ್ಯಕರ್ತರ ಜಟಾಪಟಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರುನಲ್ಲಿ ಸೆ.144 ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here