ಕಲಬುರಗಿ: ಜೇವರ್ಗಿ ತಾಲೂಕಿನಲ್ಲಿರುವ ಆಂದೋಲಾ ಗ್ರಾಮದಿಂದ ಅಣಬಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 3. 40 ಕಿಮೀ gಉದ್ದ ಹಾಗೂ 234. 31 ಲಕ್ಷ ರು ಮೊತ್ತದ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಜೇವರ್ಗಿ ಶಾಸಕರು ಹಾಗೂ ವಿಧಾನಸಭೆÉ ವಿರೋಧ ಪಕ್ಷ ಮುಖ್ಯ ಸಚೇತಕರು ಆಗಿರುವ ಡಾ. ಅಜಯ್ ಸಿಂಗ್ ಅಜಿಗಲ್ಲು ಇಟ್ಟರು.
ಕೆಎಸ್‍ಎಸ್‍ಡಿಪಿ ಪ್ಯಾಕೇಜ್ ಸಂಖ್ಯೆ 15. 40 ರಲ್ಲಿ ಈ ಕಾಮಗಾರಿ ಮಜೂರಾಗಿದ್ದು ಶೀಘ್ರವೇ ಗುಣಮಟ್ಟದ ಕಾಮಗಾರಿಗೆ ಡಾ. ಅಜಯ್ ಸಿಂಗ್ ಗುತ್ತಿಗೆದಾರರಿಗೆ ಹಾಗೂ ಸಂಬಂಧಪಟ್ಟಂತಹ ಇಂಜಿನಿಯರ್ ಅವರಿಗೆ ಸೂಚಿಸಿದರು.
ಇದನ್ನೂ ಓದಿ: ಶುದ್ಧ ಕುಡಿಯುವ ನೀರಿಗಾಗಿ ಸಿಎಂಗೆ ಮನವಿ ಸಲ್ಲಿಸಲು ಯತ್ನಿಸಿದ ಎಎಪಿ ಕಾರ್ಯಕರ್ತರ ಬಂಧನ
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ವಿಬಾಗ ಕಲಬುರಗಿ ಅಡಿಯಲ್ಲಿ 2021- 22 ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಜೇವರ್ಗಿ ಮತಕ್ಷೇತ್ರದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಗೌಡಪ್ಪಗೌಡ ಪೆÇೀಲಿಸ್ ಪಾಟೀಲ್, ಗುರಲಿಂಗಪ್ಪಗೌಡ ಮಾಲಿ ಪಾಟೀಲ್, ಸಂಗನಗೌಡ ಮಾಲಿ ಪಾಟೀಲ್, ಯಶವಂತಪ್ಪ ಹೊತಿನಮಡು, ಕಾಶಿಂ ಪಟೇಲ್ ಮುದಬಾಳ, ಕಾಶಿರಾಯಗೌಡ ಯಲಗೋಡ, ಮಲ್ಲಣ್ಣ ಲಕ್ಕನ್ನಿ, ಗೋವಿಂದ ರೆಡ್ಡಿ, ಗೀರಿಶ್ ಹವಾಲ್ದಾರ್, ನಬೀ ಕುಕನೂರ, ಮೈಲಾರಿ ಮಹೇಂದ್ರರ್ಕ, ಬಸವರಾಜ ದೇವದುರ್ಗ, ಮಕಬೂಲ್ ಜಮಾರ್ದಾ, ಸಿರಾಜ್ ಉದ್ಧಿನ್ ತಿರನ್ ದಾಜ್, ದಂಡಪ್ಪ ದಂಡಗುಂಡ, ಇತರರು ಉಪಸ್ಥಿತರಿದ್ದರು.